ಬೆಂಗಳೂರು: ಬೆಂಗಳೂರು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಅಫ್ಟಿಕ್ ಕ್ರಾಫ್ಟ್ ಸಹಯೋಗದಲ್ಲಿ ಪತ್ರಕರ್ತರಿಗೆ ಉಚಿತ ಕಣ್ಣು ತಪಾಸಣೆ ಮಾಡಲಾಯಿತು.
ರಾಷ್ಟ್ರೀಯ ಅಧ್ಯಕ್ಷರು, ಹಿರಿಯ ಪತ್ರಕರ್ತರಾದ ಬಿ. ವಿ ಮಲ್ಲಿಕಾರ್ಜುನಯ್ಯರವರು ಕಣ್ಣು ತಪಾಸಣೆ ಮಾಡಿಸಿಕೊಳ್ಳುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಗೌಡ ಸ್ವಾಗತಿಸಿದರು. ನಗರ ಘಟಕ ಅಧ್ಯಕ್ಷರಾದ ಸೋಮಶೇಖರ್ ಗಾಂಧಿ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಹೆಚ್. ಆರ್. ರವೀಶ್ ಡಾ. ಅಫ್ಟಿಕ್ ಕ್ರಾಫ್ಟ್ ನ ಮುಖ್ಯಸ್ಥರಾದ ಪ್ರಿಯೇಶ್ ಕುಮಾರ್ ರವರು ಈ ಸಂದರ್ಭದಲ್ಲಿ ಮಾತನಾಡಿದರು
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಸಿ ಲೋಕೇಶ್, ರಾಜ್ಯ ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಉಪಾಧ್ಯಕ್ಷರಾದ ಪರಿಮಳ ಹೆಚ್. ಎಸ್. ಕಾರ್ಯದರ್ಶಿಗಳಾದ ಕೆ. ಎಲ್. ಲೋಕೇಶ್, ಸದಸ್ಯರಾದ ರಾಜಗಿರಿ ಪ್ರದೀಪ್.ಆರ್, ಬಿ. ಕೆ. ಸುಂದರೇಶ್,ರವಿಕಾಂತ್ ಕುಂದಾಪುರ, ಬಿ. ಕೆ. ಸುಂದರೇಶ್, ರಾಮಾಕಾಂತ್ ಗುಗ್ರಿ, ಎನ್.ಶಿವಾನಂದ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂತಿಮ ಘಟ್ಟವಾಗಿ ವಂದನಾರ್ಪಣೆಯನ್ನು buwj ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ ಕೆ ಸುಂದರೇಶ್ ನೆರವೇರಿಸಿದರು





