ವಿಜಯಪುರ:ಮೇ ಸಾಹಿತ್ಯ ಬಳಗ, ವಿಜಯಪುರ ಮತ್ತು ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಬರುವ ಏಪ್ರಿಲ್ 10 ರಿಂದ 14 ರ ವರೆಗೆ ವಿಜಯಪುರ ನಗರದ ವಿಶಾಲವಾದ ದರ್ಬಾರ್ ಹೈಸ್ಕೂಲ್ ಮೈದಾನದಲ್ಲಿ “ಬಿಜಾಪುರ ಬುದ್ಧ ಬಸವ ಬಾಬಾಸಾಹೇಬ ಅಂಬೇಡ್ಕರ್ ಪುಸ್ತಕ ಮೇಳ” ವನ್ನು ಹಮ್ಮಿಕೊಳ್ಳಲಾಗಿದೆ.

ಈ ಪುಸ್ತಕ ಮೇಳದಲ್ಲಿ 50 ಪುಸ್ತಕ ಮಾರಾಟಕ್ಕೆ ಮಳಿಗೆಗಳು ಲಭ್ಯ ಇವೆ.ಒಂದು ಮಳಿಗೆಗೆ ಐದು ದಿನಗಳ ಬಾಡಿಗೆ ರೂ 4000/- ರೂಗಳು.ಮೊದಲು ಬಂದವರಿಗೆ ಆದ್ಯತೆ ಕೊಟ್ಟು ಬುಕ್ ಮಾಡಲಾಗುವುದು. ಮಳಿಗೆಯು 10×10 ಸೈಜಿನಲ್ಲಿ ಇರುವ.
ಒಂದು ಮಳಿಗೆಗೆ 2 ಟೇಬಲ್ 2 ಚೇರ್ ಕೊಡಲಾಗುವುದು. ಪ್ರತಿ ಮಳಿಗೆಗೆ ಟ್ಯೂಬ್ ವ್ಯವಸ್ಥೆ ಮತ್ತು ಮೊಬೈಲ್ ಚಾರ್ಜಿಂಗ್ ಪಾಯಿಂಟ್ ಸೌಲಭ್ಯ ಇರುತ್ತವೆ.ಇದರ ಜೊತೆಗೆ ಒಂದು ಮಳಿಗೆಗೆ ಇಬ್ಬರಿಗೆ ಬೆಳಗಿನ ಉಪಹಾರ/ಚಹಾ, ಮಧ್ಯಾಹ್ನ ಊಟ ಸಂಜೆ ಫಲಾವ್ ಪಾಕೇಟ್ ಮಳಿಗೆಗೆ ಪೂರೈಸಲಾಗುವುದು ಮತ್ತು ಒಂದು ಮಳಿಗೆಗೆ ಇಬ್ಬರಂತೆ ಬೇಕು ಎಂದರೆ ಸಾಮಾನ್ಯ ಸರಳ ಮತ್ತು ಕಾಮನ್ ವಸತಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು.

ಪ್ರತಿದಿನ ಮುಂಜಾನೆ 10 ಗಂಟೆಯಿಂದ ಮದ್ಯಾಹ್ನದ ವರೆಗೆ ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಸಂಜೆ 4 ಗಂಟೆಯಿಂದ 9 ಗಂಟೆಯ ವರೆಗೆ ಕವಿಗೋಷ್ಠಿ, ಮಾಧ್ಯಮಗೋಷ್ಠಿ, ಲೇಖಕರ ಜೊತೆ ಸಂವಾದ, ವಿದ್ಯಾರ್ಥಿಗಳಿಂದ ‘ನನ್ನ ನೆಚ್ಚಿನ ಪುಸ್ತಕ’ ಕುರಿತು ಮಾತು ಮತ್ತು ಸಂವಾದ, ಶಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲೆಯ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.ಪುಸ್ತಕ ಮೇಳದಲ್ಲಿ ಮಧ್ಯದಲ್ಲಿ ವೇದಿಕೆ ಇರುವುದು.ಮಳಿಗೆಗಳನ್ನು ಬುಕ್ ಮಾಡಲು ಏಪ್ರಿಲ್‍ 3 ಕೊನೆಯ ದಿನಾಂಕ ಆಗಿದೆ.ಮಳಿಗೆ ಬುಕ್ಕಿಂಗ್ ಮಾಡುವವರು Name of Account Holders:
1) Shivaraj Guralingappa Kattimani.Karnataka Bank Branch- Jalanagar Vijayapur.Ac- No. 9352500101268601 – IFSC – KARB0000935.Phone pay no:

8971367198,ಅಕೌಂಟಿಗೆ ಅಥವಾ ನಂಬರ್ ಫೋನ್ ಫೇ ಮಾಡಿ ಕೆಳಗಿನ ನಂಬರ್ ಸ್ಕ್ರೀನ್ ಶಾಟ್ ಹಾಕಿ ತಿಳಿಸಬೇಕು.. (8971010881/ 9480286844).ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅನಿಲ ಹೊಸಮನಿ ಮುಖ್ಯಸ್ಥರು ಸಂಚಾಲನಾ ಸಮಿತಿ.ಬಿಬಿಬಿಬಿ ಪುಸ್ತಕ ಮೇಳ ವಿಜಯಪುರ.


LEAVE A REPLY

Please enter your comment!
Please enter your name here