ಬೆಂಗಳೂರು:ಬಡತನ ಯಾವುದಕ್ಕೆ ಬಂದಿದೆ ಅಂದರೆ ಮಕ್ಕಳ ಕಲ್ಪನೆಗೆ ಬಡತನ ಬಂದಿದೆ.ಆ ಬಡತನ ನಮ್ಮ ಸಾಂಸ್ಕೃತಿಕ ವಲಯಕ್ಕೆ ಅರ್ಥ ಆಗ್ತಾ ಇಲ್ಲ ಎಂದು ಹಿರಿಯ ಸಂಸ್ಕೃತ ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯನವರ ಅಭಿಪ್ರಾಯಪಟ್ಟರು.
ಬೆಂಗಳೂರಿನ ಕಲಾಗ್ರಾಮದಲ್ಲಿ ಸ್ಪರ್ಶ ಮಕ್ಕಳ ಕೇಂದ್ರ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಯೋಜಿಸಿದ್ದ ಸ್ಪರ್ಶ ಮಕ್ಕಳ ನಾಟಕೋತ್ಸವದಲ್ಲಿ ಹಿರಿಯ ಸಂಸ್ಕೃತಿ ಚಿಂತಕರಾದ ಕೋಟಿಗಾನಹಳ್ಳಿ ರಾಮಯ್ಯ ಮಕ್ಕಳ ನಾಟಕೋತ್ಸವ ಉದ್ಘಾಟನೆ ಮಾಡಿ ಮಾತನಾಡುತ್ತ ರಂಗಭೂಮಿಯ ಬಿತ್ತಿಯಲ್ಲಿ ಒಂದೇ ಒಂದು ಚುಕ್ಕಿ ಅಷ್ಟು,ಮಕ್ಕಳ ರಂಗಭೂಮಿಗೆ ಸ್ಥಾನ ಇಲ್ಲದಿರುವುದು ನಿಜಕ್ಕೂ ನಾಚಿಕೆ ಪಡುವಂತಹ ವಿಚಾರ ಅಂದುಕೊಂಡಿದ್ದೇನೆ ಸಾಂಸ್ಕೃತಿಕವಾಗಿ, ಇಂತಹ ಸ್ಥಿತಿ ಯಾಕೆ ಬಂದಿದೆ ಅಂತ ನಾವು ಯೋಚಿಸಬೇಕು.ಮಕ್ಕಳ ರಂಗಭೂಮಿಯಲ್ಲಿ ಈ ರೀತಿ ಯೋಚನೆ ಮಾಡುವರು, ಚಿಂತಿಸುವರು,ಆ ಕುರಿತಾಗಿ ಯೋಚನೆ ಮಾಡ್ತಾ ಇಲ್ಲ.ಇಂತಾ ಕಾಲಘಟ್ಟದಲ್ಲಿ ಮೂರು ಮಕ್ಕಳ ರಂಗ ತಂಡಗಳು, ಮಕ್ಕಳ ರಂಗಭೂಮಿಯನ್ನ ಹೇಗಾದರೂ ಮಾಡಿ ಜೀವಂತವಾಗಿ ಇರಿಸಬೇಕು ಅನ್ನೋ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ. ಸ್ಪರ್ಶ ಮಕ್ಕಳ ಕೇಂದ್ರ ಕರ್ನಾಟಕದ ಬೇರೆ ಜಿಲ್ಲೆಗಳಿಂದ ಮಕ್ಕಳ ರಂಗತಂಡಗಳನ್ನು ಕರೆಸಿ ನಾಟಕೋತ್ಸವ ಆಯೋಜನೆ ಮಾಡಿರುವುದು ಒಳ್ಳೆಯ ಬೆಳವಣಿಗೆ, ನಾನು 25ವರ್ಷಗಳಿಂದೇ ಬರೆದ ಕಾಗೆ ಕಣ್ಣು, ಇರುವೆ ಬಲ ನಾಟಕದಲ್ಲಿ ಪಾತ್ರ ಮಾಡಿದ್ದ ಅಂಜಲಿ ಇವತ್ತು ಈ ನಾಟಕೋತ್ಸವವನ್ನು ಆಯೋಜನೆ ಮಾಡಿರುವುದು ತುಂಬಾ ಖುಷಿಯ ವಿಷಯ,ಬಡತನ ಯಾವುದಕ್ಕೆ ಇದೆ ಅಂದರೆ ಮಕ್ಕಳ ಕಲ್ಪನೆಗೆ ಬಡತನ ಬಂದಿದೆ ಆ ಬಡತನ ನಮಗೆ ಅರ್ಥ ಆಗ್ತಾ ಇಲ್ಲ ಬಹುಶಃ ನನ್ನ ನಾಟಕಗಳು 30 ವರ್ಷಗಳ ಹಿಂದೆ ಬರೆದಿದ್ದು, ಇಂತಾ ಪ್ರಯೋಗಗಳೇ ನನ್ನ ನಾಟಕಗಳನ್ನು ಜೀವಂತವಾಗಿ ಇರಿಸಿಕೊಂಡು ಬಂದಿವೆ.ನಾಟಕಗಳಲ್ಲಿ ಪ್ರತಿಯೊಂದು ಭಾಗವಹಿಸುವ ಮಗುವಿಗೂ ಮತ್ತು ನಿರ್ದೇಶಕರಿಗೂ ನನ್ನ ನೆಚ್ಚಿನ ಅಭಿಮಾನವನ್ನು ಹೇಳೋದಕ್ಕೆ ಇಷ್ಟಪಡುತ್ತೇನೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿದ್ದ ಡಾ.ಎಚ್ ತುಕಾರಾಂ, ಡಾ. ಪ್ರದೀಪ್ ಮಾಲ್ಗುಡಿ, ಅಂಜಲಿ, ಕಿರಣ್ ಗಿರ್ಗಿ ಉಪಸ್ಥಿತರಿದ್ದರು.ಚಾಮರಾಜನಗರನಗರದ ಅಭ್ಯಾಸಿ ಮಕ್ಕಳ ರಂಗ ತಂಡವು ಕೋಟಿಗಾನಹಳ್ಳಿ ರಾಮಯ್ಯ ರಚಿರುವ ನಾಟಕ ಒಗಟಿನ ರಾಣಿ ನಾಟಕವನ್ನು ಯುವ ರಂಗ ನಿರ್ದೇಶಕ ಕಿರಣ್ ಗಿರ್ಗಿ ಅವರ ನಿರ್ದೇಶನದಲ್ಲಿ ಮಕ್ಕಳು ಅಭಿನಯಿಸಿದರು.

LEAVE A REPLY

Please enter your comment!
Please enter your name here