ಬೆಂಗಳೂರು:
ಬೆಂಗಳೂರು ಕೇಂದ್ರೀಯ ವಿಭಾಗ 6ನೇ ಘಟಕದಲ್ಲಿ ಜಯದೇವ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಪತ್ರದ ಮುಖಾಂತರ ಬರೆದು ಇಂತಿ 6ನೇ ಘಟಕದ ನೌಕರರು ಎಂದು ಹೇಳಿ ಪತ್ರವನ್ನು ಕೊನೆಗೊಳಿಸಿ ಮತ್ತೊಂದು ಪತ್ರವನ್ನು ತಯಾರು ಮಾಡಿ ಮೂಲ ಪತ್ರವನ್ನು ಮರೆಮಾಚಿಸಿ ಒಂದಷ್ಟು 6ನೇ ಘಟಕದ ನೌಕರರ ಸಹಿಯನ್ನು ಮಾಡಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಯವರಿಗೆ ಪತ್ರ ಬರೆದು ಕೊಟ್ಟಿರುತ್ತಾರೆ ಈ ಪತ್ರದ ಆಧಾರದ ಮೇಲೆ ನನ್ನನ್ನ ಮತ್ತೆ ಬೆಂಗಳೂರು ಕೇಂದ್ರೀಯ ವಿಭಾಗಕ್ಕೆ ಮರು ನಿಯೋಜನೆ ಮಾಡಲು ಬರುವುದಿಲ್ಲ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕ ಕಾರ್ಯಾಚರಣೆಯವರು ಹೇಳುತ್ತಿರುವ ಹಿನ್ನೆಲೆಯಲ್ಲಿ ಈ ಪತ್ರದ ಮೇಲೆ ತನಿಖೆ ಮಾಡಲು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ದೂರಿಗೆ ಮಾನ್ಯ ನ್ಯಾಯಾಲಯ ಅನುಮತಿ ಬೇಕೆಂದು ಪೊಲೀಸ್ ಠಾಣೆಯಿಂದ ಹೇಳಿದ್ದರಿಂದ ದಿನಾಂಕ:-24-04-2025 ರಂದು ಮಧ್ಯಾಹ್ನ 3 ಗಂಟೆಗೆ ಮಾನ್ಯ ನ್ಯಾಯಾಲಯದ ಮುಂದೆ ಜಯದೇವ ಖುದ್ದಾಗಿ ಹಾಜುರಾಗಿ ಎಲ್ಲಾ ದಾಖಲೆಗಳನ್ನು ತೋರಿಸಿ ನ್ಯಾಯಾಧೀಶರ ಮುಂದೆ ಜಯದೇವ ಆಗಿರುವ ಅನ್ಯಾಯ ಮೂಲ ಎಲ್ಲಿಂದ ಪ್ರಾರಂಭವಾಯಿತು ಎಂಬುದನ್ನ ಸವಿಸ್ತಾರವಾಗಿ ತಿಳಿಸಿದ ಮೇಲೆ ನ್ಯಾಯಾಧೀಶರು ಕೂಲಂಕುಶವಾಗಿ ದಾಖಲೆಗಳನ್ನು ಪರಿಶೀಲಿಸಿ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ವಾದ ವಿವಾದಗಳನ್ನು ಆಲಿಸಿ ನಂತರ ವಿಷನ್ ಗಾರ್ಡನ್ ಪೊಲೀಸ್ ಠಾಣೆಗೆ ಎಫ್ ಐ ಆರ್ ಮಾಡಲು ಘನ ನ್ಯಾಯಾಲಯ ಆದೇಶಿಸಿ ತ್ವರಿತ ಗತಿಯಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಹೇಳಿ ವಿಚಾರಣೆ ದಿನಾಂಕವನ್ನು ಮುಂದೂಡಿದೆ ಮತ್ತು ಪಿಸಿಆರ್ ನಂಬರ್ ಸೋಮವಾರ ಜನರೇಟ್ ಆಗುತ್ತದೆ
ಆದ್ದರಿಂದ ಈ ಕೆಳಕಂಡ ಪತ್ರಗಳಿಗೆ ಸಹಿ ಮಾಡಿರುವ ಎಲ್ಲಾ ನೌಕರರು ಕಟ್ಕಟೆಯಲ್ಲಿ ನಿಲ್ಲುವ ಮತ್ತು ಜಯದೇವ ರವರಿಗೆ ಆಗಿರುವಂತಹ ನಷ್ಟ ಹಾಗೂ ಸುಳ್ಳು ದೂರಿಗೆ ಸಹಿ ಮಾಡಿರುವ ಎಲ್ಲರ ಎಲ್ಲ ನೌಕರರು ಕೋರ್ಟಿಗೆ ಅಲೆಯಬೇಕಿದೆ ಮತ್ತು ಅವರಿಗೆ ನೋಟಿಸ್ ಜಾರಿ ಮಾಡಿ ಜಯದೇವ ಮಾನಹಾನಿ ನಷ್ಟವನ್ನ ಹಾಕುವಂತಹ ನಷ್ಟಕ್ಕೆ ಇವರೆಲ್ಲರೂ ಕೂಡ ಪರಿಹಾರ ಕಟ್ಟಿಕೊಡುವ ಮಟ್ಟಕ್ಕೆ ಹೋಗುತ್ತದೆ ಆದ್ದರಿಂದ ಕಾನೂನು ಹೋರಾಟವನ್ನು ಮುಂದೆ ಪ್ರಬಲವಾಗಿ ಮಾಡಲು ನಿರ್ಧರಿಸಿದ್ದಾರೆ ಮತ್ತೆ ಮುಂದೆ ಇನ್ಯಾರಿಗೂ ಕೂಡ ಈ ರೀತಿ ಆಗಬಾರದು ಭ್ರಷ್ಟ ಅಧಿಕಾರಿಗಳಿಗೆ ಮತ್ತು ಅವರಿಗೆ ಸಹಾಯ ಮಾಡುವ ನೌಕರರಿಗೆ ಪಾಠ ಆಗಬೇಕೆಂದು ಜಯದೇವ ರವರು ಹೋರಾಟ ಮಾಡುತ್ತಿದ್ದಾರೆ ನಿಯತ್ತಾಗಿ ಕೆಲಸ ಮಾಡುವ ನೌಕರರು ನಿರ್ಭೀತಿಯಿಂದ ಕೆಲಸ ಮಾಡಲು ಅವಕಾಶ ಆಗಬೇಕೆಂದು ಶ್ರೀ ಜಯದೇವ ಪ್ರಯತ್ನ.





