ವಿಜಯಪುರ:ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯರು. ಚುನಾವಣೆ ಸಂದರ್ಭದಲ್ಲಿ ನಿಗದಿತ ಸಮಯದಲ್ಲಿ ಷರತ್ತುಬದ್ದವಾಗಿ ಆಸ್ತಿ ಘೋಷಣೆ ಮಾಡದೆ.ಸ್ಪರ್ಧಿಸಿ ಚುನಾವಣೆಯಲ್ಲಿ ಆಯ್ಕೆಯಾಗಿದ್ದು.ಕಾರಣ ವಿಜಯಪುರ ನಗರದ ಮಹಾನಗರ ಪಾಲಿಕೆಯ ಎಲ್ಲ 35 ವಾರ್ಡುಗಳ ಸದಸ್ಯರುಗಳ ಆಯ್ಕೆ ಪ್ರಕ್ರಿಯೆ ಕ್ರಮಬದ್ದವಲ್ಲ ಎಂದು.ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರಕಾಶ್ ಮಿರ್ಜಿ ಮತ್ತು ಮೈನುದ್ದೀನ್ ಬೀಳಗಿ ಕಲಬುರ್ಗಿ ಹೈ ಕೋರ್ಟ್ ನಲ್ಲಿ ತಕಾರರು ಅರ್ಜಿ ಸಲ್ಲಿಸಿದ್ದರು.ಹೈ ಕೋರ್ಟ್ ಪೀಠ ಇಂದು ಆಯ್ಕೆ ಪ್ರಕ್ರಿಯೆ ಅಸಿಂಧು ಎಂದು ಆದೇಶ ಹೊರಡಿಸಿದ್ದು.ಎಲ್ಲ 35 ಜನ ಮಹಾನಗರ ಪಾಲಿಕೆಯ ಸದಸ್ಯರುಗಳ ಆಯ್ಕೆಯನ್ನು ಸರ್ಕಾರ ಅಧಿಕೃತ ಆದೇಶ ಹೊರಡಿಸಿ ಅಮಾನತ್ತಿನಲ್ಲಿರಿಸಿದೆ.ಆದರೆ ಎಲ್ಲ ಸದಸ್ಯರು ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವರೋ? ಈ ಆದೇಶ ಮನ್ನಿಸಿ ಸುಮ್ಮನಿರುವರೊ? ಮತ್ತೇ ಪಾಲಿಕೆಗೆ ಚುನಾವಣೆ ನಡೆಯುವದೂ? ಈಗ ಅಮಾನತ್ತಾದ ಸದಸ್ಯರುಗಳ ಮತ್ತೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವರೂ? ಎಂಬುದು ಈಗ ವಿಜಯಪುರ ನಗರದ ಜನರ ಮುಂದಿರುವ ಕುತೂಹಲಭರಿತ ಮೀಲಿಯನ್ ಡಾಲರ್ ಪ್ರಶ್ನೆಯಾಗಿದೆ ?(ದಾನೇಶ್ ಅವಟಿ ಹಿರಿಯ ನ್ಯಾಯವಾದಿ ಹಾಗೂ ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಸಮಿತಿ )

LEAVE A REPLY

Please enter your comment!
Please enter your name here