ವಿಜಯಪುರ:ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆ, ವಿಜಯಪುರ ಜಲನಗರದ ಮಕ್ಕಳಿಗೆ ಧೀಮಂತೆ “ಹಿರಿಯ ಸಾಹಿತಿ ಡಾಕ್ಟರ್ ಸರಸ್ವತಿ ಚಿಮ್ಮಲಗಿ”ಯರ ಆದರ್ಶ ವ್ಯಕ್ತಿತ್ವ, ಸತತ ಪ್ರಯತ್ನ, ನಿರಂತರ ಓದು ಸಾಧಿಸುವ ಛಲ ಎಲ್ಲವೂ ಮಕ್ಕಳಿಗೆ ದಾರಿದೀಪವಾಗಲೆಂಬ ಸದಾಶಹೊತ್ತು. ಶಾಲಾ ಮಕ್ಕಳನ್ನು ಕರೆದೊಯ್ದು ಪರಿಚಯಿಸಿ ದರ್ಶನ, ಮಾರ್ಗದರ್ಶನ! ನೀಡಲಾಯಿತು.

ವಿಜಯಪುರದ ಹಿರಿಯ ಸಾಹಿತಿಗಳಾದ ಡಾ|| ಸರಸ್ವತಿ ಚಿಮ್ಮಲಗಿ ಅವರ ಸಾಧನೆಯ ಹಾದಿ ಅವರು ಬೆಳೆದು ಬಂದ ರೀತಿ ಕಷ್ಟದಲ್ಲೂ ಹಲವಾರು ಸಾಧನೆ ಮಾಡಿದ ಧೀಮಂತೆ. ಅವರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಅಳವಡಿಸಿಕೊಳ್ಳುವ ಉದ್ದೇಶದಿಂದ ಶ್ರೀ ಬಿ. ಎಂ ಪಾಟೀಲ ಪಬ್ಲಿಕ್ ಶಾಲೆಯ ಮಕ್ಕಳನ್ನು ಸರಸ್ವತಿ ಚಿಮ್ಮಲಗಿ ಮೇಡಂ ಮನೆಗೆ ಭೇಟಿ ಮಾಡಿಸಲಾಯಿತು. ಅವರ ಬದುಕನ್ನು ಹತ್ತಿರದಿಂದ ತಿಳಿದು ಅವರು ಮಕ್ಕಳ ಮುಂದಿನ ಭವಿಷ್ಯಕ್ಕೆ ಸ್ಪೂರ್ತಿಯಾಗಲಿ ಎಂಬ ಆಶಯದೊಂದಿಗೆ ಪ್ರತ್ಯಕ್ಷ ತೋರಿಸಲಾಯಿತು.ಜತೆಗೆ ಅವರ ಮನೆಯ ಬ್ಱಹತ್ ಗ್ರಂಥಾಲಯ ನೋಡುತ್ತಾ ಮಕ್ಕಳು ಸಂತೋಷ ಪಟ್ಟರು. ಮೊಬೈಲ್ ಯುಗದಲ್ಲೂ ಅವರ ಪುಸ್ತಕ ಕಾಳಜಿ ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಸ್ಪೂರ್ತಿದಾಯಕವಾಯಿತು.

ಅವರ ಆದರ್ಶ ವ್ಯಕ್ತಿತ್ವ, ಸತತ ಪ್ರಯತ್ನ, ನಿರಂತರ ಓದು ಸಾಧಿಸುವ ಛಲ ಎಲ್ಲವೂ ಮಕ್ಕಳಿಗೆ ದಾರಿದೀಪವಾದರೆ, ಅವರ ಚೈತನ್ಯ ತುಂಬುವ ಮಾತುಗಳು ಓದಿನ ಬಗ್ಗೆ ತಿಳಿಸಿದ ರೀತಿ ಮಕ್ಕಳಿಗೆ ಮನಮುಟ್ಟುವಂತಿತ್ತು. ಮಕ್ಕಳ ಜೊತೆ ಆಗಮಿಸಿದ ಶಿಕ್ಷಕ ಬಳಗಕ್ಕೆ ಸನ್ಮಾನಿಸಿ ಗೌರವದಿಂದ ಮಾತನಾಡಿ ಹೀಗೆ ಮಕ್ಕಳಿಗೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳನ್ನು ಏರ್ಪಾಡು ಮಾಡುವದರಿಂದ ಮಕ್ಕಳಲ್ಲಿ ಸ್ರಜನಶೀಲತೆ ಬೆಳೆಯುವುದು ಎಂದು ತಮ್ಮ ಭೇಟಿಗಾಗಿ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಡಾ|| ಸರಸ್ವತಿ ಚಿಮ್ಮಲಗಿ. ಹಾಗೂ ಅವರ ಪ್ರೀತಿಯ ಕುಟುಂಬದವರು ಹಾಗೂ ಶಾಲೆಯ ಕನ್ನಡ ವಿಭಾಗದ ವಿದ್ಯಾರ್ಥಿಗಳು, ಶ್ರೀಮತಿ. ಜಯಾ ಗಲಗಲಿ. ಇಂದಿರಾ ಬಿದರಿ. ಮೀರಾ ಎಂ. ಸಂಗನಗೌಡ ಪಾಟೀಲ ದಶರಥ ಘಾಟಗೆ. ಐಶ್ವರ್ಯ ಕುಲಕರ್ಣಿ. ಸಿದ್ದು ಇಜೇರಿ ಉಪಸ್ಥಿತಿತರಿದ್ದರು. ಒಟ್ಟಾರೆ ಕಾರ್ಯಕ್ರಮ ಮಕ್ಕಳಿಗೆ ಮಾರ್ಗದರ್ಶನವಾಗುವಂತಿತ್ತು.(ವರದಿ:ಇಂದಿರಾ ಬಿದರಿಯವರು ಶಿಕ್ಷಕಿ)





