ಅಸ್ಸಾಂನ ಜೋರ್ಹಾಟ್‌ನಲ್ಲಿರುವ ರೂರಿಯಾ ವಾಯುಪಡೆ ಕೇಂದ್ರದಲ್ಲಿ ಶನಿವಾರ ಸಂಭವಿಸಿದ AN-32 ಸಾರಿಗೆ ವಿಮಾನ ದುರಂತದಲ್ಲಿ ಭಾರತೀಯ ವಾಯುಪಡೆಯ ಐವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಭಾರತೀಯ ವಾಯುಪಡೆ (IAF) ಅಧಿಕಾರಿಗಳು ತಿಳಿಸಿದ್ದಾರೆ…ವಿಮಾನದ ಸಹ ಪೈಲಟ್ (Co-pilot) ಅಪಘಾತದಿಂದ ಪಾರಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.“ಈ ದುರ್ಘಟನೆಯಲ್ಲಿ ಜೀವ ಕಳೆದುಕೊಂಡವರ ಕುಟುಂಬಗಳ ದುಃಖದಲ್ಲಿ ಭಾರತೀಯ ವಾಯುಪಡೆ ಭಾಗಿಯಾಗಿದ್ದು, ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತದೆ” ಎಂದು IAF ತನ್ನ ಅಧಿಕೃತ X ಖಾತೆಯಲ್ಲಿ ತಿಳಿಸಿದೆ.

ಈ ದುರ್ಘಟನೆಯಲ್ಲಿ ಮೃತಪಟ್ಟ ಐವರು ಸಿಬ್ಬಂದಿಗಳಾದ

Prashant Singh (ಸ್ಕ್ವಾಡ್ರನ್ ಲೀಡರ್)
Shubham Kumar (ಫ್ಲೈಟ್ ಲೆಫ್ಟಿನೆಂಟ್)
Jitendra Sharma (ಸಾರ್ಜೆಂಟ್)
Khemaram Kumawat (ಅಗ್ನಿವೀರ್ ವಾಯು)
Danish Alam (ಅಗ್ನಿವೀರ್ ವಾಯು)ಎಂದು ಗುರುತಿಸಲಾಗಿದೆ.
ಘಟನೆಯ ವರದಿ.

AN-32 ಸಾರಿಗೆ ವಿಮಾನವು ಅರುಣಾಚಲ ಪ್ರದೇಶದಿಂದ ಜೋರ್ಹಾಟ್‌ಗೆ ಬರುತ್ತಿದ್ದ ವೇಳೆ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ವಿಮಾನವು ಮೇಲಿನ ಅಸ್ಸಾಂ ಪ್ರದೇಶದಲ್ಲಿರುವ ತಂತ್ರಜ್ಞಾನದ ದೃಷ್ಟಿಯಿಂದ ಮಹತ್ವದ ರೂರಿಯಾ ವಾಯುಪಡೆ ಕೇಂದ್ರದ ಆವರಣದಲ್ಲೇ ಪತನಗೊಂಡಿದೆ.

ರಕ್ಷಣಾ ಸಚಿವರಾರದ ಶ್ರೀ ರಾಜನಾಥ್ ಸಿಂಗ್ ರವರು ಈ ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜೋರ್ಹಾಟ್‌ನಲ್ಲಿ ಸಂಭವಿಸಿದ AN-32 ವಿಮಾನ ದುರಂತದಲ್ಲಿ ಐವರು ವಾಯುಯೋಧರನ್ನು ಕಳೆದುಕೊಂಡಿರುವುದು ಅತ್ಯಂತ ದುಃಖದ ಸಂಗತಿ. ಕರ್ತವ್ಯ ನಿರ್ವಹಣೆಯ ವೇಳೆ ಅವರು ನೀಡಿದ ಅತ್ಯುನ್ನತ ತ್ಯಾಗವನ್ನು ದೇಶ ಸದಾ ಹೆಮ್ಮೆಯಿಂದ ಸ್ಮರಿಸಲಿದೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು” ಎಂದು ಅವರು ತಿಳಿಸಿದ್ದಾರೆ.ವಾಯುಪಡೆ ಕೇಂದ್ರದ ಸಮೀಪ ವಾಸಿಸುವ ಸ್ಥಳೀಯ ನಿವಾಸಿಯೊಬ್ಬರು, “ವಿಮಾನದ ಹಿಂಭಾಗ ಕಾಣುತ್ತಿತ್ತು ಮತ್ತು ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಏರುತ್ತಿತ್ತು. ವಿಮಾನವು ನಿಶ್ಚಲವಾಗಿತ್ತು. ನಾನು ಅಲ್ಲಿಂದ ದೂರ ಸರಿಯಲು ಆರಂಭಿಸಿದಾಗ ಭಾರೀ ಸ್ಫೋಟ ಸಂಭವಿಸಿತು. ಅದರ ಪ್ರಭಾವದಿಂದ ಇಡೀ ಪ್ರದೇಶವೇ ನಡುಗಿತು” ಎಂದು ಹೇಳಿದ್ದಾರೆ.

AN-32 ಒಂದು ಸೋವಿಯತ್ ಯುಗದ ಸಾರಿಗೆ ವಿಮಾನವಾಗಿದ್ದು, ಭಾರತೀಯ ವಾಯುಪಡೆಯ ಪ್ರಮುಖ ಲಾಜಿಸ್ಟಿಕ್ಸ್ ಹಾಗೂ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 1986ರಿಂದ ಭಾರತದಲ್ಲಿ ಸುಮಾರು 22 AN-32 ವಿಮಾನ ಅಪಘಾತಗಳು ಸಂಭವಿಸಿವೆ. 2025ರಲ್ಲಿಯೂ ಇದೇ ಮಾದರಿಯ ವಿಮಾನ ಅಪಘಾತಕ್ಕೀಡಾಗಿತ್ತು. ಆದಾಗ್ಯೂ, ದೇಶದಾದ್ಯಂತ ಸೇನಾ ಮತ್ತು ಲಾಜಿಸ್ಟಿಕ್ಸ್ ಕಾರ್ಯಾಚರಣೆಗಳಿಗೆ ಈ ವಿಮಾನವನ್ನು ಇನ್ನೂ ವ್ಯಾಪಕವಾಗಿ ಬಳಸಲಾಗುತ್ತಿದೆ. ಈ ಘಟನೆ, ಕೆಲವು ತಿಂಗಳ ಹಿಂದೆ Sukhoi Su-30MKI ಯುದ್ಧ ವಿಮಾನವು ಅಸ್ಸಾಂನ ಕಾರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ತರಬೇತಿ ಹಾರಾಟದ ವೇಳೆ ಪತನಗೊಂಡಿದ್ದ ಘಟನೆಯ ನಂತರ ಸಂಭವಿಸಿರುವ ಮತ್ತೊಂದು ದೊಡ್ಡ ಆಘಾತವಾಗಿದೆ.ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here