ಬೆಂಗಳೂರು :ಮುಖ್ಯಮಂತ್ರಿಗಳ ತವರು ಕ್ಷೇತ್ರವಾದ ಕನಕಪುರ ಕ್ಷೇತ್ರದ ಕನಕಪುರ ಘಟಕ ದಲ್ಲಿ ಘಟಕ ವ್ಯವಸ್ಥಾಪಕರ ತನ್ನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮೇಲೆ ಘಟಕದಲ್ಲೇ ಹಲ್ಲೆ ಮಾಡಿಸುತ್ತಿರುವುದು
ಕನಕಪುರ ಘಟಕದ ಘಟಕ ವ್ಯವಸ್ಥಾಪಕರಾದ ಸಚಿನ್ ರವರು ಮೂಲತ ಕನಕಪುರದವರಾಗಿದ್ದು ಮುಖ್ಯಮಂತ್ರಿಗಳ ಬೆಂಬಲವಿದೆ ಎಂದು ಘಟಕದಲ್ಲಿ ಯಾವುದೇ ನೌಕರರು ಅವರು ಮಾಡುತ್ತಿರುವ ಅನ್ಯಾಯಗಳ ವಿರುದ್ಧ ಪ್ರಶ್ನೆ ಮಾಡುವ ಆಗಿಲ್ಲ ಪ್ರಶ್ನೆ ಮಾಡಿದರೆ ಅವರ ಮೇಲೆ ಹಲ್ಲೆ ಮಾಡಿಸುವುದು ಅವರ ಪ್ರವೃತಿಯಾಗಿರುತ್ತದೆ ಇಂದು ಬೆಳಗ್ಗೆ ಚಾಲಕರಾದ ಶಿವಕುಮಾರ್ ಅವರು ಘಟಕದಲ್ಲಿ ನಡೆಯುತ್ತಿರುವ ಅನ್ಯಾಯ ಹಾಗೂ ಲಂಚಾವತಾರದ ಬಗ್ಗೆ ಘಟಕದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಸಾಯಂಕಾಲ ಕರ್ತವ್ಯ ಮುಗಿಸಿ ಘಟಕಕ್ಕೆ ಬಂದ ವೇಳೆಯಲ್ಲಿ ಘಟಕ ವ್ಯವಸ್ಥಾಪಕರಾದ ಸಚಿನ್ ರವರು ಐದು ಜನರನ್ನು ಅಂದರೆ ಮುನಿ ಬಸವರಾಜುಕೆ ಟಿ ಕುಮಾರ್.ಶಿವಮೂರ್ತಿ. ಹಾಗೂ ದೇವರಾಜ್.

ಅವರನ್ನು ಘಟಕಕ್ಕೆ ಕರೆಸಿಕೊಂಡು ಅವರ ಸಮ್ಮುಖದಲ್ಲೇ ತನ್ನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಎಂಬ ಚಾಲಕನಿಗೆ ಮನಸೋ ಇಚ್ಛೆ ತಳಿತಿರುತ್ತಾರೆ ಅವರು ಘಟನೆ ನಡೆದ ಸ್ಥಳದಲ್ಲಿ ಇದ್ದರೂ ಸಹ ಗಲಾಟೆಯನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ ಹಾಗಾಗಿ ಈ ಘಟನೆಯು ಪೂರ್ವ ನಿಯೋಜಿತವಾಗಿದ್ದು ಈ ಘಟನೆಗೆ ಕಾರಣರಾಗಿರುವಂತ ಘಟಕ ವ್ಯವಸ್ಥಾಪಕರು ಹಾಗೂ ಉಳಿದ ಐದು ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಗೂಂಡಾ ವರ್ತನೆ ಆದರೆ ಇನ್ನು ಉಳಿದ ಕ್ಷೇತ್ರಗಳ ಗತಿ ಏನು ಎಂದು ನೌಕರರು,ಜನಸಾಮಾನ್ಯರ ಆತಂಕ!!

LEAVE A REPLY

Please enter your comment!
Please enter your name here