ಕಲಬುರಗಿ:

ನಗರದ ಬಸವೇಶ್ವರ ಆಸ್ಪತ್ರೆ ಎದುರುಗಡೆಯಲ್ಲಿರುವ ವಿದ್ಯಾನಗರದ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಮಲ್ಲಿಕಾರ್ಜುನ ತರುಣ ಸಂಘದ ವತಿಯಿಂದ ಹಮ್ಮಿಕೊಂಡ ಗಣೇಶೋತ್ಸವ ೨೦೨೬ ಹಾಗೂ ಸಂಘದ ೨೯ನೇ ವಾರ್ಷಿಕೋತ್ಸವ ಸಮಾರಂಭ ನಿಮಿತ್ಯ ಹಮ್ಮಿಕೊಂಡ ೨೯ ವಿವಿಧ ಕ್ರೀಡಾ ಹಾಗೂ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ೭೮ ಮಕ್ಕಳು ಮತ್ತು ಮಹಿಳೆಯರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ವಿತರಣೆ ಕಾರ್ಯಕ್ರಮವನ್ನು ಶುಕ್ರವಾರ ೧೮ ರಂದು ಸಾಯಂಕಾಲ ೬.೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಂಗಲಗಿ/ಟೆಂಗಳಿ ಶಾಂತೇಶ್ವರ ಮಠದ ಪೂಜ್ಯ ಶ್ರೀ ಷ.ಬ್ರ. ಡಾ. ಶಾಂತಸೋಮನಾಥ ಶಿವಾಚಾರ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇತ್ತೀಚಿಗೆ ಕಲಬುರಗಿ ಜಿಲ್ಲಾ ಕಾಂಗ್ರೇಸ್ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಡಾ. ಕಿರಣ್ ದೇಶಮುಖ ಅವರಿಗೆ ವಿಶೇಷ ಸತ್ಕಾರ ನಡೆಯಲಿದೆ. ವಿದ್ಯಾನಗರ ವೆಲ್‌ಫೇರ್ ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಘದ ಅಧ್ಯಕ್ಷ ಶಿವರಾಜ ಅಂಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. 

ದಿ: ೧೪ ರಿಂದ ೧೭ರ ವರೆಗೆ ನಡೆದ ವಿವಿಧ ಕ್ರೀಡಾ ಚಟುವಟಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕರಾಗಿ ಕಾರ್ಯನಿರ್ವಹಿಸಿದ, ಕರಣ ಆಂದೋಲಾ, ಶಶಿಧರ ಪ್ಯಾಟಿ, ಸಂಜು ತಂಬಾಕೆ, ಹರ್ಷಾ ಸಂಗಶೆಟ್ಟಿ, ಜ್ಯೋತಿ ಮುತ್ತಾ, ಸಂತೋಷ ನಿಂಬೂರ, ಸಂಗಮೇಶ ಹೆಬ್ಬಾಳ, ಪ್ರೀಯಾ ನಾಗಶೆಟ್ಟಿ, ಕೃತಿಕಾ ಹೆಬ್ಬಾಳ, ರಶ್ಮಿ ನಿಂಬೂರ, ಪದ್ಮಾ ಆಂದೋಲಾ, ನಿಖಿತ್ ಮುಗಳಿ ಉಪಸ್ಥಿತರಿರುವರು.  

ಶಿವರಾಜ ಅಂಡಗಿ

LEAVE A REPLY

Please enter your comment!
Please enter your name here