ವಿಜಯಪುರ ವಿಮಾನ ನಿಲ್ದಾಣದ ಪರಿಸರ ಸಂಬಂಧಿತ ಕಾನೂನು ತೊಡಕುಗಳನ್ನು ತೆರವುಗೊಳಿಸಿ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ಮಹತ್ವದ ತೀರ್ಪು ನೀಡಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಂತಿಮ ಅನುಮತಿ ಹಾಗೂ DGCA ಪರಿಶೀಲನೆ ಪೂರ್ಣಗೊಂಡರೆ, ಇನ್ನು 3 ತಿಂಗಳಲ್ಲಿ ವಿಜಯಪುರದಿಂದ ವಿಮಾನ ಹಾರಾಟ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ..

ದಶಕಗಳ ಕನಸನ್ನು ನನಸಾಗಿಸುವ ಈ ಐತಿಹಾಸಿಕ ಹೆಜ್ಜೆ ವಿಜಯಪುರದ ಭವಿಷ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದು, ಈ ಯೋಜನೆಯು ಇಡೀ ಕಿತ್ತೂರು ಕರ್ನಾಟಕ ಭಾಗದ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಹೊಸ ವೇಗ ನೀಡಲಿದೆ! ಕೈಗಾರಿಕೆಗಳಿಗೆ ಹೊಸ ವೇಗ, ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ, ಯುವಕರಿಗೆ ಹೊಸ ಅವಕಾಶಗಳ ಬಾಗಿಲು ಎಂದು ಬಣ್ಣಿಸಿದ್ದಾರೆ.

ಈ ಪ್ರಕರಣದಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ಹಿರಿಯ ವಕೀಲ ಕಪಿಲ್ ಸಿಬಲ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ರಾಜ್ಯದ ಪರ ವಕೀಲ ನಿಶಾಂತ್ ಪಾಟೀಲ್ ಅವರಿಗೆ ಸಚಿವರು ಧನ್ಯವಾದಗಳನ್ನು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here