ಬಾಗಲಕೋಟೆ:ಕರ್ನಾಟಕದ ಹಲವು ಜಿಲ್ಲೆಗಳು ಭೀಕರ ಬರಗಾಲ ಎದುರಿಸುತಿದ್ದು ಅದರಲ್ಲೂ ಉತ್ತರ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳು ಬರಗಾಲದ ಬವಣೆ ಅನುಭವಿಸುತ್ತವೆ.

ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರ ಪ್ರತಿನಿಧಿಸುವ ಕರ್ನಾಟಕ ರಾಜ್ಯ ಸರ್ಕಾರದ ಸಚಿವ ಸಂಪುಟದ ಮಂತ್ರಿ ವಿಜಯಾನಂದ ಕಾಶಪ್ಪನವರಿಗಿಲ್ಲಾ ಸ್ವಕ್ಷೇತ್ರದ ರೈತಪರ ಚಿಂತನೆ.ಹುನಗುಂದ ತಾಲೂಕು ಮಳೆ ಬಾರದೆ ಭೀಕರ ಬರಗಾಲ ಎದುರಿಸುತಿದ್ದು ದುಬಾರಿ ಬೀಜಗೊಬ್ಬರ ಹಾಕಿ ಬಿತ್ತಿದ ಬೆಳೆಗಳು ಬರಗಾಲದಿಂದಾಗಿ ನೆಲಬಿಟ್ಟು ಮೇಲೆ ಎದ್ದಿಲ್ಲಾ.ರೈತರು ಸಾಲಸೂಲಮಾಡಿ ಬರಗಾಲಕ್ಕೆ ತತ್ತರಿಸಿ ತಲೆ ಮೇಲೆ ಕೈಹೊತ್ತು ಆಕಾಶ ನೋಡುತಿದ್ದರೂ ಸಹ ಈ ಕ್ಷೇತ್ರದ ಶಾಸಕರುಮಾತ್ರ ರೈತರ ಪರ ಕಾಳಜಿ ವಹಿಸಿ ಹುನಗುಂದ ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸಲು ಪ್ರಯತ್ನಿಸುತ್ತಿಲ್ಲವೆನಿಸುತ್ತಿದೆ.

ಅವರು ತಮ್ಮ ಮಂತ್ರಿಪದವಿಯ ಅಮಲಿನಲ್ಲೇ ಕಾಲಹರಣ ಮಾಡುತ್ತಿದ್ದಾರೆನೋ ಎಂದು ರೈತರು ಗೊಣಗುತಿದ್ದಾರೆ.ನಿಜವಾದ ರೈತಪರ ಕಾಳಜಿ ಇದ್ದರೆ ಮಂತ್ರಿಗಳು ಸ್ವಕ್ಷೇತ್ರದಲ್ಲಿ ಬರ ಅಧ್ಯಯನಮಾಡಿ ನೈಜ ಸ್ಥಿತಿ ತಿಳಿದುಕೊಂಡು ತಾಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಬೇಕೆಂದು ಅಖಿಲಕರ್ನಾಟಕ ರೈತ ಸಂಘ ಹಸಿರುಸೇನೆ ಭ್ರಷ್ಟಾಚಾರ ನಿರ್ಮೂಲನೆ ಘದ ಜಿಲ್ಲಾ ಅಧ್ಯಕ್ಷ ನಾಗರಾಜ್ ಹೂಗಾರ ಆಗ್ರಹಿಸಿದ್ದಾರೆ.






