ಚನ್ನೈ:ರಾಜಕೀಯ ಹಿನ್ನೆಲೆ ಇಲ್ಲದ ಧಾಮು, ಒಬ್ಬ ಸಾಮಾನ್ಯ ಪ್ರಜೆಯಾಗಿ ಚುನಾವಣಾ ಅಖಾಡಕ್ಕಿಳಿದಿದ್ದರು. ನಟ ವಿಜಯ್ ಅವರ ‘ವಿಜಯ್ ಮಕ್ಕಳ್ ಇಯಕ್ಕಂ’ ಸಂಘಟನೆಯಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಜನರ ದೈನಂದಿನ ಹೋರಾಟಗಳ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು. ದಿನನಿತ್ಯ ರಸ್ತೆಗಳಲ್ಲಿ ಪ್ರಯಾಣಿಕರ ಸೇವೆ ಮಾಡುತ್ತಿದ್ದ ವ್ಯಕ್ತಿ ಇಂದು ಶಾಸಕರಾಗಿ ವಿಧಾನಸಭೆ ಪ್ರವೇಶಿಸುತ್ತಿರುವುದು, ಬದಲಾವಣೆ ಬಯಸಿದ್ದ ಮತದಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ಮೀನುಗಾರ ಸಮುದಾಯ ಮತ್ತು ಕಾರ್ಮಿಕ ವರ್ಗವೇ ಹೆಚ್ಚಿರುವ ರಾಯಪುರಂ ಕ್ಷೇತ್ರದಲ್ಲಿ ಧಾಮು ಅವರ ಸ್ಥಳೀಯ ಪ್ರಣಾಳಿಕೆ ಕೆಲಸ ಮಾಡಿದೆ. ಹಾರ್ಬರ್ ಮೂಲಸೌಕರ್ಯ ಅಭಿವೃದ್ಧಿ, ಮೀನುಗಾರರಿಗೆ ಕಲ್ಯಾಣ ಯೋಜನೆಗಳು, ಕರಾವಳಿ ಭದ್ರತೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಭರವಸೆಗಳು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.
1990ರ ದಶಕದಿಂದ ರಾಯಪುರಂನಲ್ಲಿ ಹಿಡಿತ ಹೊಂದಿದ್ದ ಎಐಎಡಿಎಂಕೆಗೆ ಈ ಸೋಲು ಭಾರಿ ಹಿನ್ನಡೆಯಾಗಿದೆ. ಮತ್ತೊಂದೆಡೆ, ಹಾಲಿ ಶಾಸಕರನ್ನು ಬದಲಿಸಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಡಿಎಂಕೆಯ ಪ್ರಯೋಗವೂ ವಿಫಲವಾಗಿದ್ದು, ಮತದಾರರು ಪರ್ಯಾಯ ರಾಜಕೀಯ ಶಕ್ತಿಯನ್ನು ಕೈಹಿಡಿದಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಟಿವಿಕೆ ಪಕ್ಷ ರಾಯಪುರಂ ಕ್ಷೇತ್ರದಲ್ಲಿ ಸಾಮಾನ್ಯ ಆಟೋ ಚಾಲಕ ಕೆ. ವಿಜಯ್ ಧಾಮು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ತಾನಾಯಿತು ತಮ್ಮ ದುಡಿಮೆ ಆಯಿತು ಎಂದುಕೊಂಡು ರಿಕ್ಷಾ ಓಡಿಸಿ ಕುಟುಂಬವನ್ನು ನಿಭಾಯಿಸುತ್ತಿದ್ದ ವಿಜಯ್ ಧಾಮು ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದರು.

ವಿಜಯ್ ಅವರ ಗೆಲುವು ದೇಶದ ರಾಜಕಾರಣದಲ್ಲಿ ಮೈಲುಗಲ್ಲು ಸೃಷ್ಟಿಸಿದೆ. ಸಮೀಕ್ಷೆಗಳ ಲೆಕ್ಕಚಾರವನ್ನೇ ಟಿವಿಕೆ ಬುಡಮೇಲು ಮಾಡಿದೆ. ವಿಜಯ್ ಗೆಲುವನ್ನು ತಮಿಳುನಾಡಿನಲ್ಲಿ ಸಂಭ್ರಮಿಸಲಾಗುತ್ತಿದೆ.
ಆಡಳಿತರೂಢಾ ಡಿಎಂಕೆಗೆ ವಿಜಯ್ ʼಮಾಸ್ಟರ್ʼ ಸ್ಟ್ರೋಕ್ ಕೊಟ್ಟಿದ್ದಾರೆ. ತಮಿಳುನಾಡಿನ ನೂತನ ʼಜನ ನಾಯಕʼನ ಆಯ್ಕೆಗೆ ಕ್ಷಣಗಣನೆ ಬಾಕಿ ಉಳಿದಿದೆ.
ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಸರ್ಕಾರ ರಚನೆಗೆ ತಯಾರಿ ನಡೆಸಿದೆ. ಟಿವಿಕೆಗೆ ಇದು ಮೊದಲ ಚುನಾವಣೆ ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ವಿಜಯ್ ಬಹುತೇಕ ಕಡೆ ಜಯಭೇರಿ ಬಾರಿಸಿದ್ದಾರೆ.
ಟಿವಿಕೆಯ ಅಭ್ಯರ್ಥಿಗಳಲ್ಲಿ ಸಾಮಾನ್ಯ ಹೆಚ್ಚು. ಚಾಲಕನ ಪುತ್ರ,  ಆಟೋ ಚಾಲಕ.. ಹೀಗೆ ಮೊದಲ ಬಾರಿ ಚುನಾವಣೆಗೆ ನಿಂತು ಅಮೋಘ ಗೆಲುವು ಕಂಡಿದ್ದಾರೆ.
ಟಿವಿಕೆ ಪಕ್ಷ ರಾಯಪುರಂ ಕ್ಷೇತ್ರದಲ್ಲಿ ಸಾಮಾನ್ಯ ಆಟೋ ಚಾಲಕ ಕೆ. ವಿಜಯ್ ಧಾಮು ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿತು. ತಾನಾಯಿತು ತಮ್ಮ ದುಡಿಮೆ ಆಯಿತು ಎಂದುಕೊಂಡು ರಿಕ್ಷಾ ಓಡಿಸಿ ಕುಟುಂಬವನ್ನು ನಿಭಾಯಿಸುತ್ತಿದ್ದ ವಿಜಯ್ ಧಾಮು ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದರು.
ಅದೃಷ್ಟವೆಂಬಂತೆ ರಾಯಪುರಂ ಕ್ಷೇತ್ರದಲ್ಲಿ ಆಟೋ ಚಾಲಕ ಕೆ. ವಿಜಯ್ ಧಾಮು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಆ ಮೂಲಕ ರಾಜ್ಯದ ರಾಜಕೀಯ ದಿಗ್ಗಜರಿಗೆ ಶಾಕ್ ನೀಡಿ ಇತಿಹಾಸ ಬರೆದಿದ್ದಾರೆ.
ವಿಜಯ್ ಧಾಮು ಅವರು 55,000ಕ್ಕೂ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಸುಮಾರು 14,000 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಈ ಫಲಿತಾಂಶವು ಎಐಎಡಿಎಂಕೆ (AIADMK) ಹಿರಿಯ ನಾಯಕ ಮತ್ತು ಐದು ಬಾರಿ ಶಾಸಕರಾಗಿದ್ದ ಡಿ. ಜಯಕುಮಾರ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. ಒಂದು ಕಾಲದಲ್ಲಿ ಎಐಎಡಿಎಂಕೆಯ ಭದ್ರಕೋಟೆಯಾಗಿದ್ದ ರಾಯಪುರಂನಲ್ಲಿ ಇದು ಸಂಚಲನ ಮೂಡಿಸಿದೆ.
ಡಿಎಂಕೆ (DMK) ಅಭ್ಯರ್ಥಿ ಸುಬೈರ್ ಖಾನ್ ಎರಡನೇ ಸ್ಥಾನ ಪಡೆದರೂ, ಚೆನ್ನೈನಾದ್ಯಂತ ಟಿವಿಕೆ ಪರವಾಗಿದ್ದ ಅಲೆಯ ಮುಂದೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ
ವಿಜಯ್ ಅವರ ಗೆಲುವು ದೇಶದ ರಾಜಕಾರಣದಲ್ಲಿ ಮೈಲುಗಲ್ಲು ಸೃಷ್ಟಿಸಿದೆ. ಸಮೀಕ್ಷೆಗಳ ಲೆಕ್ಕಚಾರವನ್ನೇ ಟಿವಿಕೆ ಬುಡಮೇಲು ಮಾಡಿದೆ. ವಿಜಯ್ ಗೆಲುವನ್ನು ತಮಿಳುನಾಡಿನಲ್ಲಿ ಸಂಭ್ರಮಿಸಲಾಗುತ್ತಿದೆ.
ಡಿಎಂಕೆಯ ಪ್ರಯೋಗವೂ ವಿಫಲವಾಗಿದ್ದು, ಮತದಾರರು ಪರ್ಯಾಯ ರಾಜಕೀಯ ಶಕ್ತಿಯನ್ನು ಕೈಹಿಡಿದಿದ್ದಾರೆ ಎಂಬುದು ಸ್ಪಷ್ಟವಾಗಿದೆ

LEAVE A REPLY

Please enter your comment!
Please enter your name here