ಬೆಂಗಳೂರು-ಆಕಾಶವಾಣಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನೌಕರರ ಕಲ್ಯಾಣ ಸಂಘದ ವತಿಯಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯನ್ನು ಏಪ್ರಿಲ್ 22 ರ ಬುಧವಾರ ಬೆಂಗಳೂರು ಆಕಾಶವಾಣಿ ಆವರಣದಲ್ಲಿ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ಆಯುಷ್ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಕಮಲಾ ಬಾಯಿ. ಬಿ, ಬೆಂಗಳೂರು ಜಿ.ಎಸ್‌.ಟಿ, ಸಹಾಯಕ ಆಯುಕ್ತರಾದ ಕೆ. ಮಂಜಪ್ಪನ್, ಲೇಖಕ ಮತ್ತು ವಿಮರ್ಶಕ ಡಾ. ರವಿಕುಮಾರ್ ನೀಹಾ ಮಾತನಾಡಿದರು.

ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕರಾದ ಹನುಮಂತ್ .ಎ, ಬೆಂಗಳೂರು ಆಕಾಶವಾಣಿಯ ಉಪ ಮಹಾನಿರ್ದೇಶಕರಾದ ಸಂಜೀವ್ ಕೆ.ಪಿ, ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಎ. ಎಸ್. ಶಂಕರನಾರಾಯಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷ ರಾದ ಡಿ. ಸಿದ್ದಲಿಂಗಯ್ಯ ಸ್ವಾಗತಿಸಿದರು.
ಉಪಾಧ್ಯಕ್ಷರಾದ ಜೆ. ರಘುನಾಥನ್ ವಂದಿಸಿದರು.

ಇದೇ ಸಂದರ್ಭದಲ್ಲಿ ದೂರದರ್ಶನ ಕೇಂದ್ರದ ನಿರ್ದೇಶಕ ಚಿನ್ನ ಸ್ವಾಮಿ, ಆಕಾಶವಾಣಿಯ ವಾರ್ತಾವಿಭಾಗದ ಮುಖ್ಯಸ್ಥರಾದ ಸುಹಾಸ್, ಉಪನಿರ್ದೇಶಕರಾದ ಶಿವಶಂಕರ್, ಎನ್ ರಾಮಾಂಜನಪ್ಪ, ಸಹಾಯಕ ನಿರ್ದೇಶಕರಾದ ನೂತನ ಎಸ್ ಕದಂ, ಕೆ ಎಲ್ ರಾಜೇಶ್ವರಿ, ಎ ವಿ ವಿನೋದ್ ಕುಮಾರ್, ವೆಂಕಟೇಶ್, ಹಿರಿಯ ಆಡಳಿತಾಧಿಕಾರಿಗಳಾದ ಬಿ ಎನ್ ಅಶ್ವಿನಿ, ಎಸ್ ಶಿವಕುಮಾರ್, ಎಮ್ ಎನ್ ಪ್ರಸಾದ್, ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥೆ ಎಚ್ ಎನ್ ಆರತಿ ಸೇರಿದಂತೆ ಪ್ರಸಾರ ಭಾರತಿಯ ಅನೇಕ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಹೊಂಬೆಗೌಡ ಮತ್ತು ತಂಡದವರು ಜಾಗೃತಿ ಗೀತೆಗಳನ್ನು ಹಾಡಿದರು.

LEAVE A REPLY

Please enter your comment!
Please enter your name here