ದೇವರಾಜ್ ಅರಸರು ಕರ್ನಾಟಕದ ರಾಜಕಾರಣದಲ್ಲಿ ಕಾಣಿಸಿಕೊಳ್ಳದೆ ಹೋಗಿದ್ದರೆ ನಾಡಿನ ಹಿಂದುಳಿದ ಅಲ್ಪಸಂಖ್ಯಾತ ದಲಿತರ ಬದುಕು ಹೇಗಿರುತ್ತಿತ್ತು ಎನ್ನುವುದನ್ನು ಕಲ್ಪಿಸಿಕೊಂಡರೆ ಆತಂಕವಾಗುತ್ತದೆ .ಅತ್ಯಂತ ಸಣ್ಣ ಸಮುದಾಯದ ಹಿನ್ನೆಲೆಯಿಂದ ಬಂದ ಅರಸು ತಮಗೆ ಸಿಕ್ಕ ಎರಡು ಬಾರಿ ಮುಖ್ಯಮಂತ್ರಿ ಪದವಿಯನ್ನು ಸಾಮಾನ್ಯರ ಸಂಕಟಗಳನ್ನು ದೂರ ಮಾಡಿ ಅವರಲ್ಲೊಂದು ಆತ್ಮವಿಶ್ವಾಸ ಸೃಷ್ಟಿಸಲು ಬಳಸಿಕೊಂಡರು .ಅರಸು ಅವರ ಮುಂದಾಲೋಚನೆಗಳ ಫಲದಿಂದಾಗಿ ಬಡವರ ಬದುಕಿನಲ್ಲಿ ಪವಾಡಗಳೇ ನಡೆದು ಹೋದವು .ರಸ್ತೆ ಬೆಳಕು ಶಾಲೆ ಹೀಗೆ ನಾಗರಿಕ ಸೌಲತ್ತುಗಳಿಂದ ದೂರವೇ ಉಳಿದಿದ್ದ ಹುಡುಗರು ಅರಸು ಅವರ ಯೋಜನೆಗಳ ಪ್ರಯೋಜನ ಪಡೆದು ಅಕ್ಷರ ಅಧಿಕಾರ ಆತ್ಮಭಿಮಾನ ಬೆಳೆಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ತಲುಪಿದರು .ಇಂದು ಅರಸರ ಸ್ಮರಣೋತ್ಸವ ಅವರನ್ನು ಆರಾಧಿಸೋಣ ಕೃತಜ್ಞತೆ ಸಲ್ಲಿಸೋಣ.

LEAVE A REPLY

Please enter your comment!
Please enter your name here