ದಾವೋಸ್ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ನಾವು ಬೆಂಗಳೂರಿನಾಚೆಗೆ ಹೂಡಿಕೆ ಸೆಳೆಯಲು ನಡೆಸಿದ ಪ್ರಯತ್ನವು ಫಲ ನೀಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. RPSG ಸಮೂಹವು ನವೀಕರಿಸಬಹುದಾದ ಇಂಧನ ವಲಯದಲ್ಲಿ ಸುಮಾರು ₹10,000+ ಕೋಟಿಗೂ ಅಧಿಕ ಹೂಡಿಕೆ ಮಾಡುತ್ತಿದ್ದು ಈ ಹೂಡಿಕೆಯು ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗೆ ಸಿಗಲಿದೆ ಎಂದು ಹೇಳಿದ್ದಾರೆ.
ಕೋಕಾ-ಕೋಲಾ ಸಂಸ್ಥೆಯೊಂದಿಗೆ ಸಚಿವರು ನಡೆಸಿದ ಮಾತುಕತೆಯು ಫಲಪ್ರದವಾಗಿದ್ದು ಸಂಸ್ಥೆಯ ₹25,000+ ಕೋಟಿಗೂ ಅಧಿಕ ಹೂಡಿಕೆಯಲ್ಲಿ ವಿಜಯಪುರ ಜಿಲ್ಲೆಗೆ ಸಿಂಹಪಾಲು ದಕ್ಕಲಿದೆ ಎಂಬ ಭರವಸೆಯನ್ನು ಹೊಂದಿದ್ದಾರೆ.
ಐನಾಕ್ಸ್ GFL ಕುಷ್ಟಗಿಯ ಸಮೀಪ ಪವನ ವಿದ್ಯುತ್ ಬೃಹತ್ ಮೂಲಸೌಕರ್ಯ ನಿರ್ಮಾಣ ಮಾಡುವ ಆಸಕ್ತಿ ತೋರಿಸಿದೆ.
ನವೀಕರಿಸಬಹುದಾದ ಇಂಧನ, ಆಹಾರ & ಪಾನೀಯ, ಗ್ರೀನ್ ಇಂಡಸ್ಟ್ರಿ ಕ್ಷೇತ್ರಕ್ಕೆ ಹರಿದುಬರುತ್ತಿರುವ ಈ ಹೂಡಿಕೆಗಳು ಉತ್ತರ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಮಹತ್ವದ ಕೊಡುಗೆ ನೀಡಲಿವೆ ಮತ್ತು
ಉತ್ತರ ಕರ್ನಾಟಕದೆಡೆಗೆ ಬಂಡವಾಳ ಆಕರ್ಷಿಸುವ, ಸಮಗ್ರ ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪಿಸುವ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿಯಲಿದೆ ಎಂದು ಸಚಿವರು ತಮ್ಮ ಸೋಶಿಯಲ್ ಮಿಡಿಯಾ ದಲ್ಲಿ ಹಂಚಿಕೊಂಡಿದ್ದಾರೆ.





