ಕಲಬುರಗಿ:ಕಲಬುರಗಿ ನಗರದಲ್ಲಿ ಜನ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರ ಹಿನ್ನೆಲೆಯಲ್ಲಿ ವಾಹನಗಳು ಹೆಚ್ಚಾಗಿದ್ದು ರಾತ್ರಿ ಸಮಯದಲ್ಲಿ ರಸ್ತೆಯ ಮೇಲೆ ಓಡಾಡುವ ಸಮಯದಲ್ಲಿ ಎಲ್ಲಾ ವಾಹನಗಳಿಗೆ ಹ್ಯಾವಿ ಹೈ ವೋಲ್ಟೇಜ್‌ನ ಲೈಟ್ ಅಳವಡಿಸಿರುವುದರಿಂದ ಆ ಲೈಟಿನ ಬೆಳಕಿನಿಂದ ಕಣ್ಣು ಕುಕ್ಕಿ ಎದುರುಗಡೆಯಿಂದ ಬರುತ್ತಿರುವ ವಾಹನಗಳು ಹಾಗೂ ರಸ್ತೆ ಕಣ್ಣಿಗೆ ಕಾಣಿಸುತ್ತಿಲ್ಲ ಹಾಗಾಗಿ ಸುಗಮವಾಗಿ ಸಂಚಾರ ಮಾಡಲು ತೊಂದರೆ ಆಗುತ್ತಿದ್ದು, ಇದು ನನ್ನ ವೈಯಕ್ತಿಕ ಸಮಸ್ಯೆ ಅಲ್ಲ ಇದು ಸಾರ್ವಜನಿಕರ ಸಮಸ್ಯೆ ಹಾಗಾಗಿ ಇಂದು ಅಕ್ಟೋಬರ್ ೦೯ರಂದು ಸಾರಿಗೆ ಇಲಾಖೆಯ ವಿಭಾಗ ಕಛೇರಿಯಲ್ಲಿ ಹಮ್ಮಿಕೊಂಡ “ಸಾರಿಗೆ ಅದಾಲತ್” ಕಾರ್ಯಕ್ರಮದಲ್ಲಿ ಬಂದು ತಮಗೆ ಮನವಿ ಪತ್ರ ಸಲ್ಲಿಸಲಾಗಿದೆ. 
ದ್ವಿಚಕ್ರ ವಾಹನ, ನಾಲ್ಕು ಚಕ್ರ ವಾಹನಗಳಿಗೆ ಹಾಗೂ ಎಲ್ಲಾ ಹ್ಯಾವಿ ವಾಹನಗಳಿಗೂ ಅಳವಡಿಸಿರುವ ಹ್ಯಾವಿ ವೋಲ್ಟೇಜ್ ಲೈಟ್ ತೆಗೆದು ಹಾಕುವಂತೆ ಕ್ರಮ ಕೈಗೊಳ್ಳಬೇಕೆಂದು ನಗರದ ನಾಲ್ಕು ದಿಕ್ಕಿನಲ್ಲಿರುವ ರಿಂಗ್ ರಸ್ತೆಯ ಅಕ್ಕ ಪಕ್ಕದಲ್ಲಿರುವ ಸರ್ವಿಸ ರಸ್ತೆಮ ಮೇಲೆ ದ್ವಿಚಕ್ರ ವಾಹನಗಳು ಓಡಾಡುವಂತೆ ಕ್ರಮ ಕೈಗೊಳ್ಳುವುದರಿಂದ ರಸ್ತೆಯ ಅಫಘಾತಗಳ ಸಂಖ್ಯೆ ಕಡಿಮೆ ಆಗಬಹುದೆಂದು ನನ್ನ ಅಭಿಪ್ರಾಯ. 
ದಯಮಾಡಿ ಈ ಮೇಲಿನ ಎರಡು ಸಮಸ್ಯೆಗಳಿಗೆ ಈ ಕ್ಷಣದಿಂದಲೇ ಕ್ರಮ ಕೈಗೊಳ್ಳಬೇಕೆಂದು ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಯವರು ಸಾರಿಗೆ ಇಲಾಖೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
    

LEAVE A REPLY

Please enter your comment!
Please enter your name here