ಬೆಂಗಳೂರು: ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ ಬೆಂಗಳೂರು ಮತ್ತು ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ ಇವರ ಸಹಯೋಗದೊಂದಿಗೆ ನಡೆದ ಡಾಕ್ಟರ್ ಆರೂಢ ಭಾರತೀ ಸ್ವಾಮಿಜಿಯವರ ಸಂನ್ಯಾಸ ದಶಮಾನೋತ್ಸವ ಹಾಗೂ ಗಣರಾಜ್ಯೋತ್ಸವ ಸಂಭ್ರಮ-೨೦೨೬,ಕಾರ್ಯಕ್ರಮವು ದಿನಾಂಕ: ೨೫-೦೧-೨೦೨೬,ರಂದು ಸಿದ್ಧಾರೂಢ ಆಶ್ರಮ ಮಿಷನ್ ಮೈಸೂರು ರಸ್ತೆಯ ಹಾರೋಹಳ್ಳಿಯಲ್ಲಿ ಜರುಗಿತು.
ವಿಜಯಪುರ ಜಿಲ್ಲೆ/ತಾಲೂಕಿನ ಹೊನಗನಹಳ್ಳಿ ಗ್ರಾಮದ ಶಿಕ್ಷಕಿ ಹಾಗೂ ಸಾಹಿತಿಯೂ ಆದ ಶ್ರೀಮತಿ ಇಂದಿರಾ ಶಶಿಕುಮಾರ್ ಬಿದರಿಯವರು ಸಾಹಿತ್ಯ ಕ್ಷೇತ್ರದಲ್ಲಿಯ ಸಾಧನೆಯನ್ನು ಗುರುತಿಸಿ “ಭಾರತ ಸೇವಾರತ್ನ” ಪುಸ್ಕಾರ ನೀಡಿ ಗೌರವಿಸಲಾಯಿತು. ಇವರು ಸಾಹಿತ್ಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಹೆಚ್ಚು ಸೇವೆಗೈದು ರಾಜ್ಯ,ರಾಷ್ಟ್ರ,ಅಂತರ್ ರಾಷ್ಟ್ರ ಮಟ್ಟದಲ್ಲಿ ಪುರಸ್ಕಾರಗಳಿಗೆ ಭಾಜನರಾಗಲಿ ಎಂದು ಹಾರೈಸಲಾಯಿತು. ಈ ಸಮಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಕೈದವರನ್ನು ಗುರುತಿಸಿ ಪರಸ್ಕಾರ ನೀಡಿ ಗೌರವಿಸಲಾಯಿತು.
ಡಾಕ್ಟರ್ ಆರೂಢ ಭಾರತಿ ಸ್ವಾಮಿಜಿಯವರು ಮತ್ತು ರೋ.ಡಾಕ್ಟರ್ ಜಿ.ಶಿವಣ್ಣನವರ ಘನ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.





