ಬೆಂಗಳೂರು:ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆ ಮೂಲಕ 14,525+ ಉದ್ಯೋಗಗಳ ಸೃಷ್ಟಿಯಾಗಲಿದೆ ಎಂದು ಭ್ರಹತ್ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ.ಬಿ.ಪಾಟೀಲರು ಹೇಳಿದ್ದಾರೆ.
ರಾಜ್ಯ ಸರ್ಕಾರವು ಉದ್ಯೋಗ ಸೃಷ್ಟಿಯತ್ತ ಮತ್ತೊಂದು ಪೂರಕ ಹೆಜ್ಜೆ ಹಾಕಿದೆ ಎಂದು ತಿಳಿಸಿದ್ದಾರೆ.
₹4,824 ಕೋಟಿ ಮೊತ್ತದ ಬಂಡವಾಳ ಹೂಡಿಕೆಗೆ ಸಮ್ಮತಿ ಸಿಕ್ಕಿದ್ದು 14,525+ ಉದ್ಯೋಗಗಳ ಸೃಷ್ಟಿ
ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ ಸೇರಿದಂತೆ 13 ಜಿಲ್ಲೆಗಳಲ್ಲಿ ಕೈಗಾರಿಕಾ ಸ್ಥಾಪನೆಗೆ ಹಸಿರು ನಿಶಾನೆ ದೊರಕಿದೆ ಎಂದಿದ್ದಾರೆ.
ಶುಕ್ರವಾರ ಸಚಿವರು ತಮ್ಮ ಅಧ್ಯಕ್ಷತೆಯಲ್ಲಿ ಜರುಗಿದ 158ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ₹4,824 ಕೋಟಿ ಬಂಡವಾಳ ಹೂಡಿಕೆಗೆ ಸಮ್ಮತಿ ನೀಡಲಾಯಿತು ಎಂದು ಹೇಳಿಕೊಂಡಿದ್ದಾರೆ.
ರಾಜ್ಯದ 13 ಜಿಲ್ಲೆಗಳಾದ್ಯಂತ 37 ಹೊಸ ಕೈಗಾರಿಕೆಗಳು ಹಾಗೂ 2 ಹೆಚ್ಚುವರಿ ಯೋಜನೆಗಳಿಗೆ ಹಸಿರು ನಿಶಾನೆ ಸಿಕ್ಕಿದೆ. ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ಕೋಲಾರ, ರಾಮನಗರ ಸೇರಿದಂತೆ ಅನೇಕ ಭಾಗಗಳಲ್ಲಿ ಕೈಗಾರಿಕಾ ಚಟುವಟಿಕೆಗಳು ವೇಗ ಪಡೆಯಲಿದ್ದು, ಇದರ ಫಲವಾಗಿ 14,525ಕ್ಕೂ ಹೆಚ್ಚು ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದ್ದಾರೆ.
ಐಟಿ ಮೂಲಸೌಲಭ್ಯ, ಸಕ್ಕರೆ ಕಾರ್ಖಾನೆ, ಟೆಕ್ನಿಕಲ್ ಟೆಕ್ಸ್ ಟೈಲ್, ಕಂಪ್ರೆಸ್ಡ್ ಗ್ಯಾಸ್, ವೈಮಾಂತರಿಕ್ಷ, ಎಲೆಕ್ಟ್ರಾನಿಕ್ಸ್, ಸಾಫ್ಟ್ವೇರ್, ಚಿನ್ನಾಭರಣ ತಯಾರಿಕೆ ಹಾಗೂ ಪಂಚತಾರಾ ಹೋಟೆಲ್ ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಆಗುತ್ತಿರುವುದು ಕರ್ನಾಟಕವನ್ನು ಮತ್ತಷ್ಟು ಶಕ್ತಿಶಾಲಿ ಕೈಗಾರಿಕಾ ಕೇಂದ್ರವನ್ನಾಗಿಸುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
₹50 ಕೋಟಿಗೂ ಹೆಚ್ಚು ಹೂಡಿಕೆಯ 22 ದೊಡ್ಡ ಹಾಗೂ ಮಧ್ಯಮ ಕೈಗಾರಿಕಾ ಯೋಜನೆಗಳು ಮಾತ್ರವೇ ₹3,908 ಕೋಟಿ ಹೂಡಿಕೆ ತರುತ್ತಿದ್ದು 12,475 ಉದ್ಯೋಗಗಳನ್ನು ಸೃಷ್ಟಿಸಲಿವೆ. ಜೊತೆಗೆ ₹15–₹50 ಕೋಟಿಯ 15 ಹೊಸ ಯೋಜನೆಗಳು ಹಾಗೂ ಹೆಚ್ಚುವರಿ ಹೂಡಿಕೆಯ 2 ಯೋಜನೆಗಳೂ ಸೇರಿ ಅಭಿವೃದ್ಧಿಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿವೆ.
ಹೂಡಿಕೆ ಹೆಚ್ಚಾದರೆ ಉದ್ಯೋಗ ಹೆಚ್ಚುತ್ತದೆ…ಉದ್ಯೋಗ ಹೆಚ್ಚಾದರೆ ರಾಜ್ಯದ ಭವಿಷ್ಯ ಮತ್ತಷ್ಟು ಬಲವಾಗುತ್ತದೆ. ಕರ್ನಾಟಕ ಕೈಗಾರಿಕಾ ಬೆಳವಣಿಗೆಯ ಮತ್ತೊಂದು ಶಕ್ತಿಶಾಲಿ ಅಧ್ಯಾಯವನ್ನು ಬರೆಯುತ್ತಿದೆ!ಎಂದು ಹೇಳಿರುತ್ತಾರೆ.

LEAVE A REPLY

Please enter your comment!
Please enter your name here