ರಾಜ್ಯದ ಜನರ ಆಶೀರ್ವಾದದೊಂದಿಗೆ ನಾವು ಅಧಿಕಾರಕ್ಕೆ ಬಂದು ಮೂರು ವರ್ಷಗಳು ಪೂರೈಸುತ್ತಿರುವ ಈ ಸಾರ್ಥಕ ಸಂದರ್ಭದಲ್ಲಿ ನಮ್ಮ ಸರ್ಕಾರದ ಎಲ್ಲಾ ಸಾಧನೆಗಳ‌ ಶ್ರೇಯವನ್ನು ಪ್ರತಿಯೊಬ್ಬ ಕನ್ನಡಿಗನಿಗೂ ಅರ್ಪಿಸುತ್ತಿದ್ದೇವೆ.

ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಪ್ರತಿ ಮಾತಿಗೂ ಬದ್ಧರಾಗಿ ನಡೆಯುವ ಮೂಲಕ ನುಡಿದಂತೆ ನಡೆದ ಹೆಮ್ಮೆ ನಮಗಿದೆ. ಸಶಕ್ತ, ಸಮೃದ್ಧ, ಸ್ವಾಭಿಮಾನಿ ಕರ್ನಾಟಕದ ಮರುನಿರ್ಮಾಣ ಕಾರ್ಯದಲ್ಲಿ ಬಹಳಷ್ಟು ದೂರ ಕ್ರಮಿಸಿದ್ದೇವೆ, ನಮ್ಮ ಈ ಪ್ರಯತ್ನ ಮುಂದೆ ಇನ್ನಷ್ಟು ಶೀಘ್ರ ಹಾಗೂ ಪರಿಣಾಮಕಾರಿಯಾಗಿರಲಿದೆ.

ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಇಂದು ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಇದೇ ವೇಳೆ ಸುಮಾರು 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿಗಳು ತುಮಕೂರು ಜಿಲ್ಲಾ ವ್ಯಾಪ್ತಿಯ ₹682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ನೇಮಕಾತಿ ಪತ್ರ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಿಸಿದರು.

ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳು ಪೂರೈಸುತ್ತಿರುವ ಸಂದರ್ಭದಲ್ಲಿ ಇಂದು ತುಮಕೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಆಯೋಜಿಸಿದ್ದ “ಮೂರು ವರ್ಷಗಳ ಸಾಧನಾ ಸಮರ್ಪಣಾ” ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.

ಇದೇ ವೇಳೆ ಸುಮಾರು 1.52 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಮುಖ್ಯಮಂತ್ರಿಗಳು ತುಮಕೂರು ಜಿಲ್ಲಾ ವ್ಯಾಪ್ತಿಯ ₹682 ಕೋಟಿ ಮೊತ್ತದ ಬೃಹತ್ ಅಭಿವೃದ್ಧಿ ಕಾರ್ಯಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ನೇಮಕಾತಿ ಪತ್ರ ಸೇರಿದಂತೆ ಹಲವು ಸವಲತ್ತುಗಳನ್ನು ವಿತರಿಸಿದರು.

ಈ ಮೂರು ವರ್ಷಗಳಲ್ಲಿ ನಿಮಗಾಗಿ ನಾವು ಸಲ್ಲಿಸಿದ ಸೇವೆಯ ಮಾಹಿತಿ ಹೀಗಿದೆ..

₹173 ಕೋಟಿ ವೆಚ್ಚದಲ್ಲಿ ರೈತರಿಗೆ ಹೈಟೆಕ್‌ ಕೃಷಿ ಯಂತ್ರೋಪಕರಣಗಳ ವಿತರಣೆ ; 524 ಹಾರ್ವೆಸ್ಟರ್‌ ಹಬ್‌ಗಳ ಸ್ಥಾಪನೆ

ತೊಗರಿ ಬೆಳೆ ನೆಟೆ ರೋಗದಿಂದ ಹಾನಿಗೊಳಗಾದ ಕಲಬುರಗಿ, ಯಾದಗಿರಿ, ಬೀದರ್‌ ಮತ್ತು ವಿಜಯಪುರ ಜಿಲ್ಲೆಗಳ 2,80,154 ರೈತರ ಖಾತೆಗೆ ₹223 ಕೋಟಿ ಪರಿಹಾರ ನೇರ ಪಾವತಿ

ಕಳೆದ 3 ವರ್ಷಗಳ ಅವಧಿಯಲ್ಲಿ ₹91.08 ಕೋಟಿ ಸಹಾಯಧನದಲ್ಲಿ 4,36,729 ರೈತರಿಗೆ ಕೃಷಿ ಸಂಸ್ಕರಣೆ ಘಟಕಗಳ ವಿತರಣೆ.

2,23,141 ಹೆಕ್ಟೇರ್‌ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿಗೆ ನೀರಾವರಿ ಅಳವಡಿಕೆ ; 2,36,456 ರೈತರಿಗೆ ಅನುಕೂಲ.ಹೊಸದಾಗಿ 89,070 ಹೆಕ್ಟೇರ್‌ನಲ್ಲಿ ತೋಟಗಳನ್ನು ಸ್ಥಾಪಿಸಲು 1,55,530 ರೈತರಿಗೆ ನೆರವು.ಮಳೆ ನೀರನ್ನು ಸಂರಕ್ಷಿಸಿ ಅಂತರ್ಜಲ ಮಟ್ಟವನ್ನು ವೃದ್ಧಿಸಲು 2,515 ಕೃಷಿ ಹೊಂಡಗಳನ್ನು ನಿರ್ಮಿಸಲು 2,878 ರೈತರಿಗೆ ಸಹಾಯಧನ.83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹70 ಸಾವಿರ ಕೋಟಿ ಕೃಷಿ ಸಾಲ ವಿತರಣೆ.

ಕಳೆದ ಮೂರು ವರ್ಷಗಳಲ್ಲಿ ಪ್ರತ್ಯೇಕ ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕಾಗಿ 9,416 ರೇಷ್ಮೆ ಬೆಳೆಗಾರರಿಗೆ ₹223.62 ಕೋಟಿ ಸಹಾಯಧನ ವಿತರಣೆ.3,794.53 ಹೆಕ್ಟೇರ್‌ ಪ್ರದೇಶದಲ್ಲಿ ಹಿಪ್ಪುನೇರಳೆ ತೋಟಕ್ಕೆ ಹನಿ ನೀರಾವರಿ ಅಳವಡಿಸಲು 4,069 ರೇಷ್ಮೆ ಬೆಳೆಗಾರರಿಗೆ ₹35.03 ಕೋಟಿ ಸಹಾಯಧನ ವಿತರಣೆ.ರೇಷ್ಮೆ ನೂಲು ಬಿಚ್ಚಾಣಿಕೆ ಚಟುವಟಿಕೆಗೆ ಅವಶ್ಯವಿರುವ 842 ಯಂತ್ರೋಪಕರಣಗಳ ಅಳವಡಿಕೆಗೆ ₹10.36 ಕೋಟಿ ಸಹಾಯಧನ ಸೌಲಭ್ಯ.

2023-24ನೇ ಸಾಲಿನಲ್ಲಿ 29.81 ಲಕ್ಷ ರೈತರಿಗೆ ₹24,499.87 ಕೋಟಿ, 2024-25ನೇ ಸಾಲಿನಲ್ಲಿ 29.58 ಲಕ್ಷ ರೈತರಿಗೆ ₹25,613.86 ಕೋಟಿ, 2025-26ನೇ ಸಾಲಿನಲ್ಲಿ 28.63 ಲಕ್ಷ ರೈತರಿಗೆ ₹25,656.48 ಕೋಟಿ ಕೃಷಿ ಸಾಲ ವಿತರಣೆ.2025-26ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ 1,00,133 ನೋಂದಾಯಿತ ರೈತರಿಂದ ಸುಮಾರು 19,29.326 ಕ್ವಿಂಟಾಲ್‌ ಪ್ರಮಾಣದ ಉತ್ಪನ್ನಗಳನ್ನು ₹1,308 ಕೋಟಿ ಮೌಲ್ಯದಲ್ಲಿ ಖರೀದಿ.ಸಹಕಾರ ಸಂಘಗಳ ನಿಬಂಧಕರ ಕಚೇರಿಯ ಆವರಣದಲ್ಲಿ ₹19.43 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಹಕಾರ ಸಮೃದ್ಧಿ ಸೌಧ ಕಟ್ಟಡ ಲೋಕಾರ್ಪಣೆ.

ತುಂಗಭದ್ರಾ ಅಣೆಕಟ್ಟೆಯ ಎಲ್ಲಾ 33 ಗೇಟುಗಳನ್ನು ಬದಲಾಯಿಸಿ ಹೊಸ ಗೇಟುಗಳನ್ನು ಅಳವಡಿಸುವ ಕಾರ್ಯ ನಿಗದಿತ ಅವಧಿಯೊಳಗೆ ಪೂರ್ಣ.ಕೊಟ್ಟಲಗಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ.ಗೂಗಲ್‌ ಬ್ರಿಡ್ಜ್‌ ಕಂ ಬ್ಯಾರೇಜ್‌ನಿಂದ ಗಣೇಕಲ್‌ ಸಮತೋಲನಾ ಜಲಾಶಯಕ್ಕೆ ನೀರನ್ನು ತುಂಬಿಸುವ ಯೋಜನೆ ಲೋಕಾರ್ಪಣೆ.ರಾಜ್ಯದ 424 ಕೆರೆಗಳಿಗೆ ಕಾವೇರಿ, ಭೀಮಾ, ವರದಾ ನದಿಯೂ ಸೇರಿದಂತೆ ವಿವಿಧ ಜಲಮೂಲಗಳಿಂದ ನೀರು ತುಂಬಿಸುವ ಯೋಜನೆಗಳ ಲೋಕಾರ್ಪಣೆ.

ಕಳೆದ 3 ವರ್ಷಗಳ ಅವಧಿಯಲ್ಲಿ ₹1,707.37 ಕೋಟಿ ಮೊತ್ತದ 28 ಕಾಮಗಾರಿಗಳು ಪೂರ್ಣ ; ಇದರಿಂದ 8519.33 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ.ಪಶ್ಚಿಮ ವಾಹಿನಿ ಯೋಜನೆಯಡಿ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿಗಾಗಿ ₹142.39 ಕೋಟಿ ವೆಚ್ಚದಲ್ಲಿ 22 ಹೊಸ ಕೆರೆಗಳ ನಿರ್ಮಾಣ, ₹1035.57 ಕೋಟಿ ವೆಚ್ಚದಲ್ಲಿ 568 ಕೆರೆಗಳ ಆಧುನೀಕರಣ.₹1976.13 ಕೋಟಿ ವೆಚ್ಚದಲ್ಲಿ 1021 ಅಣೆಕಟ್ಟು ಪಿಕಪ್‌, ಬಾಂದಾರಗಳ ನಿರ್ಮಾಣ ಹಾಗೂ ₹3070.93 ಕೋಟಿ ವೆಚ್ಚದಲ್ಲಿ 391 ಏತ ನೀರಾವರಿ ಯೋಜನೆಗಳ ಅನುಷ್ಠಾನ.

ರಾಜ್ಯಾದ್ಯಂತ 900 ಸರ್ಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಉನ್ನತೀಕರಣ.2025-26ನೇ ಸಾಲಿನಲ್ಲಿ ಐತಿಹಾಸಿಕ ಫಲಿತಾಂಶ ದಾಖಲು; ಪಿಯುಸಿಯಲ್ಲಿ ಶೇ.86.48 ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.94.10 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.ಕಳೆದ 3 ವರ್ಷಗಳಲ್ಲಿ ಒಟ್ಟು 9,522 ಸರ್ಕಾರಿ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯವರೆಗೆ ದ್ವಿಭಾಷಾ ವಿಭಾಗ ಪ್ರಾರಂಭ.2025-26ನೇ ಸಾಲಿನಲ್ಲಿ ಸರ್ಕಾರಿ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ 51,000 ಶಿಕ್ಷಕರು ಹಾಗೂ ಉಪನ್ಯಾಸಕರ ನೇಮಕ.

ಗೃಹ ಆರೋಗ್ಯ ಯೋಜನೆ ಜಾರಿ ; 60,38,825 ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ, ಆರೋಗ್ಯ ತಪಾಸಣೆ.ಆಶಾಕಿರಣ ಯೋಜನೆಯಡಿ 43 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ; 1.05 ಲಕ್ಷ ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ.ಸ್ವಚ್ಛತೆ ನನ್ನ ಮೈತ್ರಿ – ಮುಟ್ಟಿನ ಕಪ್‌ ಯೋಜನೆಯಡಿ 15,000 ಹೆಣ್ಣು ಮಕ್ಕಳಿಗೆ ಮುಟ್ಟಿನ ಕಪ್‌ಗಳ ವಿತರಣೆ.

ತುಮಕೂರಿನಲ್ಲಿ ನಡೆದ ಸರ್ಕಾರದ ಮೂರುವರ್ಷಗಳ ಸಾಧನಾ ಸಮಾವೇಶದಲ್ಲಿ ಸರ್ಕಾರ ತನ್ನ ಸಾಧನೆಯ ಕೆಲಸಗಳ ವಿವರ ನೀಡಿತು.

LEAVE A REPLY

Please enter your comment!
Please enter your name here