ಪೋಕ್ಸೊ ಎಂದರೆ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯಿದೆ:ವಕೀಲ ಸಿ.ತಿಪ್ಪೇಶ್

ದಾವಣಗೆರೆ: ಸಂತೆಬೆನ್ನೂರು ೦೧:
ಕುಟುಂಬದಲ್ಲಿ ಮಕ್ಕಳು ಸುಸಂಸ್ಕೃತಿಯಿಂದ ಸಮಾಜದಲ್ಲಿ ಗೌರವ ಪಡೆಯಬೇಕು.
೧೮ ವರ್ಷಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲತೆಯ ಅಪರಾಧಗಳಿಗೆ ಸಂಬಂಧಿಸಿದಂತೆ ಪೋಕ್ಸೊಕಾಯಿದೆ ಅಡಿಯಲ್ಲಿ ದಾಖಲಿಸಲಾಗುತ್ತದೆ ಎಂದು ಚನ್ನಗಿರಿ ವಕೀಲರ ಸಂಘದ ಉಪಾಧ್ಯಕ್ಷ ಸಿ.ತಿಪ್ಪೇಶ್ ಹೇಳಿದರು.
ಸಂತೆಬೆನ್ನೂರು ಗ್ರಾಮದ ಕೆಪಿಎಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಸುರಕ್ಷಿತ ಬಾಲ್ಯ’ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೋಕ್ಸೊ ಎಂದರೆ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸುವ ಕಾಯಿದೆ. ಭಾರತದಲ್ಲಿ ೨೦೧೨ರಲ್ಲಿ ಜಾರಿಗೆ ತರಲಾಗಿದೆ. ಕುಟುಂಬದಲ್ಲಿ ಮಕ್ಕಳು ಸುಸಂಸ್ಕೃತಿಯಿಂದ ಸಮಾಜದಲ್ಲಿ ಗೌರವ ಪಡೆದರೆ, ಕೆಟ್ಟ ಆಲೋಚನೆ ಮಾಡಲು ಸಾಧ್ಯವಿಲ್ಲ. ಯಾವುದೊ ಕೆಟ್ಟ ಸಹವಾಸದಿಂದ ದೂರ ಇರಬೇಕು. ಸ್ವಂತ ವಿವೇಚನೆ ಬೇಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಉಪಪ್ರಾವಾರ್ಯ ಯು.ಸಿದ್ದೇಶ್ ಮಾತನಾಡಿ ಮಕ್ಕಳಿಗೆ ಮೊದಲು ಮನೆಯಲ್ಲಿ ನೀತಿ ಪಾಠ ನೀಡಬೇಕು. ಜೊತೆಗೆ ಶಿಕ್ಷಣ ನೀಡಿದಾಗ ಮಕ್ಕಳಲ್ಲಿ ದುರಾಲೊಚನೆ, ಕೆಟ್ಟ ಸಹವಾಸ ಬರುವುದಿಲ್ಲ. ಅಂದರೆ ಮಕ್ಕಳಿಗೆ ಕೆಟ್ಟದ್ದು, ಒಳ್ಳೆಯದು ತಿಳಿದಿರಬೇಕು. ಮಕ್ಕಳು ತಮ್ಮ ಜೀವನದ ಗುರಿ-ಉದ್ದೇಶವನ್ನು ಪೊಷಕರು ಮತ್ತು ಶಿಕ್ಷಕರು ನೀಡಬೇಕು. ಇದರಿಂದ ಮಕ್ಕಳು ಸಾಧನೆಯ ಹಾದಿ ಹಿಡಿದು ಜೀವನದ ಯಶಸ್ಸು ಪಡೆಯುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪತಾಹಶಿಲ್ದಾರ್ ನೀಲಮ್ಮ, ಪಿಡಿಒ ಉಮೇಶ್, ವಕೀಲರಾದ ಸಿ.ತಿಪ್ಪೇಶ್, ಜಿ.ಎಸ್.ವೀರಭದ್ರಪ್ಪ, ಜಿ.ಎಸ್.ಹೋಹನ್, ಲೋಹಿತ್, ಮಕ್ಕಳ ರಕ್ಷಣಾ ಘಟಕದ ಹಾಲೇಶ್, ಮುಖ್ಯಶಿಕ್ಷಕ ಹೆಚ್.ಎನ್.ರವಿ, ಪಾಪಯ್ಯ, ಸರಸ್ವತಿ, ಎಂ.ಬಿ.ನಾಗರಾಜ್ ಕಾಕನೂರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

LEAVE A REPLY

Please enter your comment!
Please enter your name here