ಮಂಗಳೂರು:ಎಂ.ಜೆ .ಎಂ. ಬಜ್ಪೆ ಇಸ್ಲಾಮಿಕ್ ಎಜುಕೇಷನ್ ಸೆಂಟರ್‌ನ ಕಾಲೇಜಿನಲ್ಲಿ ಪವಿತ್ರ ಕುರ್‌ಆನ್ ಕಂಠಪಾಠ ಮಾಡಿ ಹಾಫಿಜ್ ಪದವಿ ಪಡೆದ ವಿದ್ಯಾರ್ಥಿಗಳನ್ನು ಟೀಂ ಕರಾವಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟೀಂ ಕರಾವಳಿಯ ಸ್ಥಾಪಕ ಅಧ್ಯಕ್ಷರಾದ ನಿಸಾರ್ ಕರಾವಳಿ ಅವರ ನೇತೃತ್ವದ ತಂಡವು ವಿದ್ಯಾರ್ಥಿಗಳನ್ನು ಗೌರವಿಸಿ, ಅಭಿನಂದನೆಗಳನ್ನು ಸಲ್ಲಿಸಿತು.
ಪವಿತ್ರ ಕುರ್‌ಆನ್ ಕಂಠಪಾಠದ ಮೂಲಕ ಧಾರ್ಮಿಕ ಜ್ಞಾನವನ್ನು ಸಂಪಾದಿಸಿದ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯವಾಗಿದ್ದು, ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಲಾಯಿತು.





