ಬೆಂಗಳೂರು: ನಾಡ ದೊರೆ, ನುಡಿದಂತೆ ನಡೆದ ನಾಯಕ, ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರ ಜನಪರ ಆಡಳಿತಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ದೇವರಾಜ ಅರಸು ಅವರಷ್ಟೇ ನಾನು ಅಭಿಮಾನಿಸುವ ವ್ಯಕ್ತಿ ಎಂದರೆ ಅದು ನೀವು ಎಂದೆಂದಿಗೂ ಸಿದ್ದರಾಮಯ್ಯನವರೆಂದರೆ ಬೆಟ್ಟದಷ್ಟು ಪ್ರೀತಿ ನನಗೆ.
ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಬಡವರ ಧ್ವನಿಯಾಗಿ ರಾಜ್ಯದಲ್ಲೇ ಉಳಿದು ಹೋರಾಡುವ ನಿಮ್ಮ ಸಂಕಲ್ಪ ನಮಗೆಲ್ಲರಿಗೂ ಪ್ರೇರಣೆ.
ವೈಯಕ್ತಿಕವಾಗಿ ಜಗಳ ಮಾಡಿಯಾದರೂ ನನ್ನ ಕ್ಷೇತ್ರಕ್ಕೆ ಅನುದಾನ ತರುವ ಸಲಿಗೆ ಹಾಗೆ ನಾನು ಬಡವರ ಪರವಾಗಿ ಹೇಳಿದ ಅಂಶಗಳನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುವ ಗುಣ ನಿಮ್ಮದು.
ಉದಾಹರಣೆಗೆ:- 2014ರಲ್ಲಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿಗೆ ಆಗಮಿಸಿದ ಸಂದರ್ಭದಲ್ಲಿ ನಿಮ್ಮ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ಶೂ ಭಾಗ್ಯ ಜಾರಿಗೆ ತಂದು ಇಡೀ ನಾಡಿನ ಬಡಮಕ್ಕಳಿಗೆ ವರದಾನವಾದ ಕಾರ್ಯಕ್ರಮ ಅವಿಸ್ಮರಣೀಯ.
ಸಿದ್ದರಾಮೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನನಗೆ ವಹಿಸಿದಾಗ ಎಲ್ಲಾ ಕೆಲಸಗಳನ್ನು ನಿಭಾಯಿಸುವ ಸಮಯದಲ್ಲಿ ಆ ಜನರ ಪ್ರೀತಿ, ಅಭಿಮಾನಗಳನ್ನು ಕಂಡು ನನಗೆ ಜನರನ್ನು ಸಂಪಾದಿಸುವುದೆಂದರೆ ಇದು ಎನಿಸಿತು. ನೀವು ಮಾಸ್‌ ಲೀಡರ್‌ ಆಗಿ ಸಾಕಷ್ಟು ಯುವಜನರಿಗೆ ರಾಜಕಾರಣಕ್ಕೆ ಬರಲು ಸ್ಫೂರ್ತಿಯೂ ಆಗಿದ್ದೀರಿ.
ಸಹಕಾರ ಸಚಿವನಾಗಿ ನಿಮ್ಮೊಂದಿಗೆ ಕೆಲಸ ಮಾಡಿದ ಅನುಭವ ಅತ್ಯಮೂಲ್ಯವಾದದ್ದು. ನೀವು ಹಾಕಿಕೊಟ್ಟ ಜನಕಲ್ಯಾಣದ ಹಾದಿಯೇ ನಮಗೆ ಸ್ಫೂರ್ತಿ. ನಾನು ಹಾಸನ ಉಸ್ತುವಾರಿ ಸಚಿವನಾದಾಗ ಹಲವು ಬಾರಿ ಬಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೆನ್ನುತಟ್ಟಿದ್ದೀರಿ.
ಕರ್ನಾಟಕದ ಜನತೆ, ವಿಶೇಷವಾಗಿ ನಾಡಿನ ಮೂಲೆಮೂಲೆಗಳಲ್ಲಿರುವ ದೀನದಲಿತರು, ದಮನಿತರು, ಧ್ವನಿಯಿಲ್ಲದವರು, ಬಡವರು, ಅಶಕ್ತರು, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರು, ಇಷ್ಟೂ ಪ್ರೀತಿಸಲು ಸಾಮಾಜಿಕ ನ್ಯಾಯದ ದೃಷ್ಟಿಯೇ ಕಾರಣ.
ನನ್ನ ಅಚ್ಚುಮೆಚಿನ್ನ ಕಾರ್ಯಕ್ರಮ ಅನ್ನ ಭಾಗ್ಯ,
ರಾಜ್ಯದ ಕಟ್ಟಕಡೆಯ ಮನುಷ್ಯನಿಗೂ ಬದುಕಿನ ಪ್ರಾಥಮಿಕ ಅವಶ್ಯಕತೆಗಳಾದ ಅನ್ನ, ಆರೋಗ್ಯ, ಶಿಕ್ಷಣ, ವಸತಿ ಮತ್ತು ಉದ್ಯೋಗದ ಭಾಗ್ಯಗಳನ್ನು ಬಡವ-ಬಲ್ಲಿದನೆಂಬ ಭೇದ ಇಲ್ಲದೆ ಎಲ್ಲರೂ ನಿರ್ಭಯವಾಗಿ ಘನತೆ ಮತ್ತು ಗೌರವರಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡಿದವರು ನೀವು.
ರಾಜ್ಯ ಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ನಿಮಿತ್ತ ಮಧುಗಿರಿಗೆ ಆಗಮಿಸಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕೀರ್ತಿ ನಿಮ್ಮದು.
ಸಹಜವಾಗಿ ತುಮಕೂರಿಗೆ ಆಗಮಿಸಿದ ಸಂದರ್ಭಗಳಲ್ಲಿ ನಮ್ಮ ಮನೆಗೆ ಆಗಮಿಸಿ ಪ್ರೀತಿಯಿಂದ ಉಭಯ ಕುಶಲೋಪರಿ ವಿಚಾರಿಸಿ ಆತ್ಮೀಯತೆ ತೋರಿದ ಹೃದಯವಂತಿಕೆ ನಿಮ್ಮದು.
ರಾಜಕೀಯ ಮೀರಿ ಜಾತಿಗಿಂತ ಸ್ನೇಹ ದೊಡ್ಡದು ಅಂತಾ ಭಾವಿಸಿ ಬಾಂಧವ್ಯ ಬೆಸೆದ ನಿಷ್ಕಲ್ಮಷ ಮನಸ್ಸಿನ ಹೃದಯವಂತ ನೀವು. ಏನೇ ಆಗಲಿ ನಮ್ಮ ಲೀಡರ್‌ ಸಿದ್ದರಾಮಯ್ಯ, ನಮ್ಮ ನಾಯಕ ಸಿದ್ದರಾಮಯ್ಯ ಎಂದು ಹೇಳಿಕೊಳ್ಳಲು ಎಂದಿಗೂ ಹೆಮ್ಮೆಯೇ. ಅದು ಮುಂದುವರಿಯುತ್ತದೆ.

LEAVE A REPLY

Please enter your comment!
Please enter your name here