ಜಗಳೂರು : ಕಾಂಗ್ರೆಸ್ ಪಕ್ಷದ ಸಿದ್ದಾಂತ ಒಪ್ಪಿ ಬರುವಂತವರಿಗೆ ಸ್ವಾಗತವಿದೆ ಆದರೆ ಬದ್ದರಾಗಿ ಕೆಲಸ ಮಾಡುವ ಮೂಲಕ ಸೇವೆ ಸಲ್ಲಿಸಿದರೆ ಫಲ ಸಿಗಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು

ಪಟ್ಟಣದ ಅವರ ನಿವಾಸದ ಕಚೇರಿಯಲ್ಲಿ ವಿವಿದ ಪಕ್ಷಗಳನ್ನ ತೊರೆದು ಕಾಂಗ್ರೆಸ್ ಸೇರಿಕೊಂಡ ಹಲವು ಮುಖಂಡರನ್ನ ಸ್ವಾಗತಿಸಿಕೊಂಡು ಮಾತನಾಡಿದ ಅವರು ಕಾಂಗ್ರೆಸ್ ಸಮುದ್ರ ಇದ್ದಂತೆ ಎಲ್ಲಾ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ನೀಡುವ ಮೂಲಕ ಸಮಾನತೆಯಿಂದ ಕಾಣುವಂತಹ ಪಕ್ಷವಾಗಿದೆ ಮುಂಬರುವ ಚುನಾವಣೆಗಳಲ್ಲಿ ಸ್ಥಳೀಯವಾಗಿ ಸಕ್ರೀಯವಾಗಿ ತೊಡಗಿಸಿಕೊಂಡು ಮುಂದುವರಿಯಿರಿ ಎಂದು ಸಲಹೆ ನೀಡಿದರು

ಕಳೆದ ಮೂರು ವರೆ ವರ್ಷಗಳಿಂದ ಕಾಂಗ್ರೆಸ್ ಕ್ಷೇತ್ರದಲ್ಲಿ ಆಡಳಿತ‌ ನೆಡೆಸುತ್ತಿದ್ದು ನಮ್ಮ ಕೈಲಾದ ಅನುದಾನ ತಂದು ಅಭಿವೃದ್ಧಿ ಪಡಿಸಲಾಗಿದೆ ಇನ್ನು ಒಂದುವರೆ ವರ್ಷದ ಅವದಿಯಲ್ಲಿ ಸಾಕಷ್ಟು ಅನುದಾನ ಬರಲಿದ್ದು ಯಾವುದೇ ಬೇಧ ಬಾವವಿಲ್ಲದೆ ಸಮಸ್ಯೆ ಇರುವ ಕಡೆ ವಿನಿಯೋಗಿಸುಲಾಗುವುದು ನಿಮ್ಮ ಸೇವೆಯನ್ನ ಪಕ್ಷ ಗುರುತಿಸಲಿದೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗು ಕಾರ್ಯಕರ್ತರೊಂದಿಗೆ ಬೆರೆತು ಪಕ್ಷದ ಸಿದ್ದಾಂತಗಳಿಗೆ ಬದ್ದರಾಗಿ ತಾಯಿ ಸೇವೆ ಎಂಬ ಭಾವನೆಯಿಂದ ಕೆಲಸ ಮಾಡಿ ಎಂದು ಸಲಹೆ ನೀಡಿದರು

ಇದೇ ವೇಳೆ ದೊಣ್ಣೆಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಹಾಗು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಬಿಜೆಪಿ ಮುಖಂಡರಾದ ಆರ್.ವೀರೇಶ್ , ಅರಿಶಿನ ಗುಂಡಿ ಹಾಲು ಉತ್ಪಾದಕ ಸಂಘದ ಕಾರ್ಯದರ್ಶಿ ಬಸವರಾಜ್ , ಬಂಗಾರಕ್ಕನಗುಡ್ಡ ರೈತ ಮುಖಂಡ ಜಯರಾಮಪ್ಪ , ಅಂಜಿನಪ್ಪ ಅವರು ಶಾಸಕರ ಜನ ಪರ ಆಡಳಿತ ಹಾಗು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಒಪ್ಪಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಲಿಂಗಣ್ಣನಹಳ್ಳಿ ಅಜ್ಜಯ್ಯ , ದೊಣ್ಣೆಹಳ್ಳಿ ನಾಗರಾಜಯ್ಯ , ಮರೇನಹಳ್ಳಿ ಬಸವರಾಜ್ , ಕಲ್ಲೇದೇವರಪುರ ಮಹೇಶ್ , ಆಕನೂರು ಪಾತಲಿಂಗಪ್ಪ , ಸೇರಿದಂತೆ ಹಲವರು ಇದ್ದರು

LEAVE A REPLY

Please enter your comment!
Please enter your name here