ಜಿಲ್ಲೆಯ ಮೇ ಸಾಹಿತ್ಯ ಮೇಳ ಬಳಗದ ಸಭೆ ನಡೆಯಿತು. ನಾಲ್ವತ್ತಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಳಗದ ಜತೆಗಿರುವವರು ಭಾಗವಹಿಸಿ ಅನೇಕ ಸಂಗತಿಗಳನ್ನು ಚರ್ಚಿಸಿದರು.

ಕೊಪ್ಪಳ ಜಿಲ್ಲೆಯಲ್ಲಿ ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ಮತ್ತು ನಿಲುಗಡೆಯ ವಿಷಯ ಪ್ರಧಾನವಾಗಿ ಚರ್ಚೆಗೆ ಬಂದಿತು. ಅದಕ್ಕಾಗಿ ನಡೆದಿರುವ ಚಳವಳಿಗಳ ದಾರಿ ದಿಕ್ಕುಗಳ ಅವಲೋಕನವೂ ಆಯಿತು. ಮಿತಿಗಳ ಬಗ್ಗೆ ಚರ್ಚಿಸುತ್ತ ಕೂಡದೆ ಚಳವಳಿಯನ್ನು ವಿಸ್ತರಿಸುವ ಕಡೆಗೆ ಮತ್ತು ಅದೊಂದು ಜನಾಂದೋಲನವಾಗಿ ರೂಪಿಸುವ ಸಾಧ್ಯತೆಗಳು ಯಾವುವು ಎನ್ನುವ ವಿಷಯ ಎಲ್ಲರ ಮಾತುಗಳ ಮೂಲವಾಗಿತ್ತು.

ಈಗ ನಡೆದಿರುವ ಚಳವಳಿಗಳು ಜನಜಾಗೃತಿ ಮೂಡಿಸುವಲ್ಲಿ ದೊಡ್ಡ ಪಾತ್ರವನ್ನು ಆಡಿವೆ. ವ್ಯವಸ್ಥೆಯ ಕುತಂತ್ರದಿಂದ ಅವುಗಳು ಸೋಲುವಂತಾಗಬಾರದು. ಆ ಚಳವಳಿಯನ್ನು ಬಲಪಡಿಸುವ ನೆಲೆಯಲ್ಲಿ ನಾವು ಏನು ಮಾಡಬೇಕು ಎಂದು ಯೋಚಿಸಬೇಕು.

ಮುಂದಿನ ದಿನಗಳಲ್ಲಿ ಜನವಿರೋಧಿ ರಾಜಕಾರಣವನ್ನು ಹೊರಗಿಟ್ಟು ಎಲ್ಲದಕ್ಕೂ ಜನಸಾಮಾನ್ಯರನ್ನೇ ಮುಖ್ಯ ಮಾಡಿಕೊಂಡು ಸರ್ಕಾರಗಳಿಗೆ ಎಚ್ಚರಿಕೆ ಕೊಡುವಂಥ ಅಂತರ್ರಾಷ್ಟ್ರೀಯ, ರಾಷ್ಟ್ರೀಯ, ರಾಜ್ಯದ ಪರಿಸರ ರಕ್ಷಣೆಗಾಗಿ ಹೋರಾಟ ಮಾಡುವ ಹೋರಾಟಗಾರರು, ಚಿಂತಕರು ಭಾಗವಹಿಸುವ ಸಮಾವೇಶವನ್ನು ಹಮ್ಮಿಕೊಳ್ಳುವುದರ ಕುರಿತು ಚರ್ಚೆಯಾಗಿ ಮಾಡೋಣ ಎಂದು ಸಭೆ ತೀರ್ಮಾನ ಮಾಡಿತು. ಈ ಸಮಾವೇಶವನ್ನು ಬಾಧಿತ ಹಳ್ಳಿಗಳಲ್ಲಿಯೇ ನಡೆಸಬೇಕು ಎಂದು ಸಭೆ ಒಮ್ಮತದ ನಿರ್ಧಾರ ಮಾಡಿತು.

ಜನಾಂದೋಲನ ಮಾಡುವ ಬಗೆ ಮತ್ತು ಸಮಾವೇಶ ಹೇಗೆ ಸಂಘಟಿಸುವುದು ಎನ್ನುವ ಸಂಗತಿ ಮುಂದಿನ ಸಭೆಯಲ್ಲಿ ಚರ್ಚಿಸಬೇಕು ಎಂದಾಯಿತು. ಮುಂದಿನ ಸಭೆಯನ್ನು ಇದೇ ತಿಂಗಳು ಜೂನ್ 28 ರಂದು ಕೊಪ್ಪಳದ ಐಬಿಯಲ್ಲಿಯೇ ಮಾಡೋಣ ಎಂದು ನಿರ್ಧಾರ ಮಾಡಿತು. “ಪರಿಸರ ಮಾಲಿನ್ಯದ ವಿರುದ್ಧ ಕೊಪ್ಪಳ” ತತ್ವದಡಿ ಜನಗಳನ್ನು ಹೋರಾಟಗಾರರನ್ನು ಒಟ್ಟಾಗಿಸುವ ಪ್ರಯತ್ನ ಇದು ಎಂದು ಸಭೆ ಸ್ಪಷ್ಟವಾಗಿ ಒಪ್ಪಿತು..
ಮುಂದಿನ ಸಭೆ ಇತ್ಯಾದಿಗಳಿಗಾಗಿ ಅಂಡಹಾಕ್ ಸಮಿತಿಯೊಂದನ್ನು ಸಭೆ ಆಯ್ಕೆ ಮಾಡಿಕೊಂಡಿತು. ಸಮಿತಿಯಲ್ಲಿ

  1. ಸಾವಿತ್ರಿ ಮುಜುಂದರ
  2. ರಾಜಭಕ್ಷಿ
  3. ಬಸವರಾಜ ಶೀಲವಂತರ
  4. ಟಿ. ರತ್ನಾಕರ
  5. ಗೋನಾಳ ಕೆ ಬಿ
  6. ಕಾಶಪ್ಪ ಚಲವಾದಿ
  7. ಸುಭಾನ್ ಸಾಬ್ ನೀರಲಗಿ
  8. ಗವಿಸಿದ್ದಪ್ಪ ಹಲಗಿ
  9. ಕಿರಣ್ ಬಾಗಲಿ
  10. ಸಲೀಮಾ ಜಾನ್
  11. ಶರಣಪ್ಪ ಬಾಚಲಾಪುರ
  12. ಶರಣು ಶೆಟ್ಟರ್

ಸಭೆಯ ನಿರ್ಣಯಗಳು ಮತ್ತು ಚರ್ಚೆ ಹೊಸ ಸಾಧ್ಯತೆಗಳು ತೆರೆಯುವಂತೆ ಮಾಡಿದೆ. ಸಭೆಯಲ್ಲಿ ಭಾಗವಹಿಸಿದ ಸಂಗಾತಿಗಳು ಉತ್ಸಾಹದ ಚಿಲುಮೆಯಲ್ಲಿ ತಾವು ಕೆಲಸ ಮಾಡುವುದಾಗಿ ಹೇಳಿದ್ದು ಈ ಹೊತ್ತಿನಲ್ಲಿ ವಿಶೇಷ ಸಂಗತಿಯೇ ಆಗಿದೆ.

LEAVE A REPLY

Please enter your comment!
Please enter your name here