ಮಂಗಳೂರು : ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಅವರು ಅನಾರೋಗ್ಯ ಕಾರಣ ನೀಡಿ, ಆಸ್ಪತ್ರೆಗೆ ದಾಖಲಿಸುವಂತೆ ಕೇಳಿಕೊಂಡರೂ ಪೊಲೀಸ್ ನಾಟಕ ಫಲಕಾರಿಯಾಗಲಿಲ್ಲ.
ವಂಚನೆ ಪ್ರಕರಣವೊಂದರಲ್ಲಿ ವಶಪಡಿಸಿಕೊಂಡಿದ್ದ ಹಣದ ಬಿಡುಗಡೆಗಾಗಿ ಲಂಚಪಡೆದ ಆರೋಪದಲ್ಲಿ ಬಂಧಿತ ಬಜ್ಪೆ ಪೊಲೀಸ್ ನಿರೀಕ್ಷಕ ಬಾಲಕೃಷ್ಣಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
15 ಸಾವಿರ ಮುಂಚಿತವಾಗಿ ಪಡೆದು ಉಳಿದ 5000 ಸಾವಿರ ಪಡೆಯುವಾಗ ಲೋಕಾಯುಕ್ತ ದಾಳಿ ಮಾಡಿ ಬಂದಿಸಿದೆ.





