ಕಲ್ಬುರ್ಗಿ: ಅಫಜಲಪೂರ ರಸ್ತೆ ಹೈಕೋರ್ಟ್ ಕ್ರಾಸ್ ಬಳಿಯ ದಿ. ವಿಠಲ ಹೇರೂರ ವೃತ್ತ ನಾಮಕರಣ ಮಾಡಿ ನಾಮಫಲಕ ಅಳವಡಿಸಿದೆ 04/012/ 2015ರಲ್ಲಿ ಈಗ ಅಲ್ಲಿ ಹೇರೂರ ಅವರ ಮೂರ್ತಿ ಮೂರ್ತಿ ಸ್ಥಾಪನೆ ಮಾಡುವದಕ್ಕೆ ಅನುಮತಿ ಪರವಾನಿಗೆ ಕೊಡಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಕರ್ನಾಟಕ ಕೋಲಿ, ಕಬ್ಬಲಿಗ ಸಂಘರ್ಷ ಸಮಿತಿಯಿಂದ ಮನವಿ ಪತ್ರ ನೀಡಲಾಯಿತು. ಈಗಾಗಲೇ ಈ ವೃತ್ತಕ್ಕೆ ದಿ. ವಿಠ್ಠಲ ಹೇರೂರ ವೃತ್ತ ಎಂದು ನಾಮಕರಣ ಮಾಡಿದ್ದಾಗಿದೆ ಎಂದು ಕರ್ನಾಟಕ ಕೋಲಿ ಕಬ್ಬಲಿಗ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷರಾದ ಸಿದ್ದು ಜಮಾದಾರ ಅವರು ಮನವರಿಕೆ ಮಾಡಿಕೊಟ್ಟರಲ್ಲದೆ, ದಿನಾಂಕ 04/12/2015 ರಂದು ವಿಠ್ಠಲ್ ಹೇರೂರ್ ವೃತ್ತ ಮಾಡಿ ಅವರ ಭಾವಚಿತ್ರಕ್ಕೆ, ಮಾಲಾರ್ಪಣೆ ಮಾಡಿ ಪೂಜಿ ಸಲ್ಲಿಸಿದರು. ಸಮಾಜ ಹಿರಿಯರಾದ ರಾಜಗೋಪಾಲ್ ರೆಡ್ಡಿ ಮತ್ತು ಬಸವರಾಜಸಪ್ಪಣಗೋಳ, ಶರಣು ಡೋಣಗಂವ್ ಮತ್ತು ಕೋಲಿ ಕಬ್ಬಲಿಗ ಸಮಾಜದ ಮುಖಂಡರು ಭಾಗವಹಿಸಿದ್ದರು. ಕೆಲವರು ಈ ಸ್ಥಳದಲ್ಲಿ ವಿವಾದ ಹುಟ್ಟಿಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿ ನಿಲುಗಡೆಗೆ ಯತ್ನಿಸಿದ್ದು, ಖಂಡನೀಯ. ಯಾರಾದರೂ ಈ ಬಗ್ಗೆ ದಾಖಲೆಗಳಿದ್ದರೆ ಕೊಡಲಿ. ಅದು ಬಿಟ್ಟು ವಿವಾದ ಎಬ್ಬಿಸುವುದು ಸರಿಯಲ್ಲ.
ಮುಂದಾಗುವ ಅನಾಹುತಕ್ಕೆ ಅವರೆ ಕಾರಣರೆಂದು ಮುಖಂಡರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ರಾಜ ಗುರು ಸ್ವಾಮಿ .ಗುರುನಾಥ ಹೇರೂರ್.ಅವ್ವಣ್ಣಗೌಡ ಪಾಟೀಲ್. ಬಸವರಾಜ್ ಹರವಾಳ. ಅವ್ವಣ್ಣ ಮ್ಯಾಕೇರಿ. ದಿಗಂಬರ. ನಾಡಗೌಡ. ಶಾಂತಪ್ಪ ಕೂಡಿ. ಬಸವರಾಜ್ ಬೂದಿಹಾಳ.ರಮೇಶ ನಾಟಿಕಾರ್.ಚಂದ್ರಕಾಂತ ಜಮಾದಾರ. ನಿಂಗಪ್ಪ ದೇವಣಗಾಂವ.ಶಿವಶರಣಪ್ಪ ಜಮಾದಾರ ವಿಠ್ಠಲ್ ಹೇರೂರ ಅಭಿಮಾನಿಗಳು ಹಾಗು ಕೋಲಿ ಸಮಾಜದ ಮುಖಂಡರು ಹೋರಾಟಗಾರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here