ವಿಜಯಪುರ:ಬಸವನ ಬಾಗೇವಾಡಿ ತಾಲೂಕಿನ ಮುತ್ತಿಗೆ ಗ್ರಾಮದ ಶ್ರೀ ಗುರುಪಾದ ಕೋಲ್ಯಾರ ಅವರ ಅಪ್ರಾಪ್ತ ಪುತ್ರಿ ರಕ್ಷಿತಾ ಕೋಲ್ಯಾರ ಅವರು ದಿನಾಂಕ ೨೩/೦೮/೨೦೨೬ ರಂದು
ರಾತ್ರಿ ಸುಮಾರು ೯:೦೦ ಗಂಟೆಯ ಸಮಯದಲ್ಲಿ ಮನೆಯಿಂದ ಕಾಣೆಯಾಗಿರುವ ಘಟನೆ ಅತ್ಯಂತ ದುಃಖಕರ
ಹಾಗೂ ಆತಂಕಕಾರಿ ಸಂಗತಿಯಾಗಿರುತ್ತದೆ.
ಬಾಲಕಿ ಮನೆಯಲ್ಲಿ ಕಾಣದಿರುವುದನ್ನು ಗಮನಿಸಿದ ಆಕೆಯ ತಾಯಿ ಸವಿತಾ, ಚಿಕ್ಕಮ್ಮ ಸಾವಿತ್ರಿ ಹಾಗೂ
ಚಿಕ್ಕಪ್ಪ ಶಿವಾನಂದ ಕೋಲ್ಯಾರ ಅವರು ತೀವ್ರವಾಗಿ ಹುಡುಕಾಟ ನಡೆಸಿದ ಸಂದರ್ಭದಲ್ಲಿ, ತೋಟದ ಕತ್ತಲ
ಪ್ರದೇಶದಲ್ಲಿ ಓರ್ವ ವ್ಯಕ್ತಿ ಓಡಿ ಹೋಗುತ್ತಿರುವುದು ಕಂಡುಬಂದಿದ್ದು, ಆತನನ್ನು ಹಿಡಿದು ವಿಚಾರಿಸಿದಾಗ ಆತನು
ಸಚಿನ್ ಕೋಲ್ಯಾರ ಎಂದು ತಿಳಿದುಬಂದಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ. ನಂತರ ಆತನನ್ನು
ಪೊಲೀಸರ ವಶಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಚಿನ್ ರಾಮಪ್ಪ ಕೋಲ್ಯಾರ, ಪರಶುರಾಮ ಸುರೇಶ ಕೋಲ್ಯಾರ,
ರುದ್ರಗೌಡ ತಂದೆ ಶ್ರೀಮಂತಗೌಡ ಪಾಟೀಲ್ ಹಾಗೂ ಇತರ ಕೆಲವು ವ್ಯಕ್ತಿಗಳ ಪಾತ್ರವಿರುವ ಕುರಿತು ಗಂಭೀರ
ಆರೋಪಗಳು ಕೇಳಿಬಂದಿವೆ. ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ನಂತರ ಆಕೆಯನ್ನು ಬೇವಿನ
ಮರಕ್ಕೆ ಉರುಳು ಹಾಕಿ ನೇಣುಗೇರಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪಗಳು ಸಹ ಕೇಳಿಬಂದಿದ್ದು, ಈ
ಕುರಿತು ಪೊಲೀಸರು ಸಂಪೂರ್ಣ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸುವುದು
ಅತ್ಯಂತ ಅಗತ್ಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಚಿನ್ ಹಾಗೂ ಪರಶುರಾಮ ಅವರನ್ನು ಬಂಧಿಸಿರುವುದಾಗಿ
ತಿಳಿದುಬಂದಿದ್ದರೂ, ರುದ್ರಗೌಡ ಶ್ರೀಮಂತಗೌಡ ಪಾಟೀಲ್, ಅಶ್ವಿನಿ ಪರಶುರಾಮ ಪವಾರ್ ಹಾಗೂ ಇತರ
ಆರೋಪಿಗಳ ಪಾತ್ರದ ಕುರಿತು ಸಮಗ್ರ ತನಿಖೆ ನಡೆಸಿ, ಕಾನೂನುಬದ್ಧವಾಗಿ ಅಗತ್ಯವಿದ್ದಲ್ಲಿ ಅವರನ್ನು ಕೂಡಲೇ
ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು ಎಂಬುದು ನಮ್ಮ ಸಮಿತಿಯ ಪ್ರಮುಖ ಆಗ್ರಹವಾಗಿದೆ.
ಈ ಪ್ರಕರಣದಲ್ಲಿ ಅಶ್ವಿನಿ ಪರಶುರಾಮ ಪವಾರ್ ಅವರ ಪಾತ್ರದ ಬಗ್ಗೆಯೂ ಗಂಭೀರ ಅನುಮಾನಗಳು
ಮತ್ತು ಆರೋಪಗಳು ವ್ಯಕ್ತವಾಗಿರುವುದರಿಂದ, ಮೋಬೈಲ್ ಪೋನ್
ಕರೆಗಳ ವಿವರಗಳು, ಸಂಬಂಧಿತ ಡಿಜಿಟಲ್ ಸಾಕ್ಷ್ಯಗಳು ಹಾಗೂ ಇತರ ತಾಂತ್ರಿಕ ಸಾಕ್ಷ್ಯಗಳನ್ನು ಕಾನೂನುಬದ್ಧ
ರೀತಿಯಲ್ಲಿ ಪರಿಶೀಲಿಸಿ, ಘಟನೆಯ ಹಿಂದಿರುವ ಸಂಪೂರ್ಣ ಸತ್ಯವನ್ನು ಹೊರತರಬೇಕೆಂದು ಗೃಹ ಸಚಿವರಿಗೆ ಒತ್ತಾಯಿಸಿದ್ದಾರೆ.
ಇದೇ ಸಂಧರ್ಭದಲ್ಲಿ ಇತ್ತೀಚೆಗೆ ಸಾಹೂಹಿಕ ಅತ್ಯಾಚಾರ, ಕೊಲೆ ಜರುಗಿದ ಬಿಜಾಪುರ ಜಿಲ್ಲೆಯ
ಬಸವನ ಬಾಗೇವಾಡಿ ತಾಲೂಕಿನ ಮುತ್ತಿಗೆ ಗ್ರಾಮದ ಪರಿಶಿಷ್ಟ ಪಂಗಡದ ಬಾಲಕಿ ರಕ್ಷಿತಾ ಕೋಲ್ಯಾರ ಮನೆಗೆ
ಕೋಲಿ, ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಲಕ್ಷಪ್ಪ ಜಮಾದಾರ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 50 ಸಾವಿರ ರೂಪಾಯಿ ಧನ ಸಹಾಯ ಮಾಡಲಾಯಿತು.
ನಮ್ಮ ಪ್ರಮುಖ ಬೇಡಿಕೆಗಳು:
೧. ಎಲ್ಲಾ ಆರೋಪಿಗಳ ಬಂಧನ: ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಲಾಗಿರುವ ರುದ್ರಗೌಡ
ಶ್ರೀಮಂತಗೌಡ ಪಾಟೀಲ್, ಅಶ್ವಿನಿ ಪರಶುರಾಮ ಪವಾರ್ ಸೇರಿದಂತೆ ಉಳಿದ ಎಲ್ಲಾ ಆರೋಪಿಗಳ
ಪಾತ್ರವನ್ನು ತನಿಖೆಗೊಳಪಡಿಸಿ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಾನೂನುಬದ್ಧವಾಗಿ ಕೂಡಲೇ ಕ್ರಮ
ಕೈಗೊಳ್ಳಬೇಕು. ೨. ನಿಷ್ಪಕ್ಷಪಾತ ತನಿಖೆ: ಯಾವುದೇ ರಾಜಕೀಯ, ಸಾಮಾಜಿಕ ಅಥವಾ ಇತರ ಯಾವುದೇ ಒತ್ತಡಕ್ಕೆ
ಒಳಗಾಗದೆ ಪ್ರಕರಣದ ತನಿಖೆಯನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ನಡೆಸಬೇಕು. ಅಗತ್ಯವಿದ್ದಲ್ಲಿ ಹಿರಿಯ
ಪೊಲೀಸ್ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು.
೩. ಅಆಖ ಹಾಗೂ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ: ಪ್ರಕರಣಕ್ಕೆ ಸಂಬAಧಿಸಿದ ಪ್ರಮುಖ ವ್ಯಕ್ತಿಗಳ
ಮೊಬೈಲ್ ಅಆಖ, ಅಚಿಟಟ ಆeಣಚಿiಟs, ಸ್ಥಳದ ಮಾಹಿತಿ ಹಾಗೂ ಲಭ್ಯವಿರುವ ಇತರ ಡಿಜಿಟಲ್
ಸಾಕ್ಷ್ಯಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಿ, ಘಟನೆಯ ಸಂಪೂರ್ಣ ಹಿನ್ನೆಲೆಯನ್ನು ಪತ್ತೆಹಚ್ಚಬೇಕು.
೪. ಸಂತ್ರಸ್ತ ಕುಟುಂಬಕ್ಕೆ ಪರಿಹಾರ: ಮೃತ ಬಾಲಕಿ ರಕ್ಷಿತಾ ಕೋಲ್ಯಾರ ಅವರ ಕುಟುಂಬಕ್ಕೆ ಸರ್ಕಾರದ
ವತಿಯಿಂದ ತಕ್ಷಣ ₹೫೦,೦೦,೦೦೦/- (ರೂ. ಐವತ್ತು ಲಕ್ಷ) ಪರಿಹಾರ ಧನವನ್ನು ಒದಗಿಸಬೇಕು ಹಾಗೂ
ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸರ್ಕಾರಿ ನೆರವು ಮತ್ತು ರಕ್ಷಣೆಯನ್ನು ಒದಗಿಸಬೇಕು.
೫. ತ್ವರಿತ ನ್ಯಾಯ: ಪ್ರಕರಣದ ತನಿಖೆಯನ್ನು ಯಾವುದೇ ಅನಗತ್ಯ ವಿಳಂಬವಿಲ್ಲದೆ ತ್ವರಿತವಾಗಿ
ಪೂರ್ಣಗೊಳಿಸಿ, ಕಾನೂನು ಪ್ರಕಾರ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ಸಂತ್ರಸ್ತ
ಕುಟುಂಬಕ್ಕೆ ನ್ಯಾಯ ದೊರಕುವಂತೆ ಮಾಡಬೇಕು.
೬. ಕುಟುಂಬಕ್ಕೆ ರಕ್ಷಣೆ: ಪ್ರಕರಣದ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬದ ಮೇಲೆ ಯಾವುದೇ ರೀತಿಯ ಒತ್ತಡ,
ಬೆದರಿಕೆ ಅಥವಾ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ, ಅಗತ್ಯವಿದ್ದಲ್ಲಿ ಕುಟುಂಬಕ್ಕೆ ಸೂಕ್ತ
ಪೊಲೀಸ್ ರಕ್ಷಣೆ ಒದಗಿಸಬೇಕು.
ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ಬಾಲಕಿಯ ಸಾವಿಗೆ ಸಂಬAಧಿಸಿದ ಈ ಪ್ರಕರಣವು ಅತ್ಯಂತ
ಗಂಭೀರ ಸ್ವರೂಪದ್ದಾಗಿದ್ದು, ಸಂತ್ರಸ್ತ ಕುಟುಂಬವು ನ್ಯಾಯಕ್ಕಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯತ್ತ
ಆಶಾಭಾವನೆಯಿಂದ ನೋಡುತ್ತಿದೆ. ಆದ್ದರಿಂದ ಮಾನ್ಯ ಗೃಹ ಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ
ಪರಿಗಣಿಸಿ, ಯಾವುದೇ ರಾಜಕೀಯ ಅಥವಾ ಇತರ ಪ್ರಭಾವಕ್ಕೆ ಒಳಗಾಗದೆ, ನಿಷ್ಪಕ್ಷಪಾತ ತನಿಖೆ ನಡೆಸುವಂತೆ
ಹಾಗೂ ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಮುಂದೆ ಸಮಾನವಾಗಿ ಕ್ರಮ ಕೈಗೊಳ್ಳುವಂತೆ
ಸಂಬAದಫಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಬೇಕೆಂದು ಕರ್ನಾಟಕ ಕೋಳಿ ಕಬ್ಬಲಿಗ Sಖಿ
ಹೋರಾಟ ಸಮಿತಿ ವತಿಯಿಂದ ಆಗ್ರಹಿಸುತ್ತೇವೆ.
ಒಂದು ವೇಳೆ ಪ್ರಕರಣದ ತನಿಖೆಯಲ್ಲಿ ಅನಗತ್ಯ ವಿಳಂಬವಾಗಿದ್ದಲ್ಲಿ ಅಥವಾ ಆರೋಪಿಗಳ ವಿರುದ್ಧ
ಕಾನೂನುಬದ್ಧ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ಕಂಡುಬAದಲ್ಲಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವ
ಉದ್ದೇಶದಿಂದ ನಮ್ಮ ಸಮಿತಿಯ ವತಿಯಿಂದ ಹಾಗೂ ವಿವಿದsಸಮಾಜಮುಖಿ ಮತ್ತು ಸಂಘಟನೆಗಳ
ಸಹಕಾರದೊಂದಿಗೆ ಪ್ರಜಾಪ್ರಭುತ್ವ ಮತ್ತು ಕಾನೂನುಬದ್ಧ ರೀತಿಯಲ್ಲಿ ಹೋರಾಟ ನಡೆಸುವುದು
ಅನಿವಾರ್ಯವಾಗುತ್ತದೆ. ಯಾವುದೇ ಅಹಿತಕರ ಪರಿಸ್ಥಿತಿ ಉಂಟಾಗದAತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ
ಮುಂಜಾಗ್ರತಾ ಕ್ರಮ ಕೈಗೊಂಡು, ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸಬೇಕೆಂದು ಈ ಮೂಲಕ ಮನವಿ
ಮಾಡಿಕೊಳ್ಳುತ್ತೇವೆ.
ಆದ್ದರಿಂದ ಮಾನ್ಯರು ಈ ಮನವಿಯನ್ನು ತುರ್ತು ಹಾಗೂ ಅತ್ಯಂತ ಗಂಭೀರ ಪ್ರಕರಣವೆಂದು
ಪರಿಗಣಿಸಿ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿ, ಪ್ರಕರಣದ ಸಂಪೂರ್ಣ
ಸತ್ಯವನ್ನು ಹೊರತಂದು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ಕರ್ನಾಟಕ ಕೋಳಿ ಕಬ್ಬಲಿಗ Sಖಿ
ಹೋರಾಟ ಸಮಿತಿ ವತಿಯಿಂದ ವಿನಮ್ರವಾಗಿ ಆಗ್ರಹಿಸುತ್ತೇವೆ.





