ಚೆನ್ನೈ: ತಮಿಳುನಾಡಿನ ಚನ್ನೈನಲ್ಲಿ ಡಿಸೆಂಬರ್ 27 & 28,ರಂದು 2 ದಿನ ನಡೆದ ಐಎಫ್‌ ಡಬ್ಲ್ಯು ಜೆ (ಇಂಡಿಯನ್ ಫೆಡರೇಷನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ) ರಾಷ್ಟ್ರೀಯ ಕಾರ್ಯಕಾರಿ ಮಂಡಳಿ ವಾರ್ಷಿಕ ಸಭೆಯು ಭಾರತೀಯ ಕಾರ್ಯ ನಿರತ ಪತ್ರಕರ್ತರ ಒಕ್ಕೂಟದ (ಐ.ಎಫ್.ಡಬ್ಲ್ಯೂ. ಜೆ)ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಿವಿ.ಮಲ್ಲಿಕಾರ್ಜುನಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.ತಮಿಳುನಾಡು ಪತ್ರಕರ್ತರ ಸಂಘವು ಚನ್ನೈನ ಐ.ಸಿ.ಎಸ್.ಎ.ಸಭಾಂಗಣದಲ್ಲಿ ಆಯೋಜಿಸಿದ ಈ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಅಸ್ಸಾಂ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಸುಮಾರು 80 ಪತ್ರಕರ್ತರು ಭಾಗವಹಿಸಿದ್ದರು.
ಸಭೆಯಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿ ಪ್ರಮುಖವಾದ ಎಂಟು ನಿರ್ಣಯಗಳನ್ನು ಸಭೆಯಲ್ಲಿ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯವರಾದ ಪರಮಾನಂದ ಪಾಂಡೆಯವರು ಮಂಡಿಸಿದರು.ಈ ಎಂಟು ಪ್ರಮುಖ ನಿರ್ಣಯಗಳು ಪತ್ರಕರ್ತರ ಒಳಿತಿ ಗಾಗಿ ಕೈಗೊಳ್ಳಲಾಯಿತು.

ಐಎಫ್‌ ಡಬ್ಲ್ಯು ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ, ಮಾತನಾಡಿ, ‘ಪತ್ರಕರ್ತರ ಹಿತಕಾಯುವುದು ಐಎಫ್ ಡಬ್ಬುಜೆಯ ಪ್ರಮುಖ ಕೆಲಸ’ ಎಂದು ಹೇಳಿದರು.
ಐ.ಎಫ್.ಡಬ್ಲ್ಯೂ. ಜೆ.ತೆಗೆದುಕೊಂಡ ಪ್ರಮುಖ ನಿರ್ಣಯಗಳು
1) ಪತ್ರಕರ್ತರನ್ನು ಕಡೆಗಣಿಸಿರುವ ಸರ್ಕಾರ ಮತ್ತು ಅಧಿಕಾರ ವ್ಯವಸ್ಥೆಯ ಬಗ್ಗೆ ದೇಶಾದ್ಯಂತ ಹೋರಾಟ ನಡೆಸಿ ಪತ್ರಕರ್ತರ ಹಿತ ಕಾಯಲು ಯತ್ನಿಸುವುದು.
2) ಆರೋಗ್ಯ ವಿಮೆ, ಮಾಧ್ಯಮ ಪಟ್ಟಿ ಮತ್ತು ಮಾಸಾಶನಕ್ಕೆ ಸಂಬಂಧಿಸಿ ಇರುವ ಕಠಿಣ ನಿಯಮಗಳನ್ನು ಸಡಿಲಗೊಳಿಸಿ, ಪತ್ರಕರ್ತರು ಅವಕಾಶದಿಂದ ವಂಚಿತರಾಗದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡಿ, ಕ್ರಮವಹಿಸುವಂತೆ ಒತ್ತಡ ತರುವುದು.
3) ಪತ್ರಕರ್ತರ ಮೇಲೆ ನಡೆಯುತ್ತಿರುವ ಹಲ್ಲೆ ದೌರ್ಜನ್ಯ, ಕೊಲೆ, ಮಾನಸಿಕ ಹಿಂಸೆಗಳನ್ನು ನಿಯಂತ್ರಿಸಿ ಅವರ ಮತ್ತು ಅವರ ಕುಟುಂಬದ ರಕ್ಷಣೆಗಾಗಿ ಕ್ರಮ ವಹಿಸುವುದು. ಆಸಾಂ. ಮದ್ಯ ಪ್ರದೇಶ, ತಮಿಳುನಾಡಿನಲ್ಲಿ ಹೊಸ ಕಾನೂನುಗಳ ಮೂಲಕ ಪತ್ರಕರ್ತರಿಗೆ ರಕ್ಷಣೆ
4) ಜಿಲ್ಲಾ ಮಟ್ಟದ ಸಣ್ಣ ಪತ್ರಿಕೆಗಳು ಉಸಿರುಗಟ್ಟಿದ ವಾತಾವರಣದಲ್ಲಿ ಸರ್ಕಾರದ ಜಾಹೀರಾತು ಕೃಪಾಪೋಷಿತದಲ್ಲಿ ಬದುಕುತ್ತಿದ್ದು ಅದರಿಂದ ಹೊರ ತಂದು ಅವುಗಳನ್ನು ಉಳಿಸುವುದು.
5) ಸಾಮಾಜಿಕ ಜಾಲತಾಣದಲ್ಲಿ ಅನಿಯಂತ್ರಿತ ಪ್ರಸಾರ ವ್ಯವಸ್ಥೆಗೆ ಕಡಿವಾಣ ಹಾಕಿ, ಕಾನೂನು ರಚನೆ.
6) ನಿಷ್ಕ್ರಿಯ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಪುನಃ ಚೇತನಗೊಳಿಸಿ, ಮೀಡಿಯಾ ಕೌನ್ಸಿಲ್ ಆಫ್ ಇಂಡಿಯಾ ಎಂದು ಮರು ನಾಮಕರಣಕ್ಕೆ ಕ್ರಮ.
7)ಮುಂದಿನ ದಿನಗಳಲ್ಲಿ ಸಣ್ಣ ಪತ್ರಿಕೆಗಳು ಅವಸಾನದ ದಾರಿ ತುಳಿಯದಂತೆ ಎಐ ಬಗ್ಗೆ ಮಾಹಿತಿ. ತರಬೇತಿ ಕಾರ್ಯಾಗಾರ ನಡೆಸುವುದು.
8) ಪ್ರತಿ ತಿಂಗಳೂ ಆನ್‌ಲೈನ್ ಮೀಟಿಂಗ್ ಕರೆದು ‘ಪತ್ರಕರ್ತರ ಸಮಸ್ಯೆಗಳ ಬಗ್ಗೆ ಚರ್ಚಿಸುವುದು, ಸಂಘವನ್ನು ರಾಷ್ಟ್ರ ಮಟ್ಟದಲ್ಲಿ ಬಲಗೊಳಿಸುವುದು.ಸೇದಂತೆ ನಿರ್ಣಯಗಳನ್ನು ಮಾಡಲಾಯಿತು.

LEAVE A REPLY

Please enter your comment!
Please enter your name here