ಬೆಂಗಳೂರು:ಸ್ನೇಹಾಲಯ ಈ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಚಂದ್ರಗಿರಿ. ಈ ಚಂದ್ರಗಿರಿ ಎಂಬ ಊರಿನಲ್ಲಿ ಪ್ರತಿ ಅಮಾವಾಸ್ಯೆ ಗೆ ನಡೆಯುವ ಆತ್ಮಹತ್ಯೆಗಳು.ಅದನ್ನು ಭೇದಿಸಲು ಬರುವ ನಾಲ್ಕು ಮಂದಿಗೆ ಎದುರಾಗುವ ಸಮಸ್ಯೆಗಳು.ಅವಗಳಿಂದ ಪಾರಾಗುವ ರೋಚಕ ಸನ್ನಿವೇಶಗಳ ಹೂರಣವನ್ನು ಒಳಗೊಂಡಿರುವ ಚಂದ್ರಗಿರಿ ಸಿನಿಮಾಗೆ ರಾಜೀವ್ ಕೃಷ್ಣ ಗಾಂಧಿ ರವರು ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಸಕೋಟೆ ವೈಟ್ ಫೀಲ್ಡ್  ಬೆಳ್ಳಿಕೆರೆ ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ  ಚಂದ್ರಗಿರಿ ಚಿತ್ರದಲ್ಲಿ  ಉಗ್ರಮ್ ರವಿ,ಶೋಭರಾಜ್ ,ಶಂಖನಾದ ಆಂಜಿನಪ್ಪ, ಅನ್ನಪೂರ್ಣ, ಬೆಂಗಳೂರು ಮನೋ,, ಮರಿಸ್ವಾಮಿ, ಪಂಚಾಕ್ಷರಯ್ಯ, ವೀರಧನುಷ್, ಕಿಶೋರ್ ಕಾಸರಗೋಡು, ವೈಭವಿ ನಾಗರಜ್.ಬಲರಾಂ ಪಾಚಾಳ್,ರಂಜನ್ ಶೆಟ್ಟಿ. ಭಕ್ತರಹಳ್ಳಿ ರವಿ, ಸ್ವಸ್ತಿಕ್ ಶಂಕರ್. ಸೆವನ್ ರಾಜ್, ಯಶಸ್, ರೂಪಶ್ರಿ, ಕಿರಣ್ ಕುಮಾರ್ ಗಟ್ಟಿಗನಬ್ಬೆ. ಮೊದಲಾದವರು ನಟಿಸುತ್ತಿರುವ ಚಂದ್ರಗಿರಿ ಚಿತ್ರಕ್ಕೆ ಎಂ ಎಲ್ ರಾಜ, ಹಿನ್ನೆಲೆ ಸಂಗೀತ. ಛಾಯಾಗ್ರಹಣ ಗುರುದತ್ ಮುಸರಿ, ಸಂಕಲನ ಡಿ ಮಲ್ಲಿ,ಸಾಹಸ ವೈಲೆಂಟ್ ವೇಲು,ಪ್ರಸಾಧನ ಮೋಹನ್ ಕುಮಾರ್, ಸ್ಥಿರಚಿತ್ರಣ ಇಂದ್ರಕುಮಾರ, ಕಲಾ ನಿರ್ದೇಶನ ಮಲ್ಲಿಕಾರ್ಜುನ, ಎಂ ಜಿ ಕಲ್ಲೇಶ್,   ವಿ.ಎಂ.ಎಸ್.ಗೋಪಿ  ಪತ್ರಿಕಾ ಸಂಪರ್ಕ ಮಾಡಿದ್ದಾರೆ. ಚಂದ್ರಗಿರಿ ಚಿತ್ರತಂಡ ಈಗ ಎರಡನೇ ಹಂತಹ ಚಿತ್ರೀಕರಣಕ್ಕಾಗಿ ಸಕಲೇಶಪುರ ಚಿಕ್ಕಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದಾರೆ. 

LEAVE A REPLY

Please enter your comment!
Please enter your name here