ಬೆಂಗಳೂರು:ನಮ್ಮ ಮನೆಯಲ್ಲಿ ಉಂಡು ಬೆಳೆದವರು ದುಡ್ಡು ಕೊಟ್ಟು ನೆಗೆಟಿವ್ ರಿವ್ಯೂ ಮಾಡಿಸುತ್ತಿದ್ದಾರೆ.. ನಮ್ಮ ಮನೆ ವಿಷಯಕ್ಕೆ ಬಂದರೆ ಹುಷಾರ್.. ರಿಶಿಕಾಗೆ ಯಶ್ ತಾಯಿ ವಾರ್ನಿಂಗ್ ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾ ದಲ್ಲಿ ಹರಿದಾಡುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅವರು ಟಾಕ್ಸಿಕ್ ಸಿನಿಮಾ ಹಾಗೂ ಯಶ್ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಪ್ರಚಾರಗಳ ಕುರಿತು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಮನೆಯಲ್ಲೇ ಉಂಡು ಬೆಳೆದವರೇ ಹಣ ಕೊಟ್ಟು, ಪ್ರೊ (PRO) ಹಾಗೂ ಟ್ರೋಲಿಗರಿಗೆ ಕಾಲ್ ಮಾಡಿ ಯಶ್ ವಿರುದ್ಧ ಅಪಪ್ರಚಾರ ಮಾಡಿಸುತ್ತಿದ್ದಾರೆ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿ ರಿಶಿಕಾ ಸಿಂಗ್ ಗೆ ಖಡಕ್ ಎಚ್ಚರಿಕೆ ನೀಡುತ್ತಾ,ನಾವು ಇಲ್ಲೇ ಹುಟ್ಟಿ ಬೆಳೆದವರು ನಮ್ಮ ಮನೆ ವಿಷಯಕ್ಕೆ ಬಂದರೆ ಹುಷಾರ್ ಎಂದು ತಿವಿದಿದ್ದಾರೆ.ಯಶ್ 300 ರೂಪಾಯಿ ಹಿಡಿದುಕೊಂಡು ಬಂದಾಗಲೇ ತಲೆಕೆಡಿಸಿಕೊಳ್ಳಲಿಲ್ಲ, ಈಗ ಇಂತಹ ನೆಗೆಟಿವ್ ವಿಚಾರಗಳಿಗೆ ಜಗ್ಗುವುದಿಲ್ಲ. ಅವನನ್ನು ಕೆಣಕಿದರೆ ಮತ್ತಷ್ಟು ಬೆಳೆಯುತ್ತಾನೆಯೇ ಹೊರತು ಸೋಲುವುದಿಲ್ಲ, ದುಡ್ಡು ಕೊಟ್ಟು ನೆಗೆಟಿವ್ ರಿವ್ಯೂ ಕೊಡಿಸುತ್ತಿದ್ದಾರೆ. ಆದ್ದರಿಂದ ಯಶ್ ಬಗ್ಗೆ ಮಾತನಾಡುವುದನ್ನು ಬಿಟ್ಟು ನಿರ್ಮಾಪಕರ ಕಡೆ ಗಮನಹರಿಸಿ ಎಂದು ಖಡಕ್ ಆಗಿ ಯಶ್ ತಾಯಿ ಕ್ಲಾಸ್ ತಗೊಂಡಿದ್ದಾರೆ.





