ಬೆಂಗಳೂರು ನಗರ ಜಿಲ್ಲೆ, ಡಿಸೆಂಬರ್ 20: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ರೂ. 75.31 ಕೋಟಿ ಅಂದಾಜು ಮೌಲ್ಯದ ಒಟ್ಟು 10 ಎಕರೆ 22.08 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಜಿ.ಜಗದೀಶ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಯಿತು.
ಇಂದು ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲ್ಲೂಕುಗಳ ತಹಶೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಗೋಮಾಳ, ರಾಜಕಾಲುವೆ, ಸರ್ಕಾರಿ ಕುಂಟೆ, ಸರ್ಕಾರಿ ಖರಾಬು, ಸರ್ಕಾರಿ ಸ್ಮಶಾನ, ಕೆರೆ, ಮುತ್ತುರಾಯ ದೇವರ ಇನಾಂ, ಖರಾಬು ತೋಪು ಜಾಗಗಳಿಗೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಕೈಗೊಂಡರು.
ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರಂ ಹೋಬಳಿಯ ಹಗದೂರು ಗ್ರಾಮದ ಸ.ನಂ: 11 ಗೋಮಾಳ, ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.06.08 ಗುಂಟೆಗಳಾಗಿದ್ದು ಅಂದಾಜು ಮೌಲ್ಯದ ರೂ.3.00 ಕೋಟಿಗಳಾಗಿರುತ್ತದೆ. ಬಿದರಹಳ್ಳಿ ಹೋಬಳಿಯ ದೊಡ್ಡಗುಬ್ಬಿ ಗ್ರಾಮದ ಸ.ನಂ: 65 ರಾಜಕಾಲುವೆ, ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು ಅಂದಾಜು ಮೌಲ್ಯದ ರೂ.1.50 ಕೋಟಿಗಳಾಗಿರುತ್ತದೆ.
ಆನೇಕಲ್ ತಾಲ್ಲೂಕಿನ ಕಸಬ-2 ಹೋಬಳಿಯ ಬೆಸ್ತಮಾನಹಳ್ಳಿ ಗ್ರಾಮದ ಸ.ನಂ. 118 ಸರ್ಕಾರಿ ಕುಂಟೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.20 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 0.28 ಲಕ್ಷಗಳಾಗಿರುತ್ತದೆ. ಅತ್ತಿಬೆಲೆ-1 ಹೋಬಳಿಯ ಇಂಡ್ಲಬೆಲೆ ಗ್ರಾಮದ ಸ.ನಂ. 128, 130 ಹಾಗೂ ಇತರೆ ಸ್ವ.ನಂ.ಗಳು ರಾಜಕಾಲುವೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.18 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ 0.36 ಲಕ್ಷಗಳಾಗಿರುತ್ತದೆ . ಸರ್ಜಾಪುರ-2 ಹೋಬಳಿಯ ಚಿಕ್ಕನಾಗಮಂಗಲ ಗ್ರಾಮದ ಸ.ನಂ. 177 ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.05 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 0.80 ಲಕ್ಷಗಳಾಗಿರುತ್ತದೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಬೇಗೂರು ಹೋಬಳಿಯ ಮೈಲಸಂದ್ರ ಗ್ರಾಮದ ಸ.ನಂ 31ರ ಸರ್ಕಾರಿ ಸ್ಮಶಾನ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0-20 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ.1.00 ಕೋಟಿಗಳಾಗಿರುತ್ತದೆ. ಉತ್ತರ ಹಳ್ಳಿ ಹೋಬಳಿಯ ತರಳು ಗ್ರಾಮದ ಸ.ನಂ 40 ರ ಕೆರೆ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 2 ಎಕರೆ 0.17 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ.2.50 ಕೋಟಿಗಳಾಗಿರುತ್ತದೆ. ತಾವರೆಕೆರೆ ಹೋಬಳಿಯ ದೊಣ್ಣೇನಹಳ್ಳಿ ಗ್ರಾಮದ ಸ.ನಂ 17 ರ ಮುತ್ತುರಾಯ ದೇವರ ಇನಾಂ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 0.25 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 0.63 ಲಕ್ಷಗಳಾಗಿರುತ್ತದೆ. ಕೆಂಗೇರಿ ಹೋಬಳಿಯ ತಗಚಗುಪ್ಪೆ ಗ್ರಾಮದ ಸ.ನಂ 66 ರ ಸರ್ಕಾರಿ ಖರಾಬು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 2 ಎಕರೆ 0-20 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ. 4.00 ಕೋಟಿಗಳಾಗಿರುತ್ತದೆ.
ಯಲಹಂಕ ತಾಲ್ಲೂಕಿನ ಹೆಸರುಘಟ್ಟ-2 ಹೋಬಳಿಯ ಕಡತನಮಲೆ ಗ್ರಾಮದ ಸ.ನಂ 13 ರ ಖರಾಬ್ ತೋಪು ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆ 0-10 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 2.00 ಕೋಟಿಗಳಾಗಿರುತ್ತದೆ. ಯಲಹಂಕ-3 ಹೋಬಳಿಯ ಚಿಕ್ಕಬೆಟ್ಟದಹಳ್ಳಿ ಗ್ರಾಮದ ಸ.ನಂ 14 ರ ಸರ್ಕಾರಿ ಗೋಮಾಳ ಒಟ್ಟು ಒತ್ತುವರಿ ತೆರವುಗೊಳಿಸಿರುವ ವಿಸ್ತೀರ್ಣ 1 ಎಕರೆ 0-28 ಗುಂಟೆಗಳಾಗಿದ್ದು, ಅಂದಾಜು ಮೌಲ್ಯ ರೂ 59.24 ಕೋಟಿಗಳಾಗಿರುತ್ತದೆ.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕರು, ವಿವಿಧ ತಾಲ್ಲೂಕಿನ ತಹಶೀಲ್ದಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.





