ಹರಿಹರ: ಸ್ವಾತಂತ್ರದ ನಂತರ ಒಡೆದು ಹಂಚಿಹೋಗಿದ್ದ ಪಂಚಮಸಾಲಿ ಸಮಾಜವನ್ನು ಇಂದು ಒಂದುಗೂಡಿಸಿರುವ ನಮ್ಮ ಸಮಾಜದ ಹಿರಿಯರಲ್ಲಿ ಒಬ್ಬರಾದ ಬಿ.ಸಿ ಉಮಾಪತಿ ಅವರು, ತಿಳಿದೂ-ತಿಳಿಯದೆಯೋ ಲೆಕ್ಕ ನೀಡುವಲ್ಲಿ ಎಡವಿದ್ದಾರೆ. ಸಮಾಜವು ನೀಡಿರುವ ಹಣದ ಲೆಕ್ಕಕೊಡುವುದಕ್ಕೆ ತಡವೇಕೆ?. ರೋಕ್ಕಕೊಟ್ಟಿರುವ ನಾವು ಲೆಕ್ಕಕೊಡಿ ಚಳುವಳಿ ಆರಂಭಿಸಿದ್ದು. ಲೆಕ್ಕಕೊಡುವವರೆಗೂ ಚಳುವಳಿ ನಿಲ್ಲಿಸುವುದಿಲ್ಲವೆಂದು ಗಡಿ ನಾಡು ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಗುಡುಗಿದರು.
ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಪಂಚಮಸಾಲಿ ಗುರುಪೀಠದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಭಾರತವನ್ನು ಅತಿಕ್ರಮಿಸಿದ್ದ ಬ್ರಿಟೀಷರನ್ನು ಹೊರಹಾಕಲು ನಮ್ಮ ಸಮಾಜದ ವೀರರಾಣಿ ಕಿತ್ತೂರುಚನ್ನಮಾಜಿ ಅವರು ಸ್ವಾತಂತ್ರ ಸಂಗ್ರಾಮ ಆರಂಭಿಸಿದ್ದರು. ಸ್ವಾತಂತ್ರ್ಯ ನಂತರ ನಮ್ಮ ಸಮಾಜ ಒಡೆದು ಹಂಚಿಹೋಗಿತ್ತು.
ಅಂಥಹ ಸಮಾಜವನ್ನು ಒಂದುಗೂಡಿಸುವಲ್ಲಿ ನಮ್ಮ ಹಿರಿಯರಾದ ಮಾಜಿ ಮಂತ್ರಿ ದಿ. ಭೀಮಣ್ಣ ಖಂಡ್ರೆ, ಬಾವಿ ಬೆಟ್ಟಿಪ್ಪ, ಪಿ.ಡಿ ಶಿರೂರು, ಬಸವರಾಜ ದಿಂಡೂರು, ಹರಿಹರದ ಹೆಚ್.ಪಿ ಬಾಬಣ್ಣ, ದಾವಣಗೆರೆ ಬಿ.ಸಿ ಉಮಾಪತಿ, ಸೋಮನಗೌಡ ಮಾಲಿ ಪಾಟೀಲ ಸೇರಿದಂತೆ ಸಮ್ಮ ಸಮಾಜದ ಅನೇಕ ಹಿರಿಯರು ರಾಜ್ಯದ ಮೂಲೆ ಮೂಲೆಗೆಗಳಲ್ಲಿನ ಹಳ್ಳಿ-ಪಟ್ಟಣಗಳಿಗೆ ಹಗಲು ರಾತ್ರಿಯನ್ನದೆ ಸಂಚರಿಸಿ ಸಮಾಜವನ್ನು ಒಂದುಗೂಡಿಸಿದ್ದಾರೆ.
ರಾಜ್ಯಾದ್ಯಂತ ಇರುವ ನಮ್ಮ ಸಮಾಜದ ಒಂದು ವರೆಕೋಟಿ ಪಮಚಮಸಾಲಿ ಸಮಾಜ ಬಾಂದವರು, ನಮ್ಮ ನೌಕರ ಬಂಧುಗಳು ಹರಿಹರದ ಹರ ಪೀಠದ ಸಮಗ್ರ ಅಭಿವೃದ್ಧಿಗಾಗಿ ಅದೆಷ್ಠೋ ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಮಠ (ಪೀಠ) ನಿರ್ಮಿಸಿರುವ ಭೂಮಿ ಖರೀಧಿಸಲು, ಮಠದ ಆವರಣದಲ್ಲಿ ಅತಿಥಿ ಗೃಹ, ಬೋಜನಾಲಯ, ಶ್ರೀ ಪೀಠದ ಪ್ರಥಮ ಜಗ್ಗುರು ಲಿಂ. ಸಿದ್ದಲಿಂಗ ಶ್ರೀಗಳ ಐಕ್ಯಮಂಠಪ, ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು, ನೀರಿಗಾಗಿ ಬೊರ್‌ವೆಲ್ ಕೊರೆಯಿಸಲು ಹಾಗೂ ಇತರೆ ಅಭಿವೃದ್ಧಿ ಕಾರ್ಯಕ್ಕೆ, ರಾಜ್ಯದ ಹಲವಾರು ಮಂತ್ರಿಗಳು, ಶಾಸಕರು, ಇತರೆ ಸಮಾಜ ಬಾಂದವರು, ದಾನಿಗಳು ಹಾಗೂ ಸಮಾಜದವನಾದ ನಾನು ಸಹ ಧನ ಸಹಾಯ ಮಾಡಿದ್ದೆನೆ.
ಆದರೆ, ನಮ್ಮ ಸಮಾಜದ ಹಿರಿಯಣ್ಣ ಶ್ರೀಪೀಠದ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ, ಕಾರ್ಯದರ್ಶಿ ಕೆ.ಎಂ ಜ್ಯೋತಿಪ್ರಕಾಶ್, ಇತ್ತಿಚಿನ ದಿನಗಳಲ್ಲಿ ಧರ್ಮದರ್ಶಿಗಳಾಗಿರುವ ಹರಿಹರದ ಚಂದ್ರಶೇಖರ ಪೂಜಾರ ಈ ಮೂವರು, ರಾಜ್ಯಾದ್ಯಂತ ಇರುವ ನಮ್ಮ ಸಮಾಜದ ಜನರು, ನೌಕರರು ಹಾಗೂ ರಾಜ್ಯ ಸರ್ಕಾರ ಶ್ರೀಪೀಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗಾಗಿ ನೀಡಿರುವ ಹಣದ ಲೆಕ್ಕವನ್ನು ಕೇಳುತ್ತಿದ್ದಾರೆ. ಹಣ ನೀಡಿದ ಸಮಾಜ ಬಾಂದವರು ಖರ್ಚು ವೆಚ್ಚದ ಲೆಕ್ಕ ಪತ್ರ ಕೆಳಿದರೆ ಕೊಡಲು ಇವರಿಗೆಕೆ ಕೋಪ ಬರುತ್ತದೆ.?
ಸಮಾಜದ ಸಮಸ್ತ ಜನರ ಬೆಂಬಲದೊಂದಿಗೆ ಇಂದಿನಿಂದ ಲೆಕ್ಕಕೊಡಿ ಚಳುವಳಿ ಆರಂಭಿಸಿದ್ದೆವೆ. ಲೆಕ್ಕಕೊಡುವವರೆಗೂ ನಮ್ಮ ಚಳುವಳಿ ನಿಲ್ಲುವುದಿಲ್ಲ. ಶಿಗ್ಗಾಂವಿಯಲ್ಲಿ ಶ್ರಿಪೀಠಕ್ಕೆ ನನ್ನ ಸ್ವಂತದ ೨ ಎಕರೆ ಜಮೀನನ್ನು ನೀಡಿದ್ದೆನೆ, ಅದರಂತೆ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಹ ೨ ಎಕರೆ ಜಮೀನು ನೀಡಿದ್ದು ಇರುತ್ತದೆ. ಆಮಾಜದ ಜನರನ್ನು ದಾರಿತಪ್ಪಿಸಲು, ಕೆಲವರು ಈ ಕುರಿತು ಸುಳ್ಳು ಮಾಹಿತಿಯೋಂದಿಗೆ ಅಪ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಜನರು ಕಿವಿಗೊಡಬಾರದೆಂದು ಸೋಮಣ್ಣ ಬೇವಿನಮರದ ಸಮಾಜಬಾಂದವರಲ್ಲಿ ಮನವಿ ಮಾಡಿಕೊಂಡರು.
ಶ್ರೀಪೀಠದ ಆಡಳಿತಾಧಿಕಾರಿಗಳಾದ ಡಾ| ಹೆಚ್.ಪಿ ರಾಜಕುಮಾರ ಅವರು ಮಾತನಾಡಿ, ಕಳೆದ ಹಲವಾರು ದಿನಗಳಿಂದ ಸಮಾಜದ ಅನೇಕರು ಶ್ರೀಪೀಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಹಾಗೂ ದೇಣಿಗೆಯಾಗಿ ನೀಡಿರುವ ಹಣದ ಕುರಿತು, ಜಮಾ-ಖರ್ಚ್ಛು ನೀಡಿರೆಂದು ಕೇಳುತ್ತಿದ್ದು, ಮಾ ೧೦ ರಂದು ಶ್ರೀಪೀಠದಲ್ಲಿ ಪ್ರಧಾನ ಧರ್ಮದರ್ಶಿ, ಕಾರ್ಯದರ್ಶಿ ಹಾಗೂ ಧರ್ಮದರ್ಶಿಗಳ, ಸಮಾಜದ ಮುಖಂಡರ ಸಭೆ ಏರ್ಪಡಿಸಿದ್ದೆವು. ಸಭೆಯಲ್ಲಿ ಜನವರಿ ೨೦೨೬ ರ ೧೪ ರಂದು ನಡೆದ ಹರ ಜಾತ್ರೆ, ಮತ್ತು ಈ ವಿಷಯದ ಕುರಿತು ಚರ್ಚಿಸಿದೆವು.
ನಂತರ ಶ್ರೀ ಪೀಠದ ಧಮರ್ಶಿಗಳ ಸಭೆ ನಡೆಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಪ್ರಧಾನ ಧರ್ಮದಶಿ ಬಿ.ಸಿ ಉಮಾಪತಿ, ಕಾರ್ಯದರ್ಶಿ ಕೆ.ಎಂ ಜ್ಯೋತಿಪ್ರಕಾಶ, ಚಂದ್ರಶೇಖರ ಪೂಜಾರ ಅವರುಗಳು ನಾವು ಕೇಳಿದ್ದ ಲೆಕ್ಕದ ಮಾಹಿತಿ ನೀಡಲು ನೀರಾಕರಿಸಿದರಲ್ಲದೆ. ಪೀಠದ ಶ್ರೀಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ, ಆಡಳಿತಾಧಿಕಾರಿಗಳಾದ ನನ್ನ ಹಾಗೂ ಇತರರ ಕುರಿತು ಕೀಳು ಭಾಷೆಯಲ್ಲಿ ಮಾತನಾಡಿ, ಖರ್ಚು ವೆಚ್ಚದ ಲೆಕ್ಕ ನೀಡುವಲ್ಲಿ ಕಾಲಹರಣ ಮಾಡಿ, ನಂತರ ನನ್ನ ಮನಸ್ಸಿಗೆ ನೋವಾಗುವಂತೆ ವರ್ತಿಸಿದ್ದರಿಂದ ನಾನು ಸಭೆಯಿಂದ ಹೊರಗೆ ಹೋಗಲು ಸಿದ್ದನಾಗಿ, ಹೋರಗೆ ಹೋಗಲು ಮುಂದಾಗಿದ್ದ ಸಮಯದಲ್ಲಿ ನನ್ನ ಎದೆಯ ಬಾಗಕ್ಕೆ ನೋವಾಗುವಂತೆ ತಳ್ಳಾಡಿದರು.
ನಂತರ ಆಯಾಸದಿಂದ ನರಳುತ್ತಿದ್ದ ನಾನು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಹರಿಹರದ ಹೆಚ್.ಪಿ ಬಾಬಣ್ಣ ಹಾಗೂ ಇತರರ ಸಹಕಾರದಿಂದ ಹರಿಹರ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು, ನಂತರ ಪೊಲೀಸ್ ಠಾಣೆಗೆ ತೆರಳಿ, ಸಾಕ್ಷ ನಾಶಪಡಿಸಲು ಮಠದ ಆವರಣದಲ್ಲಿನ ಅಧ್ಯಕ್ಷರ ಕಛೇರಿ ಬೀಗ ಒಡೆದು ಸಿಸಿಟಿವಿಯ ದೃಷ್ಯಾವಳಿ ಸಂಗ್ರಹಿಸಿಕೊಂಡಿರುವ ಡಿವಿಆರ್‌ಅನ್ನು, ಕಿತ್ತುಕೊಂಡು ಹೋಗಿರುವ ಟ್ರಸ್ಟಿಗಳಾದ ಚಂದ್ರಶೇಖರ ಪೂಜಾರ, ಅವರ ಹಿಂಬಾಲಕರಾದ ಶಿವರಾಜ, ಲಿಂಗರಾಜ ಮೇಲೆ ಕ್ರಮಕ್ಕಾಗಿ ಅವರ ವಿರುದ್ದ ಪ್ರಕರಣ ದಾಖಲಿಸಿದ್ದಾನೆ.
ಈ ಪೀಠಕ್ಕೆ ಭಕ್ತರಿಂದ, ಸಮಾಜ ಭಾಂದವರಿಂದ, ನೌಕರರಿಂದ, ಸರ್ಕಾರದಿಂದ ಅಪಾರ ಪ್ರಮಾಣದಲ್ಲಿ ಕೊಟ್ಯಾಂತರ ರೂ ಹಣ ಬಂದು ಸಂಗ್ರಹಗೊಂಡಿದೆ, ಅದರಲ್ಲಿ ಭಾರಿ ಪ್ರಮಾಣದಲ್ಲಿ ಅವ್ಯವಹಾರವಾಗಿದೆ ಅದನ್ನು ಸರಿಪಡಿಸಲು ನನ್ನ ಮನೆಯಬಾಗಿಲಿಗೆ ಬಂದು ಪರಿಪರಿಯಾಗಿ ಕೇಳಿಕೊಂಡವರೆ ನನ್ನ ಸಮಾಜದವರು. ಈ ಅದನ್ನು ಸರಿಪಡಿಸಲು ಮುಂದಾಗಿದ್ದು, ನನಗೆ ಹಾಗೂ ಪೀಠದ ಶ್ರೀಗಳಿಗೆ ಜೀವ ಭಯವಿದ್ದು. ನನಗಾಗಲಿ, ಮಠದ ಗುರುಗಳ ಜೀವಕ್ಕಾಗಲಿ ಯಾವುದೇ ರೀತಿಯ ಜೀವ ಹಾನಿಯಾದಲ್ಲಿ ಅದಕ್ಕೆ ಪ್ರಧಾನ ಧರ್ಮದರ್ಶಿ ಬಿ.ಸಿ ಉಮಾಪತಿ, ಕಾರ್ಯದರ್ಶಿ ಕೆ.ಎಂ ಜ್ಯೋತಿಪ್ರಕಾಶ್, ಟ್ರಸ್ಟಿ ಚಂದ್ರಶೇಖರ ಪೂಜಾರ ಅವರೆ ಮೂಲ ಕಾರಣ ಎಂದು, ಹರ ಪೀಠದ ಆಡಳಿತಾಧಿಕಾರಿ ಡಾ| ಹೆಚ್.ಪಿ ರಾಜಕುಮಾರ ತಮ್ಮ ನಿಲುವನ್ನು ಸ್ಪಷ್ಠಪಡಿಸಿದರು.
ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಮಯದಲ್ಲಿಯೇ ಮಧ್ಯ ಪ್ರವೇಶಿಸಿದ ಹೊನ್ನಾಳಿಯ ಪ್ರಶಾಂತ ಪೇಟೆ, ಬಿ.ಸಿ ಉಮಾಪತಿ ಅವರೆ ನಮ್ಮ ಪೀಠದ ಧರ್ಮದರ್ಶಿಗಳು ಅವರಿಲ್ಲದೆ ಸಭೆ ನಡೆಯುತ್ತಿರುವುದು ಸರಿ ಅಲ್ಲ, ಶಿಗ್ಗಾವಿಯಲ್ಲಿ ಶ್ರೀಪೀಠದ ೨ ಎಕರೆ ಜಮೀನನ್ನು ಸೋಮಣ್ಣ ಬೇವಿನಮರದ ಅವರ ಹೇಸರಿಗೆ ನೀವು ನೀಡಿದ್ದಿರಿ, ನೀವು ಮಠಕ್ಕೆ ಆಡಳಿತಾಧಿಕಾರಿ ಅಲ್ಲ. ಮಠದ ವ್ಯವಹಾರದಲ್ಲಿ ನಿಮ್ಮದೆನು ಕೆಲಸ ಹೋರಗೆ ನಡೆಯಿರಿ ಎಂದು ಭಾರಿ ಗದ್ದಲ ನಡೆಸಿದರು.
ಆಗ ಸಭೆಯಲ್ಲಿಯೇ ಇದ್ದ ಸೋಮಣ್ಣ ಬೇವಿನಮರದ ಅವರು ಮಾತನಾಡಿ, ರಾಜ್ಯದ ಬಳ್ಳಾರಿ, ಹೊಸಪೇಟೆ, ಹರಿಹರ, ದಾವಣಗೆರೆ, ಹಿರೇಕೆರೂರು, ಶಿಗ್ಗಾವಿಯಲ್ಲಿ ಶ್ರೀಪೀಠದ ಹೆಸರಿಗೆ ಆಸ್ತಿ ಇದ್ದು, ಅವುಗಳನ್ನು ಹಾಗೂ ಶ್ರೀಪೀಠದ ಟ್ರಸ್ಟ್ ಹೆಸರಿನಲ್ಲಿನ ಬ್ಯಾಂಕ್ ಪಾಸ್‌ಬುಕ್, ಠರಾವು ಪುಸ್ತಕ, ರಸಿದಿ ಬುಕ್ ಮಠದಲ್ಲಿ ಇಲ್ಲ, ಬಿ.ಸಿ ಉಮಾಪತಿ ಅವರ ಮನೆಯಲ್ಲಿವೆ, ನಾನು ಹಾಗೆನೂ ಮಾಡಿಲ್ಲ, ಶಿಗ್ಗಾಂವಿಗೆ ಬಂದು ನೋಡಿರಿ ಆಗ ಗೊತ್ತಾಗುತ್ತದೆ ಸತ್ಯ, ಶ್ರೀಗಳಿಗೆ, ಮಠಕ್ಕೆ ನಾನೆನು ಮಾಡಿದ್ದೆನೆ ಎಂಬುದು ರಾಜ್ಯದ ಸಮಸ್ತ ಪಂಚಮಸಾಲಿಗಳಿಗೆ ತಿಳಿಯುತ್ತದೆ, ಎಂದು ಸಮಸ್ಯಗೆ ಸ್ಪಷ್ಠಿಕರಣ ನೀಡಿದರು ಆಗ ಸಭೆಯಲ್ಲಿ ಶಾಂತತಿಯ ವಾತಾವರಣ ಸೃಷ್ಠಿಯಾಯಿತು.
ಪತ್ರಿಕಾಗೊಷ್ಠಿಯಲ್ಲಿ ಶ್ರೀಮಠದ ದಾಸೋಹ ಸಮಿತಿ ಅಧ್ಯಕ್ಷ ದಾವಣಗೆರಿಯ ನ್ಯಾಯವಾದಿ ಪ್ರಕಾಶ ಪಾಟೀಲ, ಹರಿಹರದ ಹೆಚ್.ಪಿ ಬಾಬಣ್ಣ, ರಾಣಿಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರಸಭೆಯ ಮಾಜಿ ಸದಸ್ಯ ರಾಜಣ್ಣ ಮೊಟಗಿ, ಮುಖಂಡರಾದ ಸಿದ್ದುಚಿಕ್ಕಬಿದರಿ, ರಾಜಣ್ಣ ಬುಡ್ದನಗೌಡ್ರ, ಎನ್.ಡಿ ಪಾಟೀಲ, ದಾವಣಗೆರಿಯ ಜ.ಎಸ್ ಚನ್ನಬಸಪ್ಪ, ಬಿ.ಸಿ ಹನುಮಗೌಡ್ರ, ಹಾವೇರಿಯ ಡಾ| ಬಸವರಾಜ ವೀರಾಪುರ, ಸೋಮಣ್ಣ ಉಪಸ್ಥಿತರಿದ್ದರು.
(Photo : ಪಂಚಮಸಾಲಿ ಗುರುಪೀಠದ ಡಾ| ಹೆಚ್.ಪಿ ರಾಜಕುಮಾರ ಅವರು ಪತ್ರಿಕಾಗೊಷ್ಠಿ ನಡೆಸಿದರು.)




