ಬೆಂಗಳೂರು:371 ಜೆ ಮೀಸಲಾತಿ ಅಡಿ ಬಿಟ್ಟು ಹೋದ ಪ್ರದೇಶವಾದ ವಿಜಯಪುರ ಜಿಲ್ಲೆಗೆ ಕಲ್ಯಾಣ ಕರ್ನಾಟಕ ಮೀಸಲಾತಿಗೆ ಸೇರಿಸಲು ಕೇಂದ್ರ ಸರಕಾರ ಕ್ಕೆ ಶಿಫಾರಸ್ಸು ಕಳಿಸಬೇಕೆಂದು ವಿಜಯಪುರದ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟವು ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಅಗ್ರಹಿಸಿದೆ
ಮೀಸಲಾತಿಗೆ ಆಗ್ರಹಿಸಿ ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರಿಗೆ ಒಕ್ಕೂಟದ ಅಧ್ಯಕ್ಷ ವಿನೋದ ಖೇಡ ಅವರು ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ವಿನೋದ ಖೇಡ ಅವರು ಮಾತನಾಡಿ ಅಖಂಡ ಜಿಲ್ಲೆ ರಾಜಾಡಳಿತ ಕಾಲದಲ್ಲಿ ಹೈದ್ರಾಬಾದ್ ನಿಜಾಮನ ಆಡಳಿತದಲ್ಲಿತ್ತು ಎಂಬುವುದಕ್ಕೆ ಸರ್ಕಾರದಿಂದ ಪ್ರಕಟಗೊಂಡ ಗೆಜಿಟಿಯರ್‌ನಲ್ಲಿ ದಾಖಲಾಗಿದೆ. ಕಿ.ಶ. 1744 ರಲ್ಲಿ ಹೈದ್ರಾಬಾದಿನ ನಿಜಾಮನು ಕೃಷ್ಣಯ ಉತ್ತರದ ಭಾಗದ ಆಡಳಿತದ ಹೊಣೆಯನ್ನು ನಾಶಿರ ಜಂಗನಿಗೂ, ದಕ್ಷಿಣದ ಬಾದಾಮಿ ಬಾಗಲಕೋಟೆ ಗ್ರಾಮದ ಸವಣೂರಿನ ನವಾಬನ ಆಡಳಿಕ್ಕೆ ನೀಡಿದ್ದ ಕ್ರಿ.ಶ. 1746 ರಲ್ಲಿ ಸವಣೂರಿನ ನವಾಬನು ಮರಾಠಾ ಪೇಶ್ವೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಸದರಿ ಪ್ರದೇಶಗಳನ್ನು ಅವರಿಗೆ ಬಿಟ್ಟುಕೊಟ್ಟಿದ್ದರ ಕುರಿತು ಅಧಿಕೃತ ಸರಕಾರಿ ದಾಖಲೆಗಳಿವೆ,ಕಲ್ಯಾಣರ ಚಾಲುಕ್ಯರ ಕಾಲದಿಂದ ವಿಜಯಪುರ ಜಿಲ್ಲೆ ಕಲ್ಯಾಣ ನಾಡಿನಲ್ಲಿಯೇ ಇತ್ತು. ಈಗಾಗಲೇ ಸಾರಿಗೆ ವ್ಯವಸ್ಥೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಡಿ ಇದೆ. ನ್ಯಾಯಾಂಗ ವ್ಯವಸ್ಥೆ ಕೂಡಾ ಕಲ್ಬುರ್ಗಿ ಉಚ್ಛ ನ್ಯಾಯಾಲಯದಡಿ ಬರುತ್ತದೆ. ಹೀಗಿದ್ದರೂ ಕೂಡ. ಜಿಲ್ಲೆಯನ್ನು ಕಲ್ಯಾಣ ಕರ್ನಾಟಕದಡಿ ಸೇರಿಸದೆ ಇರುವುದರಿಂದ ವಿಜಯಪುರ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಂಜುಂಡಪ್ಪ ವರದಿ ಪ್ರಕಾರ ವಿಜಯಪುರ ಜಿಲ್ಲೆ ಕೂಡಾ ಹಿಂದುಳಿದಪ್ರದೇಶವಾಗಿದ್ದು ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಇಲ್ಲಿನ ಜನಸಮೂಹವು ಅತ್ಯಂತ ಹಿಂದುಳಿದಿರುತ್ತಾರೆ.
ಸದರಿ ನಮ್ಮ ಅಖಂಡ ವಿಜಯಪುರ ಜಿಲ್ಲೆ ಹೈದ್ರಾಬಾದ ನಿಜಾಮನ ಆಡಳಿತದಲ್ಲಿ ಇದ್ದ ಬಗ್ಗೆ ಅಧಿಕೃತ ಸರ್ಕಾರಿ ದಾಖಲೆಗಳಿದ್ದರೂ ಕೂಡಾ 371 ಜೆ ಮೀಸಲಾತಿ ಅಡಿ ಸೇರಿಸದೆ ಇರುವುದರಿಂದ ನಮ್ಮ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಹೇಳಿದ ಅವರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಮ್ಮ ಸಂಘಟನೆ ಹಾಗೂ ಕರ್ನಾಟಕ ರಾಜ್ಯ ಪದವೀಧರರ ಒಕ್ಕೂಟ ಸೇರಿದಂತೆ ಜಿಲ್ಲೆಯ ಸಂಘ ಸಂಸ್ಥೆಗಳು ಧ್ವನಿ ಎತ್ತಿದಾಗ ವಿಜಯಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಜಿಲ್ಲೆಯನ್ನು ಮೀಸಲಾತಿಯಡಿ ಸೇರಿಸುವ ಭರವಸೆ ನೀಡಿತ್ತು ಇದು ಜಿಲ್ಲೆಯ ಜನರಲ್ಲಿ ಆಶಾಭಾವನೆ ಮೂಡಿಸಿತ್ತು ಆದರೆ ಇಲ್ಲಿಯವರೆಗೆ ಮೀಸಲಾತಿ ಕಲ್ಪಿಸದೆ ಇರುವುದರಿಂದ ನಮ್ಮ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ.
ಕೂಡಲ ತಾವು 371 ಜೆ ಮೀಸಲಾತಿ ಅಡಿ ಬಿಟ್ಟು ಹೋದ ಪ್ರದೇಶವಾದ ವಿಜಯಪುರ ಜಿಲ್ಲೆಗೆ ಪ್ರಾದೇಶಿಕ ಮೀಸಲಾತಿ ಅಡಿ ಸೇರಿಸಲು ತಮ್ಮ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ಭಾರತ ಸರಕಾರಕ್ಕೆ ಶಿಫಾರಸ್ಸು ಕಳಿಸಿ ವಿಜಯಪುರ ಜಿಲ್ಲೆಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.





