ಹೂವಿನಹಡಗಲಿ : ತಾಲೂಕಿನ ಗುಜನೂರು ಗ್ರಾಮದಲ್ಲಿ ಸರ್ಕಾರಿ ಜಮೀನಿನಲ್ಲಿ ನಿರಾಶ್ರಿತರು ನಿಯಮಾನುಸಾರ ನಿವೇಶನ ಪಡೆದು ಮನೆ ಕಟ್ಟಿಕೊಂಡಿದ್ದಾರೆ.ಕೆಲವರು ವೈಯಕ್ತಿಕ ಹಿತಾಸಕ್ತಿಯಿಂದ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಗುಜನೂರು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮಸ್ಥರು. ಹೂವಿನಹಡಗಲಿ ತಾಲೂಕಿನ ದೇವಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ, ಗುಜನೂರು ಗ್ರಾಮದ ಹೊಸಮನಿ ಅಂಜಿನಪ್ಪ ಎಂಬುವವರು ತಮ್ಮ ತಾಯಿ ಗ್ರಾ.ಪಂ. ಅಧ್ಯಕ್ಷರಿದ್ದಾಗ ಅಧಿಕಾರ ದುರುಪಯೋಗಪಡಿಸಿಕೊಂಡು ನಿವೇಶನದಲ್ಲಿ ಹತ್ತಾರು ನಿವೇಶನಗಳನ್ನು ತಮ್ಮ ಸಂಬಂಧಿಗಳು ಹಾಗೂ ಬೇಕಾದವರ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ. ಆದರೆಡೆ ಈಗ ಅವರೇ ಪತ್ರಿಕಾಗೋಷ್ಠಿ ನಡೆಸಿ, ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ.
ಕೂಲಿಕಾರ್ಮಿಕರು ಈಗ ಬಡವರು ಹಾಗೂ ಆಸರೆ ಕಲ್ಪಿಸಿಕೊಳ್ಳಲು ಗ್ರಾಮಪಂಚಾಯಿತಿಯಿಂದ ಅನುಮತಿ ಪಡೆದು ಮನೆ ನಿರ್ಮಿಸಿಕೊಳ್ಳಲು ಮುಂದಾದಾಗ ಇವರೇ ಅಡ್ಡಿಪಡಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.
ಇವರೇ ಹೇಳುವಾ ಹಾಗೆ ಗಾಂಧಿ ಕಲಾಭವನ ಉದ್ಯಾನವನ 2012/13 ರಲ್ಲಿ ಮಾಡಿದ್ದೇವೆ ಎಂದು ಹೇಳುತ್ತಾರೆ.
ಆದರೆ ಅದಕ್ಕೂ ಮೊದಲು ಆ ಜಾಗದಲ್ಲಿ ಸುಮಾರು ಕುಟುಂಬಗಳು ವಾಸ ಮಾಡುತ್ತಿವೆ.
ಗ್ರಾಮ ಪಂಚಾಯತಿಗೆ ಕಂದಾಯ ಕೂಡ ಕಟ್ಟಿದ್ದಾರೆ.
ಡೋರ್ ನಂಬರ್ ಸಹ ಪಡೆದುಕೊಂಡಿದ್ದಾರೆ.
ಗಾಂಧಿ ಕಲಾ ಭವನ ಮಾಡಿದ ಸಂದರ್ಭದಲ್ಲಿ ಆ ಭೂಮಿ ಪಕ್ಕದ ಮೀರಾಕೋರನಹಳ್ಳಿ ಗ್ರಾಮದ ಐನಹಳ್ಳಿ ನಾಗಮ್ಮ ಗಂಡ ನಾಗಪ್ಪ ಎನ್ನುವರ ಹೆಸರಿಗೆ ಪಹಣಿ ಪತ್ರಿಕೆ ಇತ್ತು
ಅದನ್ನು ಹೇಗೆ ಗಾಂಧಿ ಕಲಾ ಭವನ ಉದ್ಯಾನವನ ಮಾಡಿದರು.
2022/23 ನೇ ಸಾಲಿನಲ್ಲಿ ಮಾನ್ಯ ರಾಜ್ಯ ಪಾಲರು ಕರ್ನಾಟಕ ಸರ್ಕಾರ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯಿತಿ ಇವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ.
ಅದಕ್ಕೂ ಮೊದಲು ಹೇಗೆ ಗಾಂಧಿ ಕಲಾ ಭವನ, ಉದ್ಯಾನವನ ಮಾಡಿದರು,ಈಗಾಗಲೇ ಅವರೇ ಹೇಳುವಾ ಹಾಗೆ ಗ್ರಾಮದಲ್ಲಿ ಯಾವುದೇ ರೀತಿಯ ಸಿ,ಏ ಸೈಟ್ ಅಥವಾ ನಿವೇಶನ ಇರುವುದಿಲ್ಲ.
ಎಂದು ಗ್ರಾಮದ ಗ್ರಾಮಸ್ಥರು ಮತ್ತು ಗ್ರಾಮದ ಜನತೆಯ ಪರವಾಗಿ ಹೊಸಮನಿ ಸೋಮಣ್ಣ ಅವರು ಪತ್ರಿಕೆ ಹೇಳಿಕೆ ನೀಡಿದರು.
ಗುಜನೂರು ಗ್ರಾಮ ಸಂಪೂರ್ಣ ಸರ್ಕಾರಿ ಜಾಗವಾಗಿದೆ. ಬೇರೆ ಜನರಿಗೆ ನಿವೇಶನ ಕಲ್ಪಿಸಿದರೆ ಅಕ್ರಮ ಎನ್ನುತ್ತಾರೆ. ಅವರ ಅಧಿಕಾರಾವಧಿಯಲ್ಲಿ ನಿವೇಶನ ನೀಡಿರುವುದು ಅಕ್ರಮವಾಗುವುದಿಲ್ಲವೇ ? ಇದು ಅಧಿಕಾರ ದುರ್ಬಳಕೆಯಲ್ಲವೇ ಎಂದು ಪ್ರಶ್ನಿಸಿದ್ದಾರೆ. ಹೊಸಮನಿ ಅಂಜಿನಪ್ಪ ನ್ಯಾಯವಾದಿಗಳಿದ್ದು, ಗ್ರಾಮಸ್ಥರಿಗೆ ನ್ಯಾಯ ಕೊಡಿಸುವುದನ್ನು ಬಿಟ್ಟು ನಿರ್ಗತಿಕ ಬಡವರ ಜೀವನದ ಜೊತೆಗೆ ಆಟವಾಡುತ್ತಿರುವುದು ಸರಿಯಲ್ಲ. ಮುಂದೆ ಏನಾದರೂ ತೊಂದರೆಯಾದಲ್ಲಿ ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




