ಬೆಂಗಳೂರು: ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್‌ಸಿಸಿಗೆ ಒಳಪಡುವ ಬೆಂಗಳೂರು ಗ್ರೂಪ್ ಎ-ನ ೧ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿ ದಳವು ಬೆಂಗಳೂರಿನ ಮಾಣೆಕ್‌ಶಾ ಪೆರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ‍್ಯ ದಿನಾಚರಣೆಯ ಪಥಸಂಚಲನದಲ್ಲಿ `ಅತ್ಯುತ್ತಮ ಪಥಸಂಚಲನ ದಳ’ ಎಂಬ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ವಿಜೇತ ದಳಕ್ಕೆ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಎನ್‌ಸಿಸಿ ಕೆಡೆಟ್‌ಗಳು ಪ್ರದರ್ಶಿಸಿದ ಶಿಸ್ತು, ನಿಖರವಾದ ಪಥಸಂಚಲನ ಕೌಶಲ್ಯ, ಸಮರ್ಪಣಾಭಾವ ಹಾಗೂ ಆದರ್ಶಪ್ರಾಯವಾದ ತಂಡಸ್ಫೂರ್ತಿ ಈ ಮಹತ್ವದ ಸಾಧನೆಗೆ ಕಾರಣವಾಗಿದೆ.

ಈ ಗೌರವವು ೧ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಗೆ ಹೆಮ್ಮೆಯ ಸಂಗತಿಯಾಗಿದ್ದು, ಬೆಟಾಲಿಯನ್‌ನ ಅಧಿಕಾರಿ ಕಮಾಂಡಿAಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ವಿಜಯ್ ಫೆಡ್ರಿಕ್ಸ್ ಅವರ ಸಮರ್ಥ ನೇತೃತ್ವದಲ್ಲಿ ಕೆಡೆಟ್‌ಗಳು ಹಾಗೂ ಸಿಬ್ಬಂದಿ ಸಲ್ಲಿಸಿದ ಅವಿರತ ಪರಿಶ್ರಮ ಮತ್ತು ಸಮರ್ಪಣೆಗೆ ಸಂದ ಗೌರವವಾಗಿದೆ.

ಈ ಸಾಧನೆಯು ೧ ಕರ್ನಾಟಕ ಬೆಟಾಲಿಯನ್ ಎನ್‌ಸಿಸಿಯ ಶಿಸ್ತು, ಬದ್ಧತೆ ಮತ್ತು ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದ್ದು, ಸಮಸ್ತ ಬೆಟಾಲಿಯನ್‌ಗೆ ಅಪಾರ ಹೆಮ್ಮೆಯನ್ನು ತಂದಿದೆ.

LEAVE A REPLY

Please enter your comment!
Please enter your name here