ಹಿಂದೂ ಜೈ ಭೀಮ್ ಸೇನೆ ಹಾಗೂ ಲಿಯೋ ಮತ್ತು ಸಾರಿಕಾ ಸಮಾಜ ಸೇವಕರು ಜಂಟಿಯಾಗಿ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ 135 ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಬೆಂಗಳೂರಿನ ಚೆಲುವಾದಿಪಾಳ್ಯ ಹಾಗೂ ಗೂಡ್ ಸೆಡ್ ರಸ್ತೆಯ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬೈಕ ರ್ಯಾಲಿ ನೆಡೆಸಲಾಯಿತು. ಎರಡು ಸಾವಿರ ಮಂದಿಗೆ ಸಂವಿಧಾನ ಪೀಠಿಕೆಯನ್ನು ಹಂಚಲಾಯಿತು.
ಅಂಬೇಡ್ಕರ್ ಜಯಂತಿ ‌ಅಂಗವಾಗಿ ವಿಶೇಷ ಅನ್ನದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರು‌ನಗರ ಮಾಜಿ ಪೋಲಿಸ್ ಆಯುಕ್ತ ಭಾಸ್ಕರ್ ರಾವ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷರು, ಬಿಬಿಎಂಪಿ ಮಾಜಿ ಸದಸ್ಯ ಸಂಪಂಗಿ ರಾಜ್, ಲಿಯೊ ಮತ್ತು ಸಾರಿಕಾ (ಸಮಾಜ ಸೇವಕರು) ಮತ್ತು ಹಿಂದೂ ಜೈ ಭೀಮ್ ಸೇನೆಯ ಸಂಸ್ಥಾಪಕರು ಅಧ್ಯಕ್ಷ ಚಂದ್ರಶೇಖರ್ (ಕೋಟೆ ಶೇಕಿ) ಭರತ್ ಕುಮಾರ್ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ (ಸಮಾಜ ಸೇವಕರು) ಹಿಂದೂ ಜೈ ಭೀಮ್ ಸೇನೆ ಸಂಘಟನೆಯ ರಾಜ್ಯ ಕಾನೂನು ಸಲಹೆಗಾರ ಕೃಷ್ಣ, ಅಖಿಲ ಕರ್ನಾಟಕ ಜೈ ಭೀಮ್ ಅಹಿಂದ ಹೋರಾಟ ಸಮಿತಿಯ ಅಧ್ಯಕ್ಷ ಡಾ ಆನಂದ್ ಹಾಗೂ ಮತ್ತು ಹಲವಾರು ಪದಾಧಿಕಾರಿಗಳು. ಕಾರ್ಯಕರ್ತರು ಹಾಜರಿದ್ದರು.

LEAVE A REPLY

Please enter your comment!
Please enter your name here