ಬೆಂಗಳೂರು:೧೪,ಆಗಸ್ಟ್ ೨೦೨೩,ರಂದುಸೋಮವಾರ ಬೆಳಿಗ್ಗೆ ೧೧-೦೦ಗಂಟೆಗೆ ಶ್ರೀ ಮದ್ ಜಗದ್ಗುರು ರೇವಣಸಿದ್ದೇಶ್ವರ ಸಿಂಹಾಸನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶಾಖಾಮಠ ಚಂದ್ರಾಲೇಔಟ್ ಬೆಂಗಳೂರಲ್ಲಿ ಪ್ರತಿಭಾ ಪುರಸ್ಕಾರವನ್ನು ಬೆಂಗಳೂರು ವಿಭಾಗ ಮಟ್ಟದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯರುಗಳಾದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶ್ರೀ ಕ್ಷೇತ್ರ ಕಾಗಿನೆಲೆ, ಜಗದ್ಗುರು ಶ್ರೀ ಶಿವಾನಂದಪುರಿ ಮಹಾಸ್ವಾಮಿಗಳು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶಾಖಾಮಠ ಕೆ.ಆರ್.ನಗರ ಮೈಸೂರು ವಿಭಾಗ, ಜಗದ್ಗುರು ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶಾಖಾಮಠ ತಿಂಥಿಣಿ ಬ್ರಿಜ್ ಕಲಬುರಗಿ ವಿಭಾಗ, ,ಇವರು ವಹಿಸುವರು
ಜಗದ್ಗುರು ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು, ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಶಾಖಾಮಠ ಕನಕ ಧಾಮ ಹೊಸದುರ್ಗ ಬೆಂಗಳೂರು ವಿಭಾಗ,ಇವರ ನೇತ್ರತ್ವದಲ್ಲಿ ನಡೆಯುವ ಈ ಕಾರ್ಯಕ್ರವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಕಾರ್ಯಕ್ರಮ ಉದ್ಘಾಟಿಸುವರು. ಈ ಕಾರ್ಯಕ್ದಮದ ಅಧ್ಯಕ್ಷತೆಯನ್ನು ಮಾಜಿಸಚಿವರಾದ ಹೆಚ್.ಎಂ.ರೇವಣ್ಣನವರು ವಹಿಸುವರು. ನಗರಾಭಿವೃದ್ಧಿ ಸಚಿವರಾದಶ್ರೀ ಭೈರತಿ ಸುರೇಶ್ ರವರು ಪ್ರತಿಭಾ ಪುರಸ್ಕಾರ ಪ್ರಧಾನ ಮಾಡುವರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಂಸದರೂ ಸಚಿವರೂ ಆದ ಸನ್ಮಾನ್ಯ ಶ್ರೀ ಹೆಚ್.ವಿಶ್ವನಾಥ್ ರವರು, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪನವರು, ಮಾಜಿ ಸಚಿವರಾದ ಬಂಡೆಪ್ಪ ಕಾಶೆಂಪುರ, ಗೋವಿಂದರಾಜ ನಗರ ಶಾಸಕರಾದ ಶ್ರೀ ಪ್ರಿಯಾಕೃಷ್ಣ ರವರು, ಮಾಜಿ ಸಂಸದರಾದ ಶ್ರೀ ಕೆ.ವಿರುಪಾಕ್ಷಪ್ಪನವರು, ಹೊಸದುರ್ಗ ಶಾಸಕರಾದ ಶ್ರೀ ಬಿಜಿ.ಗೋವಿಂದಪ್ಪನವರು, ಮಾಜಿ ಸಚಿವರಾದ ಆರ್.ಕೃಷ್ಣಪ್ಪನವರು,ಭಾಗ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ವಿಶೇಷ ಆವ್ಹಾನಿತರುಗಳಾಗಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿಗಳಾದ ಸನ್ಮಾನ್ಯ ಶ್ರೀ ಡಾ.ಬಿ.ಕೆ.ರವಿಯವರು,ಬೆಂಗಳೂರು ಜಿಲ್ಲಾಧಿಕಾರಿಗಳಾದ ಶ್ರೀ ಕೆ.ಎ.ದಯಾನಂದ ರವರು, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಾದ ಶ್ರೀ ರವೀಂದ್ರ ರವರು, ಮತ್ತು ಬೆಂಗಳೂರಿನ “ಇನ್ ಸೈಟ್” ಸಂಸ್ಥಾಪಕ ನಿರ್ದೇಶಕರಾದ ಶ್ರೀ ಜಿ.ಬಿ.ವಿನಯ್ ಕುಮಾರ್ ರವರು ಭಾಗವಹಿಸಲಿರುವರು.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಪರೀಕ್ಷೆಗಳಲ್ಲಿ ಹೆಚ್ಚು ಅಂಕಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವನ್ನು ಪ್ರತಿವರ್ಷ ನೀಡುತ್ತಾ ಬಂದಿದ್ದು ಇನ್ನು ಮುಂದೆ ಆರ್ಥಿಕ ವಾಗಿ ಹಿಂದುಳಿದಿರುವ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಪ್ರೋತ್ಸಹಿಸುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಶಾಸ್ವತ ನಿಧಿಯನ್ನು ಸ್ಥಾಪಿಸಬೇಕು ಈ ನಿಧಿಯಿಂದ ಬಡ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪುರಸ್ಕಾರ ನೀಡುವುದರ ಮೂಲಕ ಆðಕವಾಗಿ ಹಿಂದುಳಿದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂಬ ಮಹಾದಾಶೆಯನ್ನು ಪರಮಪೂಜ್ಯರುಗಳು ಈ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸುವ ಇಂಗಿತ ವ್ಯಕ್ತಪಡಿಸುವ ಸಾಧ್ಯತೆ ಇದೆ.





