ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವೈಯಕ್ತಿಕವಾಗಿಯೂ ಹಾಗೂ ರಾಜ್ಯದ ಅಹಿಂದ ವರ್ಗಗಳ ಪರ ಹೋರಾಟ ನಡೆಸಿದ ಜನನಾಯಕನ ನಿರ್ಗಮನ ನನಗೆ ತುಂಬಾ ದುಃಖ ತಂದಿದೆ.
2008ರಿಂದಲೂ ಸಿದ್ದರಾಮಯ್ಯ ಅವರೊಂದಿಗೆ ನನಗೆ ಆತ್ಮೀಯ ಪರಿಚಯವಿದೆ. ನಾವು ಬೇರೆ ರಾಜಕೀಯ ಪಕ್ಷಗಳಲ್ಲಿ ಇದ್ದರೂ ಸಹ ಅವರು ಎಂದಿಗೂ ಪಕ್ಷಭೇದ ಮಾಡದೆ ಆತ್ಮೀಯತೆ ಮತ್ತು ಗೌರವದಿಂದ ನಡೆದುಕೊಳ್ಳುತ್ತಿದ್ದರು. ಅಭಿವೃದ್ಧಿ ವಿಚಾರಗಳು, ಜನಸಾಮಾನ್ಯರ ಸಮಸ್ಯೆಗಳು ಹಾಗೂ ಕುಶಲೋಪರಿ ವಿಷಯಗಳಲ್ಲಿ ಉತ್ತಮ ಸಂಬಂಧವನ್ನು ಉಳಿಸಿಕೊಂಡಿದ್ದರು.
ಅವರ ಹುಟ್ಟುಹಬ್ಬಕ್ಕೆ ನಾನು ಅಪರೂಪವಾದ ಕಾಣಿಕೆ ನೀಡಿದ್ದಾಗ ಅವರು ನಕ್ಕು ಅಪ್ಪುಗೆ ನೀಡಿದ್ದು ಇಂದಿಗೂ ನನಗೆ ಕಣ್ಣುಮುಂದಿದೆ ಅಂತಹ ಸರಳ ವ್ಯಕ್ತಿತ್ವ ಅವರದು.
ಡಾ. ಬಿ.ಆರ್. ಅಂಬೇಡ್ಕರ್, ಬಸವಣ್ಣ ಹಾಗೂ ಬುದ್ಧರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡು ಆಡಳಿತ ನಡೆಸಿದ ಅಪರೂಪದ ನಾಯಕ.. ಹಾಲುಮತ ಸಮಾಜದಲ್ಲಿ ಜನಿಸಿದರು ಕೂಡ ಸರ್ವ ಸಮುದಾಯಗಳ ಪ್ರೀತಿ ಗಳಿಸಿದ ಅಪರೂಪದ ನಾಯಕರಾಗಿ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗಗಳ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ದೊಡ್ಡಗುಣವಿತ್ತು. ಅಹಿಂದ ರಾಜಕಾರಣಕ್ಕೆ ರಾಜ್ಯದಲ್ಲಿ ಹೊಸ ದಿಕ್ಕು ನೀಡಿದ ನಾಯಕರೆಂದರೆ ಅದು ಸಿದ್ದರಾಮಯ್ಯ..
ಹಾಲುಮತ ಸಮಾಜದಲ್ಲಿ ಜನಿಸಿದರೂ ಎಲ್ಲಾ ಸಮುದಾಯಗಳ ವಿಶ್ವಾಸ ಗಳಿಸಿ ರಾಜ್ಯದ ಜನನಾಯಕನಾಗಿ ಬೆಳೆದವರು. ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಅವಧಿಯಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ಬಡವರು ಮತ್ತು ಶೋಷಿತರ ಪರ ಕೆಲಸ ಮಾಡಿದರು. ನುಡಿದಂತೆ ನಡೆಯುವ ರಾಜಕಾರಣಿ ಎಂಬ ಹೆಗ್ಗಳಿಕೆಯನ್ನು ತಮ್ಮ ರಾಜಕೀಯ ಜೀವನದಲ್ಲಿ ಉಳಿಸಿಕೊಂಡಿದ್ದಾರೆ….
ರಾಜಕೀಯ ನಾಯಕರಲ್ಲಿ ಸಿದ್ದರಾಮಯ್ಯ ಅವರಂತಹ ವ್ಯಕ್ತಿತ್ವ ಮತ್ತೊಮ್ಮೆ ಕಾಣುವುದು ಬಹಳ ಕಷ್ಟ.
ಸಿದ್ದರಾಮಯ್ಯ ಅವರಂತಹ ಜನಪರ, ತತ್ವನಿಷ್ಠ ಹಾಗೂ ಬುದ್ಧ,ಬಸವ,ಅಂಬೇಡ್ಕರ್ ಚಿಂತನೆಗಳನ್ನು ಯಾವಾಗ್ಲೂ ಅಳವಡಿಸಿಕೊಂಡ ನಾಯಕ ಮತ್ತೊಬ್ಬ ಸಿಗಲಿಕ್ಕಿಲ್ಲ…
ನಾನು ಬೇರೆ ಪಕ್ಷದವನು ಆಗಿದ್ರು ಕೂಡ ವಯಕ್ತಿಕವಾಗಿ ನಾನು ಅವರ ಅಪ್ಪಟ ಅಭಿಮಾನಿ.
ಸದನದಲ್ಲಿ ಇದ್ದಾಗ ಅವರು ನಿರ್ಗಳವಾಗಿ ಅಂಕಿ ಸಂಖ್ಯೆ ಸಮೇತ ಸದನದಲ್ಲಿ ವಿಷಯ ಮಂಡನೆ ಮಾಡುವ ವಾಗ್ಮಿಗಳು..ಇಡೀ ಇತಿಹಾಸದ ಸದನದಲ್ಲಿ ಇವರ ತರ ನಿರ್ಬಿತಿಯಿಂದ ವಿಷಯ ಮಂಡನೆಯಲ್ಲಿ ಗುಡುಗುವ ತರ ಇನ್ನೊಬ್ಬ ರಾಜಕಾರಣಿಯನ್ನು ಕಾಣಲಿಕಿಲ್ಲ.
“ಹುದ್ದೆ ದೊಡ್ಡದಲ್ಲ, ಹೃದಯ ದೊಡ್ಡದಾದಾಗ ಜನಮನದಲ್ಲಿ ನಾಯಕ ಶಾಶ್ವತವಾಗುತ್ತಾನೆ” ಎನ್ನುವ ಮಾತಿಗೆ ಸಿದ್ದರಾಮಯ್ಯ ಅವರೇ ಜೀವಂತ ಉದಾಹರಣೆ. ಅಧಿಕಾರ ಅವರಿಗಾಗಿ ಅಲಂಕಾರವಾಗಿರಲಿಲ್ಲ, ಅದು ಜನಸಾಮಾನ್ಯರಿಗೆ ನ್ಯಾಯ ತಲುಪಿಸುವ ಸಾಧನವಾಗಿತ್ತು.
“ಮರೆಯಲಾಗದ ಮನುಷ್ಯರು ಕೆಲವರು ಇತಿಹಾಸದಲ್ಲಿ ಬರೆಯಲ್ಪಡುತ್ತಾರೆ,ಆದರೆ ಕೆಲವರು ಜನರ ಹೃದಯದಲ್ಲೇ ನೆಲೆಸುತ್ತಾರೆ” ಎಂಬಂತೆ ಸಿದ್ದರಾಮಯ್ಯ ಅವರು ಅಹಿಂದ ವರ್ಗಗಳ ಹಾಗೂ ಬಡವರು, ಶೋಷಿತರು, ದಮನಿತರ, ದಲಿತರ,ಎಲ್ಲರ ಮನಸ್ಸಿನಲ್ಲಿ ಸದಾ ಉಳಿಯುವ ನಾಯಕರು.
ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ಮೌಲ್ಯಗಳನ್ನು ಕೈಬಿಡದೆ ನಡೆದ ಅಪರೂಪದ ರಾಜಕಾರಣಿ..
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವುದು ರಾಜ್ಯ ರಾಜಕಾರಣಕ್ಕೆ ಪಕ್ಷತಿತವಾಗಿ ದೊಡ್ಡ ನಷ್ಟವಾಗಿದೆ. ಅವರ ಅನುಭವ, ಸರಳತೆ ಹಾಗೂ ಅವರ ಜನಪರ ಆಡಳಿತವನ್ನು ಜನರು ಸದಾ ನೆನಪಿಸಿಕೊಳ್ಳುತ್ತಾರೆ…
ಅವರ ಮುಂದಿನ ಜೀವನ ಅರೋಗ್ಯದಿಂದ ಕೂಡಿರಲಿ ರಾಜಕಾರಣಕ್ಕೆ ಅವರು ಮಾರ್ಗದರ್ಶನವಿರಲಿ ಎಂದು ಭಾರವಾದ ನೋವಿನೊಂದಿಗೆ ಅವರಿಗೆ ಶುಭ ಹಾರೈಸುತ್ತೇನೆ…✍🏻 ಕೆ. ಶಿವನಗೌಡ ನಾಯಕ
ಮಾಜಿ ಸಚಿವರು,ಕರ್ನಾಟಕ ಸರ್ಕಾರ





