ಧಾರವಾಡ ಮೇ 16: ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ ಜರುಗಿಸುವ ಕುರಿತು ಪೂರ್ವ ಸಿದ್ಧತೆಗಳ ಅಂಗವಾಗಿ 2025ರ ಮತದಾರರ ಯಾದಿಯಲ್ಲಿ ನೋಂದಣಿಯಾದ ಮತದಾರರನ್ನು 2002ರ ಮತದಾರರ ಪಟ್ಟಿಗೆ ತಾಳೆ ಮಾಡುವ (Mapping and Progeny) ಕಾರ್ಯವನ್ನು ಕೈಗೊಳ್ಳಲಾಗಿರುತಿದೆ ಎಂದು ಜಿಲ್ಲಾ ಚುನಾವಣಾಧಿಗಳು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2025ನೇ ಸಾಲಿನ ಮತದಾರರ ಪಟ್ಟಿಯಲ್ಲಿ 40 ಹಾಗೂ 40 ವರ್ಷಕ್ಕಿಂತ ಅಧಿಕ ವಯಸ್ಸಿನ ಮತದಾರರನ್ನು ಹಾಗೂ ಅವರ ಕುಟುಂಬ ಸದಸ್ಯರನ್ನು (ಉದಾ: ಮಗ, ಮಗಳು ಹಾಗೂ ಮೊಮ್ಮಕ್ಕಳು) 2002ರ ಮತದಾರರ ಪಟ್ಟಿಗೆ Mapping and Progeny ಮಾಡಿದಲ್ಲಿ, ಅಂತಹ ಮತದಾರರಿಂದ ಪೂರಕ ದಾಖಲೆಗಳನ್ನು ಸಂಗ್ರಹಿಸದೇ ನೇರವಾಗಿ ಹೊಸ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಬಹುದಾಗಿದೆ. ತಪ್ಪಿದಲ್ಲಿ, Mapping and Progeny ಮಾಡದೇ ಇರುವ ಮತದಾರರು ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ, ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಅವರು ಹೇಳಿದ್ದಾರೆ.

ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅದರಂತೆ 1) ಯಾವುದೇ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಪಿಎಸ್‍ಯುನ ನಿಯಮಿತ ಉದ್ಯೋಗಿ ಅಥವಾ ಪಿಂಚಣಿದಾರರಿಗೆ ನೀಡಲಾದ ಯಾವುದೇ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ, 2) ಜುಲೈ 01, 1987 ಕ್ಕಿಂತ ಮೊದಲು ಭಾರತದಲ್ಲಿ ಸರ್ಕಾರ ಅಥವಾ ಸ್ಥಳೀಯ ಅಧಿಕಾರಿಗಳು ಅಥವಾ ಬ್ಯಾಂಕ್‍ಗಳು ಅಥವಾ ಅಂಚೆ ಕಚೇರಿ ಅಥವಾ ಎಲ್‍ಐಸಿ, ಪಿಎಸ್‍ಯುಗಳು ನೀಡಿದ ಯಾವುದೇ ಗುರುತಿನ ಚೀಟಿ ಅಥವಾ ಪ್ರಮಾಣ ಪತ್ರ ಅಥವಾ ದಾಖಲೆ, 3) ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣ ಪತ್ರ 4) ಪಾಸ್ ಪೆÇೀರ್ಟ್., 5)ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳು ನೀಡಿದ ಮೆಟ್ರಿಕ್ಯುಲೇಷನ್ ಅಥವಾ ಶೈಕ್ಷಣಿಕ ಪ್ರಮಾಣಪತ್ರ., 6)ಸಕ್ಷಮ ರಾಜ್ಯ ಪ್ರಾಧಿಕಾರದಿಂದ ನೀಡಲಾದ ಶಾಶ್ವತ ನಿವಾಸ ಪ್ರಮಾಣ ಪತ್ರ., 7)ಅರಣ್ಯ ಹಕ್ಕು ಪ್ರಮಾಣ ಪತ್ರ., 8)ಒಬಿಸಿ ಅಥವಾ ಎಸ್‍ಸಿ ಅಥವಾ ಎಸ್‍ಟಿ ಅಥವಾ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಯಾವುದೇ ಜಾತಿ ಪ್ರಮಾಣಪತ್ರ., 9)ರಾಷ್ಟ್ರೀಯ ನಾಗರಿಕರ ನೋಂದಣಿ (ಅದು ಎಲ್ಲೆಲ್ಲಿ ಅಸ್ತಿತ್ವದಲ್ಲಿದೆಯೋ ಅಲ್ಲಿ)., 10)ರಾಜ್ಯ ಅಥವಾ ಸ್ಥಳೀಯ ಅಧಿಕಾರಿಗಳು ಸಿದ್ಧಪಡಿಸಿದ ಕುಟುಂಬ ನೋಂದಣಿ., 11)ಸರ್ಕಾರದಿಂದ ಪಡೆದ ಯಾವುದೇ ಭೂಮಿ ಅಥವಾ ಮನೆ ಹಂಚಿಕೆ ಪ್ರಮಾಣಪತ್ರ., 12)ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಧಾರ್ ಅನ್ನು ಪೌರತ್ವದ ಪುರಾವೆಯಾಗಿ ಅಲ್ಲ, ಗುರುತಿನ ಪುರಾವೆಯಾಗಿ ಸ್ವೀಕರಿಸಲಾಗುವುದು. ಈ ಮುಂತಾದ ನಿಯಮಾವಳಿಗಳನ್ನು ಭಾರತ ಚುನಾವಣಾ ಆಯೋಗ ನೀಡಿದ್ದು ಇದರ ಅನ್ವಯ ಮತದಾರರ ಪಟ್ಟಿಗೆ ಹೆಸರು ಸೆರ್ಪಡೆ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟಾರೆಯಾಗಿ ಮೇ 15, 2026 ರವರೆಗೆ ಮ್ಯಾಪಿಂಗ್ (Mapping) ಕಾರ್ಯದಲ್ಲಿ ಶೇಕಡಾ 66.99 ಮತ್ತು ಪ್ರೋಗೆನ್ಸಿ (Progeny) ದಲ್ಲಿ ಶೇ. 116.27 ರಷ್ಟು ಮತ್ತು Mapping including Progeny ಕಾರ್ಯದಲ್ಲಿ ಶೇಕಡಾ 87.77 ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಆದರೆ ಇನ್ನೂವರೆಗೂ Mapping ಮತ್ತು Progeny ಆಗದೇ ಬಾಕಿ ಇರುವ ಎಲ್ಲಾ ಮತದಾರರನ್ನು ಮ್ಯಾಪಿಂಗ್ ಕಾರ್ಯ ಮಾಡಲು 1 ನೇ ಹಂತದ ಮೇ 17 ಮತ್ತು ಮೇ 18, 2026 ರ ವರೆಗೆ ಹಾಗೂ 2ನೇ ಹಂತದ ಮೇ 23 ಮತ್ತು ಮೇ 24, 2026 ರ ವರೆಗೆ ವಿಶೇಷ ಅಭಿಯಾನಗಳನ್ನು ಆಯೋಜಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ತಿಳಿಸಿರುತ್ತಾರೆ.
ಮೇ 17 ಮತ್ತು ಮೇ 18, 2026 ರ ವರೆಗೆ ಹಾಗೂ 2ನೇ ಹಂತದ ಮೇ 23 ಮತ್ತು ಮೇ 24, 2026 ರ ವರೆಗಿನ ದಿನಗಳಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಜಿಲ್ಲೆಯ 71-ಧಾರವಾಡ, 72-ಹುಬ್ಬಳ್ಳಿ-ಧಾರವಾಡ ಪೂರ್ವ, 73-ಹುಬ್ಬಳ್ಳಿ-ಧಾರವಾಡ ಕೇಂದ್ರ ಮತ್ತು 74-ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರಗಳ ಪೈಕಿ ಶೇ 80 ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಪ್ರತಿಯೊಂದು ಮತಗಟ್ಟೆಗಳಲ್ಲಿ ಹಾಗೂ ಮತಗಟ್ಟೆಗಳ ವ್ಯಾಪ್ತಿಯಲ್ಲಿ, ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳು ಹಾಜರಿದ್ದು Mapping ಮತ್ತು Progeny ಕಾರ್ಯ ಕೈಗೊಳ್ಳುವರು.

ಸಾರ್ವಜನಿಕರು ತಮಗೆ ಸಂಬಂಧಿಸಿದ ಮತಗಟ್ಟೆಗಳಿಗೆ ಭೇಟಿ ನೀಡಿ, ತಮ್ಮ ಮತ್ತು ಕುಟುಂಬದವರ ಹೆಸರುಗಳು Mapping ಮತು Progeny ಆದ ಬಗ್ಗೆ ಖಚಿತ ಪಡಿಸಿಕೊಳ್ಳಲು ಮತ್ತು Mapping ಮತ್ತು Progeny ಆಗದೇ ಇದ್ದಲ್ಲಿ ಭೇಟಿ ಸಮಯದಲ್ಲಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here