ಕಲಬುರಗಿ:ಕರ್ನಾಟಕ ರಾಜ್ಯದ ಅಹಿಂದ ಪ್ರಶ್ನಾತೀತ ನಾಯಕ ಮಾಜಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಅಭಿಮಾನಿಗಳು ಕಲಬುರಗಿ ಸಿದ್ದರಾಮಯ್ಯ (ಹೈಕೋರ್ಟ್) ವೃತ್ತದಲ್ಲಿ ಸಿದ್ದರಾಮಯ್ಯ ನವರ ಒಂಭತ್ತು ಅಡಿ ಎತ್ತರದ ಪುತ್ಥಳಿಯನ್ನು ರಾತ್ರೋರಾತ್ರಿ ನಿಲ್ಲಿಸಿದ್ದರು.ಅದೇ ದಿವಸ ರಾಜ್ಯದ ಮುಖ್ಯಮಂತ್ರಿ ಶ್ರೀ ಡಿಕೆ.ಶಿವಕುಮಾರ್ ರವರ ಕಾರ್ಯಕ್ರಮವೂ ಕಲಬುರಗಿಯಲ್ಲಿದ್ದ ಕಾರಣ ಅಂದು ಡಿಕೆಶಿ ಕಲಬುರಗಿಗೆ ತೆರಳಿದ್ದರು.

ಡಿಕೆಶಿ ಬರುವ ಮುಂಚೆಯೇ ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಸಿದ್ದರಾಮಯ್ಯ ನವರ ಪುತ್ಥಳಿಯನ್ನು ಯಾವುದೇ ಪರವಾನಗಿ ಪಡೆಯದೇ ನಿಲ್ಲಿದ್ದಾರೆಂದು ಆ ಒಂಭತ್ತು ಅಡಿಯ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಪುತ್ಥಳಿಯನ್ನು ಅಮಾನುಷ್ಯವಾಗಿ ಪಾಲಿಕೆಯ ಕಸ ವಿಲೇವಾರಿವಾಹಣದಲ್ಲಿ ಎತ್ತಿಹಾಕಿಕೊಂಡು ಹೋಗಿದ್ದು ಸಹಜವಾಗಿಯೇ ಅಹಿಂದವರ್ಗವನ್ನು ರೊಚ್ಚಿಗೇಳಿಸಿತ್ತು.

ಆ ದಿನದಿಂದ ಹಿಡಿದು ಇಲ್ಲಿಯ ವರೆಗೆ ರಾಜ್ಯದಾದ್ಯಂತ ಸರ್ಕಾರದ ಕ್ರಮ ಖಂಡಿಸಿ ಅಹಿಂದ ವರ್ಗ ಪ್ರತಿರೋಧ ವ್ಯಕ್ತಪಡಿಸುತ್ತಾ.ಸಿದ್ದರಾಮಯ್ಯ ನವರ ಪುತ್ಥಳಿಯನ್ನು ಅದೇ ಸ್ಥಳದಲ್ಲಿ ಮರುಸ್ಥಾಪಿಸಲು ಒತ್ತಾಯಿಸುತ್ತಾ ಬಂದಿದ್ದರೂ ರಾಜ್ಯ ಸರ್ಕಾರವಾಗಲಿ ಸ್ಥಳಿಯ ಪಾಲಿಕೆಯಾಗಲಿ ಮೌನವಹಿಸಿರುವುದು ಇಡೀ ಅಹಿಂದ ವರ್ಗದ ಕಿಚ್ಚಿಗೆ ತುಪ್ಪ ಸುರಿದಂತಾಗುತ್ತಿದೆ.
ಸಿದ್ದರಾಮಯ್ಯ ನವರು ಶುದ್ಧ ಪರಿಶುದ್ಧ,

ಬಡವರಪರ,ದೀನದಲಿತರಪರ,ಬಸವಣ್ಣ,ಅಂಬೇಡ್ಕರ್,ಬುದ್ದ,ಕನಕದಾಸರ ಆದರ್ಶಪಾಲಿಸುತ್ತಾ ಸೋಷಿತವರ್ಗದ ಗಟ್ಟಿ ದ್ವನಿಯಾಗಿ ಬಡವರಪರ ರಾಜ್ಯದಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿ ಗಳಲ್ಲಿ ಇವರು ಅತಿ ಹೆಚ್ಚು ಆಡಳಿತ ನಡೆಸಿದ ಕಾಲ ಅಧಿಕಾರ ನಡೆಸಿ ದಾಖಲೆ ನಿರ್ಮಿಸಿದ್ದಾರೆ.

ಇಂಥ ಜನಪರ ನಾಯಕನ ಪರ ಜನ ಸಹಜವಾಗಿಯೇ ಎದ್ದುನಿಂತು ಸರ್ಕಾರಕ್ಕೆ ಎಚ್ಚರಿಕೆ ಕೊಡುತಿದ್ದಾರೆ.ಅದರ ಭಾಗವಾಗಿಯೇ ಇಂದು ಕಲಬುರಗಿಯ ಜಿಲ್ಲಾ ಕುರುಬರ ಸಂಘಟನೆಯ ಮುಖಂಡತ್ವದಲ್ಲಿ ಅಹಿಂದ ವರ್ಗ ಕಲಬುರಗಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯಿಂದ ಪ್ರಮುಖ ರಸ್ತೆಗಳಮೂಲಕ ಪ್ರತಿಭಟನೆ ನಡೆಸಿ

ಜಿಲ್ಲಾಧಿಕಾರಿಗಳಕಚೇರಿಗೆ ಉರುಳು ಸೇವೆ ಮಾಡುತ್ತೆ ತೆರಳಿ ಮಾನ್ಯ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ಮರು ಸ್ಥಾಪಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿ ಸಿದರು.

(ವರದಿ:ಆಂಜನೇಯ ಡೊಳ್ಳಿನ್)

LEAVE A REPLY

Please enter your comment!
Please enter your name here