ಉಡುಪಿ:
ಹೃದಯಾಘಾತದಲ್ಲಿ ಮೃತಪಟ್ಟ ತನ್ನ ತಾಯಿಯನ್ನು ಕಾಣಲು ಭೂಗತ ಪಾತಕಿ ರವಿ ಪೂಜಾರಿ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ತಾಯಿ‌ ಸುಶೀಲ ಪೂಜಾರಿ(86) ಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯದ ವಿಶೇಷ ಅನುಮತಿ ಪಡೆದ ರವಿ ಪೂಜಾರಿಗೆ ಎಸ್ಕಾರ್ಟ್ ಮೂಲಕ ಸ್ವಗ್ರಾಮಕ್ಕೆ ಕರೆದೊಯ್ದು ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಕರೆತರಲು ಸೂಚನೆ ನೀಡಿದೆ ನ್ಯಾಯಾಲಯ. ಇದಕ್ಕಾಗಿ ಎಸ್ಕಾರ್ಟ್ ಒದಗಿಸುವಂತೆ‌ ಬೆಂಗಳೂರು ಪರಿಪ್ಪನ ಅಗ್ರಹಾರದ ಜೈಲಧಿಕಾರಿಗಳಿಗೆ, ಉಪಪೊಲೀಸ್ ಆಯುಕ್ತರು,ನಗರ ಸಶಸ್ತ್ರ ಮೀಸಲು ಪಡೆ ದಕ್ಷಿಣ ಅಡುಗೋಡಿ ಬೆಂಗಳೂರು ಹಾಗೂ ಸಿಸಿಬಿ ಅಧಿಕಾರಿಗಳಿಗೆ ನ್ಯಾಯಾಲಯ ಸೂಚನೆ ನೀಡಿದೆ. ಹೀಗಾಗಿ ಬೆಳಿಗ್ಗೆ ನಡೆಯಲಿರುವ ತಾಯಿಯ ಅಂತಿಮ ವಿಧಿ ವಿಧಾನ ಪೂರೈಸಲು ರವಿ ಪೂಜಾರಿ ಆಗಮಿಸುವ ಕಾರಣ ಮಲ್ಪೆಯ ನೆರ್ಗಿಯಲ್ಲಿ ಭಿಗಿ ಪೊಲೀಸ್ ಬಂದೋಬಸ್ಥ್ ನಡುವೆ ಅಂತ್ಯಸಂಸ್ಕಾರ ನಡೆಯಲಿದೆ.

LEAVE A REPLY

Please enter your comment!
Please enter your name here