ಬೆಂಗಳೂರು:ಡಾ.ವಿಷ್ಣುವರ್ಧನ್, ಬಿ ಸರೋಜಾ ದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆಯಾದ್ರೂ ಸಿಗದ ಪ್ರಶಸ್ತಿ: ಸಿಎಂ ಆದೇಶಕ್ಕಾಗಿ ಕಾಯುತ್ತಿದೆ ಕಡತ!
ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಕರ್ನಾಟಕ ರತ್ನವನ್ನು ಮರಣೋತ್ತರವಾಗಿ ಡಾ.ವಿಷ್ಣುವರ್ಧನ್, ಬಿ ಸರೋಜಾ ದೇವಿಗೆ ನೀಡಲಾಗುವುದು ಎಂದು ಘೋಷಣೆ ಮಾಡಲಾಗಿದೆ. ಆದರೆ, ‘ಕರ್ನಾಟಕ ರತ್ನ’ ಘೋಷಣೆಯಾದ್ರೂ ಪ್ರಶಸ್ತಿ ನೀಡಲಾಗಿಲ್ಲ. ಸಿಎಂ ಆದೇಶಕ್ಕಾಗಿ ಕಡತ ಕಾಯುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾಹಿತಿ ನೀಡಿದೆ. ಈ ಕಾರಣಕ್ಕಾಗಿ ಪ್ರಶಸ್ತಿ ನೀಡಲು ವಿಳಂಬ ಆಗುತ್ತಿದೆ ಎಂಬ ಉತ್ತರಿಸಿದೆ. 2025-26ನೇ ಸಾಲಿನ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ಡಾ.ವಿಷ್ಣುವರ್ಧನ್, ಬಿ ಸರೋಜಾ ದೇವಿಗೆ ಮರಣೋತ್ತರವಾಗಿ ನೀಡಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು: ಕನ್ನಡದ ಖ್ಯಾತ ನಟ ಡಾ. ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಗೆ ಮರಣೋತ್ತರವಾಗಿ ‘ ಕರ್ನಾಟಕ ರತ್ನ ’ ಪ್ರಶಸ್ತಿ ಘೋಷಣೆಯಾದರೂ ಇನ್ನೂ ಪ್ರದಾನ ಮಾಡಲಾಗಿಲ್ಲ. ಇದಕ್ಕೆ ಏನು ಕಾರಣ ಎಂಬುವದಕ್ಕೂ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ.
ರಾಜ್ಯ ಸರ್ಕಾರವು ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ. ವಿಷ್ಣುವರ್ಧನ್ ಮತ್ತು ಬಿ ಸರೋಜಾ ದೇವಿಗೆಮರಣೋತ್ತರವಾಗಿ 2025-26ನೇ ಸಾಲಿನ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನ ಘೋಷಣೆ ಮಾಡಿತ್ತು. ಆದರೆ ಪ್ರಶಸ್ತಿ ಘೋಷಣೆ ಆದರೂ ಪ್ರದಾನ ಆಗಿಲ್ಲ. ಬದಲಾಗಿ ವಿಳಂಬ ಆಗುತ್ತಿದೆ
ಕರ್ನಾಟಕ ಸರ್ಕಾರ ದಿನಾಂಕ 12-9- 2025 ರಲ್ಲಿ ಮಾಡಿದ ಆದೇಶದಂತೆ ಪ್ರಶಸ್ತಿ ಘೋಷಣೆ ಮಾಡಲಾಗಿತ್ತು. ಕರ್ನಾಕದ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸುವಂತೆ ಆದೇಶ ಮಾಡಲಾಗಿತ್ತು. ಆದರೆ, ಇದು ಕೇವಲ ಆದೇಶಕಷ್ಟೇ ಸೀಮಿತವಾಗಿದೆ.
ವಿಳಂಬ ಏಕೆ?
ಇಬ್ಬರು ದಿಗ್ಗಜರಿಗೆ ಪ್ರಶಸ್ತಿ ಘೋಷಣೆ ಮಾಡಿದರೂ ಪ್ರದಾನ ಮಾಡದೆ ಇರುವ ಬಗ್ಗೆ ಸರ್ಕಾರ ಸ್ಪಷ್ಟನೆಯನ್ನು ನೀಡಿದೆ. 2025- 26 ನೇ ಸಾಲಿನ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲು ದಿನಾಂಕ, ಸಮಯ ಮತ್ತು ಸ್ಥಳ ನಿಗದಿ ಮಾಡುವ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಅವರ ಆದೇಶ ಕೋರಿ ಕಡತ ಸಲ್ಲಿಸಲಾಗಿದೆ. ಈ ಕಡತ ಪರಿಶೀಲನೆಯ ಹಂತದಲ್ಲಿದೆ ಎಂದು ಉತ್ತರ ನೀಡಿದೆ.





