ವಿಜಯಪೂರ: ಆಲಮೇಲ ತಾಲೂಕಿನ ದೇವಣಗಾಂವ ಗ್ರಾಮದ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆಬೀಳುವ ಕಾಲ ಸನ್ನಿಹಿತವಾಗಿದೆ. ಭೀಮಾ ನದಿಯ ಸೇತುವೆಯ ದುರಸ್ತಿ ಹಾಗೂ ಸೇತುವೆಯ ಮೇಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಇಂದು (ಆಗಸ್ಟ್.30) ಅಧಿಕೃತ ಉದ್ಘಾಟನಾ ಸಮಾರಂಭ ನಡೆಯಲಿದೆ.

​ಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಅವರ ತೀವ್ರ ಇಚ್ಛಾಶಕ್ತಿ ಹಾಗೂ ವಿಶೇಷ ಶ್ರಮದಿಂದಾಗಿ ₹3.50 ಕೋಟಿ ವೆಚ್ಚದಲ್ಲಿ ಈ ಸೇತುವೆ ದುರಸ್ತಿ ಹಾಗೂ ರಸ್ತೆ ಕಾಮಗಾರಿ ಸಂಪೂರ್ಣಗೊಂಡಿದೆ. ಶಾಸಕರ ನೇತೃತ್ವದಲ್ಲೇ ನಡೆಯಲಿರುವ ಈ ಕಾರ್ಯಕ್ರಮದಿಂದಾಗಿ ದೇವಣಗಾಂವ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನರಲ್ಲಿ ತೀವ್ರ ಹರ್ಷ ವ್ಯಕ್ತವಾಗಿದೆ.

​ಸುಗಮ ಸಂಪರ್ಕಕ್ಕೆ ದಾರಿ:
ಶಿಥಿಲಗೊಂಡಿದ್ದ ಭೀಮಾ ನದಿ ಸೇತುವೆ ಹಾಗೂ ಹಾಳಾಗಿದ್ದ ರಸ್ತೆಯನ್ನು ₹3.50 ಕೋಟಿ ಅನುದಾನದಲ್ಲಿ ಕಾಯಕಲ್ಪಗೊಳಿಸಿರುವುದರಿಂದ ದೈನಂದಿನ ಸಂಚಾರಕ್ಕೆ ಇದ್ದ ದೊಡ್ಡ ಅಡಚಣೆ ದೂರವಾಗಿದೆ. ರೈತರ ಕೃಷಿ ಉತ್ಪನ್ನಗಳ ಸಾಗಣೆ, ವಿದ್ಯಾರ್ಥಿಗಳ ಶಾಲಾ-ಕಾಲೇಜು ಪಯಣ ಹಾಗೂ ಸ್ಥಳೀಯ ವ್ಯಾಪಾರ-ವಹಿವಾಟಿಗೆ ಇದು ಪ್ರಮುಖ ಕೊಂಡಿಯಾಗಿದೆ. ಮಳೆಗಾಲ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಎದುರಾಗುತ್ತಿದ್ದ ಸಂಚಾರದ ತೊಂದರೆಗಳು ಈ ನವೀಕೃತ ಸೇತುವೆಯಿಂದಾಗಿ ಶಾಶ್ವತವಾಗಿ ಪರಿಹಾರ

​ ​”ದೇವಣಗಾಂವ ಭೀಮಾ ನದಿ ಸೇತುವೆಯ ದುರಸ್ತಿ ಹಾಗೂ ರಸ್ತೆ ನವೀಕರಣ ಕಾಮಗಾರಿಯನ್ನು ₹3.50 ಕೋಟಿ ವೆಚ್ಚದಲ್ಲಿ ಅತ್ಯಂತ ಗುಣಮಟ್ಟದಿಂದ ಪೂರ್ಣಗೊಳಿಸಲಾಗಿದೆ. ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಸೇತುವೆಯನ್ನು ಆಗಸ್ಟ್ 30ರಂದು ಅಧಿಕೃತವಾಗಿ ಮುಕ್ತಗೊಳಿಸಲಾಗುವುದು.”

​”ಸೇತುವೆ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಒಯ್ಯಲು ಪಡಬಾರದ ಕಷ್ಟ ಪಡುತ್ತಿದ್ದೆವು. ಶಾಸಕ ಅಶೋಕ ಮನಗೂಳಿ ಅವರ ಇಚ್ಛಾಶಕ್ತಿಯಿಂದಾಗಿ ₹3.50 ಕೋಟಿ ಅನುದಾನದಲ್ಲಿ ಸೇತುವೆ ದುರಸ್ತಿಯಾಗಿ ರಸ್ತೆ ಸರಿಹೊಂದಿದ್ದು, ನಮಗೆಲ್ಲ ಅನುಕೂಲವಾಗಿದೆ

LEAVE A REPLY

Please enter your comment!
Please enter your name here