ಮೂಡಲಗಿ::ಸ,27-ತಾಲೂಕಿನ ಗುರ್ಲಾಪೂರದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಿತು. ದೇವರ ನಾಮಸ್ಮರಣೆಯಲ್ಲಿ ನಿನಗೆ ಬೇಕಾಗಿರುವುದನ್ನು ಕಾಯಕದ ರೂಪದಲ್ಲಿ ದೇವರಲ್ಲಿ ಕೇಳು, ಇನ್ನೊಬ್ಬರಲ್ಲಿ ಆಸೆ ಪಡಬೇಡ, ಯಾರ ಮನಸ್ಸಿಗೆ ನೋವುಂಟು ಮಾಡಬೇಡ.ಮನಸ್ಸುಗಳು ಪರಿಶುದ್ಧ ವಿದ್ದರೆ ಸಕಲ ಸೌಭಾಗ್ಯವು ಪ್ರಾಪ್ತಿಯಾಗುತ್ತದೆ.
ಅವರು ಗ್ರಾಮದಲ್ಲಿ ದೇವಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಹಗೆತನಕ್ಕೆ ದಾರಿ ಮಾಡದೇ ಸ್ನೇಹ ಪ್ರೀತಿಯಿಂದ ಎಲ್ಲರ ಜೊತೆ ಬೆರೆತು ಜೀವನ ಸಾಗಿಸಿರಿ.ತಂದೆ-ತಾಯಿಯರನ್ನು ಪೂಜೆಭಾವನೆಯಿಂದ ಕಾಣಿರಿ.ಅಧರ್ಮದ ದಾರಿ ಹಿಡಿಯದೇ,ಧರ್ಮದ ದಾರಿಯಲ್ಲಿ ನಡೆಯಿರಿ ಎಂದು ಬೈಲಹೊಂಗಲ ಆರಾದ್ರಿ ಮಠದ ಶಾಂಭವಿ ಚರಣದಾಸ ವೆ.ಮೂ.ಡಾllಮಹಾಂತಯ್ಯ ಶಾಸ್ತ್ರಿಯವರು ಹೇಳಿದರು.
ಬಾಲಚಂದ್ರ ಜಾರಕಿಹೊಳಿಯವರ ಆಪ್ತ ಸಹಾಯಕ ನಾಗಪ್ಪ ಶೇಖರಪ್ಪಗೋಳ ಅವರನ್ನು ಸನ್ಮಾನಿಸಲಾಯಿತು. ಎಮ್.ಎಮ್.ಮುಗಳಖೋಡ. ಜೆ.ಎಲ್.ಹುಣಶ್ಯಾಳ, ಮಲ್ಲಿಕಾರ್ಜುನ ಮುಗಳಖೋಡ, ಮಹಾದೇವ ಮುಕ್ಕುಂದ,ಚನ್ನಪ್ಪ ಮುಗಳಖೋಡ, ಶಿವಬಸು ಮುಗಳಖೋಡ ಅನೇಕರು ಭಕ್ತಾದಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here