ತಾಳಿಕೋಟಿ: ಪಟ್ಟಣದಲ್ಲಿ ಈ ಬಾರಿ ಶ್ರೀಖಾಸ್ಗತೇಶ್ವರ ಜಾತ್ರೆ ಹಾಗೂ ಮೊಹರಂ ಹಬ್ಬ ಜೊತೆಯಾಗಿ ಬಂದಿವೆ ಎಲ್ಲ ಸಮಾಜದವರು ಕೂಡಿಕೊಂಡು ಶಾಂತಿ ಮತ್ತು ಸೌಹಾರ್ದಯುತವಾಗಿ ಆಚರಿಸಿ ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಬಸವನಬಾಗೇವಾಡಿ ಪೊಲೀಸ್ ಉಪ ವಿಭಾಗಾಧಿಕಾರಿ ನಂದಗಾವಿ ಹೇಳಿದರು. ರವಿವಾರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಾಗೂ ಶ್ರೀಕಾಸ್ತುತೇಶ್ವರ ಜಾತ್ರೆ ನಿಮಿತ್ಯ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಜುಲೈ 17 ರಂದು ಮೊಹರಂ ದೇವರ ಕೊನೆಯ ದಫನ ದಿನವಾಗಿರುವುದರಿಂದ ಅಲಾಯಿ ದೇವರನ್ನು ಆದಷ್ಟು ರಾತ್ರಿ ಹತ್ತು ಗಂಟೆ ಒಳಗಾಗಿ ದಫನ್ ಮಾಡಲು ಪ್ರಯತ್ನಿಸಬೇಕು.
ಏಕೆಂದರೆ ಅಂದೆ ತಡ ರಾತ್ರಿಗೆ ಖಾಸ್ಗತೇಶ್ವರ ಮಠದ ಭಕ್ತರು ದೀಡ ನಮಸ್ಕಾರ ಹಾಕುವುದರಿಂದ ಯಾವುದೇ ರೀತಿಯ ತೊಂದರೆ ಆಗಬಾರದು. ದೇವರು ಕೂರುವ ದಿನದಿಂದ ಕಳುಹಿಸಿಕೊಡುವ ದಿನದವರೆಗೂ ಅದರ ಜವಾಬ್ದಾರರು ಶಾಂತಿಸುವ್ಯವಸ್ತೆ ಕಡೆದಂತೆ ನೋಡಿಕೊಳ್ಳಬೇಕು ವಿಶೇಷವಾಗಿ ಎರಡೂ ಹಬ್ಬಗಳಲ್ಲಿ ಯುವಕರನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಅವಶ್ಯಕತೆದಲ್ಲಿ ಇಲಾಖೆಯ ಸಹಕಾರ ತೆಗೆದುಕೊಳ್ಳಿ ನಾವು ಸೂಕ್ತ ಬಂದೋಬಸ್ ನೀಡುತ್ತೇವೆ. ಯಾರಾದರು ಕಾನೂನು ಕೈಗೊತ್ತಿಕೊಳ್ಳುವ ಪ್ರಯತ್ನ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು. ಈ ವೇಳೆ ಶ್ರೀ ಖಾಸ್ಗತೇಶ್ವರ ಮಠದ ಮುಖ್ಯಸ್ಥ ಮುರುಗೇಶ ವಿರಕ್ತಮಠ. ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್ ಹಾಗೂ ಇಮಾಮಸಾಬ ಕಾಳಗಿ ಮಾತನಾಡಿ ಜಾತ್ರೆ ಮತ್ತು ಮೊಹರಂ ಎರಡು ಹಬ್ಬಗಳು ನಮ್ಮ ಹಬ್ಬಗಳೇ ಆಗಿವೆ. ನಮ್ಮ ಪಟ್ಟಣ ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ನಾವೆಲ್ಲರೂ ಒಂದಾಗಿ ಪರಸ್ಪರ ಸಹಕಾರದೊಂದಿಗೆ ಎರಡು ಹಬ್ಬಗಳನ್ನು ಆಚರಿಸುತ್ತೇವೆ ಎಂದರು.
ಈ ಸಮಯದಲ್ಲಿ ಪುರಸಭೆ ಸದಸ್ಯರಾದ ಡಿ.ವಿ. ಪಾಟೀಲ. ಪರಶುರಾಮ್ ತಂಗಡಗಿ. ಅಣ್ಣಪ್ಪ ಜಗತಾಪ. ಜೈಸಿಂಗ್ ಮೂಲಿಮನಿ. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ. ಸಿಕಂದರ ವಠಾರ. ಫಯಾಜ ಉತ್ನಾಳ.ಶಮ್ಸುದ್ದೀನ ನಾಲಬಂದ. ಮಹಾಂತೇಶ ಮುರಾಳ. ಮಂಜೂರು ಬೇಪಾರಿ. ಮೆಹಬೂಬ ವಠಾರ. ಮೋದಿನಸಾ ನಗಾರ್ಚಿ. ಮಹೆಬೂಬಶಾ ಮಕಾನದಾರ. ಸದ್ದಾಮ್ ಹೊನ್ನಳ್ಳಿ.ಪಿಎಸ್ಐ ರಾಮನಗೌಡ ಸಂಕನಾಳ. ಕ್ರೈಂ.ಎಸ್ಐ ಭಂಗಿ ಹಾಗೂ ಅಲಾಯಿ ದೇವರ ಸಮಿತಿ ಮುಖ್ಯಸ್ಥರು ಮತ್ತು ಇಲಾಖೆಯ ಸಿಬ್ಬಂದಿಗಳು ಇದ್ದರು.





