ಬೆಳಗಾವಿ : ಡಿಸೆಂಬರ್ 8 ರಿಂದ 19 ರ ವರೆಗೆ ಸುವರ್ಣಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಮಂಡಲದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ ಸೇರಿದಂತೆ ಜಿಲ್ಲೆಯ ಪ್ರಮುಖ ಬೇಡಿಕೆಗಳ ಕುರಿತು ಚರ್ಚಿಸಲು ವಿರೋಧ ಪಕ್ಷದ ನಾಯಕ ಆರ್ ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ,ಶಾಸಕರಾದ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ,ಹಣಮಂತ ನಿರಾಣಿ ಕೇಶವ ಪ್ರಸಾದ್ ಅವರಿಗೆ ವಿಜಯಪುರ ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮನವಿ ಮಾಡಿದ್ದಾರೆ.
ವಿಜಯಪುರ ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಿ ಪರಿಹಾರ ಒದಗಿಸಲು ಅವರು ಕೋರಿದ್ದಾರೆ.
- ವಿಜಯಪುರದಲ್ಲಿ ಸಾರ್ವಜನಿಕ ಖಾಸಗಿ ಸಹಬಾಗಿತ್ವ ಮಾದಾರಿಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ಕೈಬಿಟ್ಟು ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಒತ್ತಾಯ.
- 2024-25 ನೇ ಸಾಲಿನ ದ್ರಾಕ್ಷಿ ಬೆಳೆಗೆ ಸಂಬಂದಿಸಿದ ವಿಮೆ ಹಣ
- ಸಪ್ಟಂಬರ್ ನಲ್ಲಿಯೇ ಬಿಡುಗಡೆಯಾಗುತ್ತಿದ್ದು ಸುಮಾರು 16000 ರಕ್ಕೂ ಹೆಚ್ಚು ಅರ್ಹ ರೈತರು ಪ್ರತಿ ಹೆಕ್ಟರ್ ಗೆ ಸುಮಾರು 15000 ಪ್ರಿಮಿಯಂ ಪಾವತಿಸಿದ್ದಾರೆ, ಆದರೆ ಸರ್ಕಾರವು ರೈತರಿಗೆ ವಿಮೆ ಪಾವತಿ ಮಾಡದೇ ಅನ್ಯಾಯವಾಗಿದೆ.
- ಕೃಷ್ಣಾ ಮತ್ತು ಭೀಮಾದಂತಹ ಪ್ರಮುಖ ನಧಿಗಳಿದ್ದರು ಜಿಲ್ಲಾ ಕೇಂದ್ರ ಸೇರಿದಂತೆ ಅನೇಕ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಈಗಲೇ ಕುಡಿಯುವ ನೀರಿನ ಪರದಾಟ ಕಾಡುತ್ತಿದೆ. ಬವು ಗ್ರಾಮ ಕುಡಿಯುವ ನೀರಿನ ಯೋಜನೆಗಳು ಯಶಸ್ವಿಯಾಗದೆ ಇರುವುದು. ಗುತ್ತಿ ಬಸವಣ್ಣ ದಂತಹ ಪ್ರಮುಖ ಏತ ನೀರಾವರಿ ಯೋಜನೆಗಳು ಕಾಲುವೆ ಆಧುನಿಕರಣ ಮತ್ತು ದುರಿಸ್ತಿ ಕಾರ್ಯ ಇಲ್ಲದೆ ಇರುವದು.
ಕೃಷ್ಣಾ ಮೆಲ್ದಂಡೆ ಯೋಜನೆಯ 3ನೇ ಹಂತ ದಶಕಗಳಿಂದಲೂ ಪೂರ್ಣಗೊಳಿಸದೇ ಇರುವುದರಿಂದ ಜಿಲ್ಲೆಯ ಸಾವಿರಾರು ಎಕರೆ ಜಮೀನುಗಳಿಗೆ ನೀರಾವರಿ ಸೌಲಭ್ಯ ಸಿಗದಂತಾಗಿದೆ. ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಸೂಕ್ತ ಮತ್ತು ತ್ವರಿತ ಪರಿಹಾರ ನೀಡುವಲ್ಲಿ ಸರ್ಕಾರ ನಿರ್ಲಕ್ಷ ತೋರಿದೆ.
- ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯ ನಿಗದಿತ ಸಮಯಕ್ಕಿಂತ ಬಹಳ ನಿದಾನವಾಗಿ ಸಾಗುತ್ತಿದೆ ಸರ್ಕಾರವು ವಿಜಯಪುರಕ್ಕೆ ತೋರುತ್ತಿರುವ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
- ವಿಜಯಪುರ ಜಿಲ್ಲೆಯು ಕಬ್ಬು ಬೆಳೆಯುವ ಪ್ರಮುಖ ಪ್ರದೇಶವಾಗಿದ್ದು ನ್ಯಾಯಯುತ ಬೆಲೆ ನಿಗದಿ ಮಾಡುವಂತೆ ನಡೆದಿರುವ ಹೋರಾಟ ಇನ್ನು ಮುಂದುವರದಿದೆ.
- ಕರ್ನಾಟಕ ಇತರ ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆಗಳ ಹೋಲಿಸಿದರೆ ಪ್ರತಿ ವರ್ಷ ರಾಜ್ಯ ಬಜೆಟ್ನಲ್ಲಿ ಮುಲಸೌಕರ್ಯ ಅಭಿವೃದ್ಧಿ. ರಸ್ತೆ ದುರಸ್ಥಿ & ಮತ್ತು ಆಸ್ಪತ್ರೆಗಳ ಉನ್ನತಿಕರಣಕ್ಕಾಗಿ ಸಾಕಷ್ಟು ಅನುದಾನ ಹಂಚಿಕೆ ಮಾಡದೇ ಭಜಟ್ ತಾರತಮ್ಯ ಎಸಗಿದೆ ನಗರದ ಪ್ರಮುಖ ರಸ್ತೆಗಳು ಬಹುತೇಕ ಹಾಳಾಗಿವೆ.
- ಕೊಲೆ ದರೋಡೆ ಮತ್ತು ಕಳ್ಳತನದಂತಹ ಗಂಭೀರ ಅಪರಾಧ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿದ್ದು ಜಿಲ್ಲೆಯ ಜನರಿಗೆ ಸುರಕ್ಷಿತೆಯ ಭಯ ಕಾಡುತ್ತಿದೆ. ಚಡಚಣದಲ್ಲಿನ ಎಸ್ ಬಿ ಐ ದರೋಡೆ ಪ್ರಕರಣಗಳು ಇತ್ತೀಚಿನ ಉದಾಹರಣೆಯಾಗಿದ್ದು ಕಾನೂನು ಸುವ್ಯವಸ್ಥೆ ಹಾಳಾಗಿದ್ದು ಕಂಡುಬರುತ್ತದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮನವಿ ಮಾಡಿದ್ದಾರೆ.





