ದಾವಣಗೆರೆ:ದಾವಣಗೆರೆ ದಕ್ಷಿಣದಲ್ಲಿ ಅಲ್ಪಸಂಖ್ಯಾತರು ಮತ್ತು ದಲಿತ ಹಿಂದುಳಿದ ಮತದಾರರಿದ್ದಾರೆಂದು ಬೀಗುತಿದ್ದ ಕಾಂಗ್ರೆಸ್ ಗೆ ಈಗ ದೊಡ್ಡ ತಲೆ ನೋವಾಗಿದೆ.ದಾವಣಗೆರೆಯ ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ವಿರೋಧಿ ಎನ್ನುವದಕಿಂತ ಹೆಚ್ಚಾಗಿ ಶಾಮನೂರು ಅವರ ವಿರುದ್ಧ ಮಾತುಗಳು ಕೇಳಿಬರುತ್ತಿವೆ.ಶಾಮನೂರು ಕುಟುಂಬದಲ್ಲಿ ಬೇರೆಯಾರನ್ನಾದರೂ ನಿಲ್ಲಿಸಿದ್ದರೆ ಇಷ್ಟು ವಿರೋಧವ್ಯಕ್ತವಾಗುತ್ತಿರಲಿಲ್ಲಾ.ರಾಜಕೀಯ ಗಂಧಗುರಿಗೊತ್ತಿಲ್ಲದ ಸಮರ್ಥ ಈ ಸ್ಥಾನಕ್ಕೆ ಇನ್ನೂ ಅರ್ಹನಲ್ಲಾ ಎಂದುಜನಾಭಿಪ್ರಾಯ ಆದರೆ ಶಾಮನೂರು ಮಲ್ಲಿಕಾರ್ಜುನ ರವರಿಗೆ ದಾಖಲೆ ಬರೆಯುವ ಹುಚ್ಚು. ಅದೇನಂದರೆ ಅವರ ತಂದೆ ವಿಧಾನಸಭೆಯ ಅತ್ಯಂತ ಹಿರಿಯ ಸದಸ್ಯರಾಗಿದ್ದರು ಈಗ ಅತ್ಯಂತ ಕಿರಿಯ ಸದಸ್ಯರೂ ತಮ್ಮ ಮಗನಾಗಿ ದಾಖಲೆ ಬರೆಯುವ ತವಕ ಹೆಚ್ಚಾದಂತೆ ಕಾಣುತ್ತದೆ.ಚುನಾವಣೆ ಘೋಷಣೆಗೂ ಮೊದಲು ಸಮರ್ಥ ರನ್ನ ಅಭ್ಯರ್ಥಿ ಮಾಡ್ತಿರಾ ಎಂದು ಕೇಳಿದಾಗ ಮುತ್ತಿನಂಥ ಮಾತೊಂದನ್ನ ಹೇಳಿದ್ದರು ಹೊಟ್ಟೆಗೆ ಹಿಟ್ಟಾಕೊರುಬೇಕಲ್ಲಪಾ ಬಿಜಿನೆಸ್ ನೋಡ್ಕೊಳ್ಳಿ ಎಂದಿದ್ದರು.ಇದು ಬಹಳ ಸೂಕ್ತವಾದ ಮಾತಾಗಿತ್ತು.ಆದರೆ ಅದೇಕೋ ಮನಸ್ಸು ಬದಲಾಯಿಸಿ ತಾಯಿ ಸಂಸದೆ,ತಂದೆ ಮಂತ್ರಿ ಮಗ ಮತ್ತೆ ಶಾಸಕನಾಗಬೇಕೆಂಬ ದುರಾಶೆ ಅದುಯಾಕೆ ಹುಟ್ಟಿತೂ ಗೊತ್ತಿಲ್ಲಾ.ನಾನು ಇವರ ತೀರ್ಮಾನವನ್ನು ದುರಾಶೆ ಎಂದು ಕರೆಯುತ್ತೇನೆ ಕಾರಣ ಕುಟುಂಬ ರಾಜಕಾರಣ ಎಂದು ಹೇಳಲು ಸಾಧ್ಯವಿಲ್ಲಾ ಯಾಕಂದರೆ ಎಲ್ಲಾರಾಜಕೀಯಪಕ್ಷಗಳೂ ಮತ್ತು ರಾಜಕೀಯ ಪಕ್ಷಗಳಮುಖಂಡರುಗಳಿಗೆ ಹೀಗೆ ಹೇಳಿವಿರೋಧಿಸಲು ಯಾವೊಬ್ಬನಿಗೂ ನೈತಿಕತೆ ಉಳಿಸಿಕೊಂಡಿಲ್ಲಾ.ಇನ್ನು ಈ ರಾಜಕಾರಣಿಗಳ ಅರೆಬೆಂದ ಹಿಂಬಾಲಕರುಗಳು ಕೆಲವರು ಈ ಮಾತುಗಳನ್ನಾಡುತ್ತಾರೆ ಆದರೆ ತಾವು ಆಕಾಶಕ್ಕೆ ಉಗುಳಿದರೆ ತಮ್ಮ ಮುಖಕ್ಕೇ ಸಿಡಿಯುತ್ತದೆ ಎನ್ನುವ ಕನಿಷ್ಠ ಜ್ಞಾನ ಇಲ್ಲದ ಅವಿವೇಕಿ ಬಕೇಟ್ ಹಿಂಬಾಲಕರು ಕೆಲವರು ಇದ್ದೇ ಇರ್ತಾರೆ ಎಲ್ಲಾ ರಾಜಕಾರಣಿಗಳಹಿಂದೆ. ಆದರೆ ಈ ಬಾರಿ ದಕ್ಷಿಣದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಅನ್ನುವುದಕಿಂತ ಹೆಚ್ಚಾಗಿ ಶಾಮನೂರು ಕುಟುಂಬ ವಿರೋಧಿಅಲೆ ಹೆಚ್ಚಾಗಿ ಕಾಣಿಸುತ್ತಿದೆ.ಶಾಮನೂರು ಕುಟುಂಬ ರಾಜಕೀಯ ವಿರೋಧ ಇದೇನು ಹೊಸದಲ್ಲಾ ಸುಮಾರು ವರ್ಷಗಳಿಂದ ವಿರೋಧ ಇದ್ದೇ ಇದೆ.ಆದರೆ ಶಿವಶಂಕರಪ್ಪನವರ ಜನಪರ ಕಳಕಳಿ ಹಲವು ವಿರೋಧಿಗಳ ಬಾಲಮುದುರಿಕೊಂಡಿರುವಂತೆ ಮಾಡ್ತಿತ್ತು.ಆದರೆ ಈಗ ಆ ಪರಿಸ್ಥಿತಿ ಇಲ್ಲಾ.ಮಂತ್ರಿ ಮಲ್ಲಣ್ಣನ ಪಡೆ ಎಂದೂ ಜನಪರವಿಲ್ಲಾ ಅವರೇನಿದ್ದರೂ ಶಾಮನೂರು ಮನೆಗಳಮುಂದೆ ಹಿರೋಗಳು ವಾರ್ಡಗಳಲ್ಲಿ ಅವರ ಹೆಸರುಗಳೇನು ಅಷ್ಟೊಂದು ಜನಮೆಚ್ಚುಗೆಯಿಲ್ಲಾ.ಶಿವಶಂಕರಪ್ಪನವರ ನಾಮದ ಬಲದಿಂದ ಎಲ್ಲವೂ ಎಲ್ಲರೂ ಸಹಿಸಿಕೊಂಡು ಹೋಗ್ತಿದ್ದರು.ಈಗ ಬದಲಾಗಿದೆ.ಈಗ ಸಮರ್ಥ ಗೆಲುವು ಸಾಧಿಸಬೇಕಾದರೆ ಪಕ್ಷಬೇಧಮರೆತು ಒಂದು ವರ್ಗದ ಮತಗಳು ಬಂದರೆ ಮಾತ್ರ ಗೆಲುವುಕಾಣಬಹುದು.ಆ ವರ್ಗ ಶಾಮನೂರರ ಪರ ಎಂದೂ ಮತ ನೀಡಿಲ್ಲಾ.ಶಾಮನೂರುರವರಿಗೆ ಅಹಿಂದ ಮತದಗೆಲುವು ಆದರೆ ಪ್ರಿತಿಮಾತ್ರ ಆ ವರ್ಗದಪರನೇ ಇತ್ತು ಈಗ ಆ ವರ್ಗ ಅನಿವಾರ್ಯವಾಗಿ ಇವರಿಗೆ ಮತ ನೀಡಿದರೆ ಮಾತ್ರ ಸಾಧ್ಯ.ಪಕ್ಷದ ಮತಗಳನ್ನು ನಂಬುವ ಸ್ಥಿತಿಯಲ್ಲಿ ಇಲ್ಲಾ ಇದಕ್ಕೆ ಬಹಳ ಕಾರಣಗಳಿವೆ.ಅಲ್ಪಸಂಖ್ಯಾತರ ಮತ ವಿಭಜನೆ ಸಾಧ್ಯತೆ ಇದೆ.ಮತ್ತು ಜಾತಿಗಣತಿ ವಿಚಾರದಲ್ಲಿ ಶಾಮನೂರು ನಡೆಯಿಂದಾಗಿ ಅಹಿಂದ ವರ್ಗದ ಬಹುತೇಕ ಸಮಾಜಗಳು ಅಸಮಾಧಾನಗೊಂಡಿವೆ.ಇವರ ಗೆಲುವು ಆದರೂ ಕೂಡಾ ಈ ಮೊದಲು ಹೇಳಿದ ಹಾಗೆ ಒಂದು ವರ್ಗದ ಜನ ಪಕ್ಷಮರೆತು ಇವರಿಗೆ ಮತನೀಡಬೇಕು ಮತ್ತು ಇತರೆ ಅಹಿಂದ ದವರು ಬೆರಳೆಣಿಯಷ್ಟು ಅವರು ತಮ್ಮ ಸ್ವಹಿತಾಶಕ್ತಿಗಾಗಿ,ಸ್ವಾರ್ಥ ಸಾಧನೆಗಾಗಿ ಸದಾ ಅವರ ಹಿಂದೆ ಜೈಕಾರ ಹಾಕುತ್ತಾ ಸ್ವಾಮಿನಿಷ್ಠೆ ತೋರುವಕೆಲವರಿಂದ.ಇನ್ನು ಕೆಲವು ಆರ್ಥಿಕ, ಸಾಮಾಜಿಕ,ಶೈಕ್ಷಣಿಕವಾಗಿ ಸಬಲರಲ್ಲದ ಮತ್ತು ಕೆಲವುಸಂಘಟನೆಗಳು ಅಂದರೆ ಜನಪರ ಅಭಿವೃದ್ಧಿ ಪರ ಸಂಘಟನೆಗಳಲ್ಲದ ಇತರೆ ಇವುಗಳಿಂದ ಪ್ರಯಾಸದ ಗೆಲುವು ಸಾಧಿಸಬಹುದಾಗಿದೆ.

LEAVE A REPLY

Please enter your comment!
Please enter your name here