ದೇಶಕ್ಕಷ್ಟೇ ಅಲ್ಲ…ಸ್ವಂತ ಪತ್ನಿಯಾದ ನನ್ನನ್ನು ಬಿಟ್ಟು ಓಡಿ ಹೋದ ನನಗೇ ಈ ಅನಕ್ಷರಸ್ಥ ಮೋದಿ ನಾಮ ಹಾಕಿ ಯಾಮಾರಿಸಿದ ಸತ್ಯ ಕಥೆ…
ಜಶೋಧಬೆನ್ ನರೇಂದ್ರಬಾಯಿ ಮೋದಿ ಎಂಬ ನತದೃಷ್ಟ ಹೆಣ್ಣುಮಗಳ ಕರುಣಾಜನಕ ಕಥೆ ವ್ಯಥೆ… ಈ ಹೆಣ್ಣುಮಗಳಿಗೆ ನಿಜವಾಗಲೂ ನ್ಯಾಯ ಸಿಗಬೇಕು…ಈ ದುಷ್ಟನ ಮುಖವಾಡ ದೇಶಕ್ಕೇ ಗೊತ್ತಾಗಬೇಕು.
ಈ ಹೆಣ್ಣುಮಗಳ ಹೆಸರು ನಮಗೆ ಗೊತ್ತಾಗಿದ್ದು 2014 ರಲ್ಲಿ ನರೇಂದ್ರ ಮೋದಿ ಭಾರತದ ಪ್ರದಾನಿಯಾದಾಗ.ನಂತರ RTI ಮುಖಾಂತರವೇ ಅವರ ಪೂರ್ವ ಇತಿಹಾಸವನ್ನು ಹೊರ ತೆಗೆಯಲಾಯಿತು.
ದೇಶಕ್ಕೆ ಬುದ್ದಿ ಹೇಳುವ,ಸುಳ್ಳು ಮತ್ತು ಮತಗಳ್ಳತನದಿಂದ ಅಧಿಕಾರದಲ್ಲಿರುವವರು ತಮ್ಮ ವೈಯಕ್ತಿಕ ಬದುಕಿನ ರಹಸ್ಯ ಕಾಪಿಟ್ಟುಕೊಳ್ಳಲು ಸತತ ವಿಫಲ ಪ್ರಯತ್ನ ನಡೆಸಿದರು.
ಜಶೋದಬೆನ್ ಸಾಂಪ್ರದಾಯಿಕವಾಗಿ ಹಸೆಮಣೆ ಹತ್ತಿದಾಗ 17 ರ ಹರೆಯದ ಬಾಲೆ ಕೈ ಹಿಡಿದು ಕಾಪಾಡಬೇಕಾದ ಗಂಡಸಿಗೆ 18 ವಯಸ್ಸು ಅದು 1968 ರಲ್ಲಿ ಮದುವೆ ಕನಸಿನಂತೆ ನಡೆದು ಹೋಯಿತು.
ಆಕೆ ಅತ್ತೆಯ ಮನೆಗೆ ಬರುವ ಹೊತ್ತಿಗೆ ಆಸಾಮಿ ನಾಪತ್ತೆ! ಮಹಾನುಭಾವ ಹಿಮಾಲಯಕ್ಕೆ ಹೊರಟುಹೋಗಿದ್ದರು.
ಅಲ್ಲಿಂದ ಬಂದು,” ಇಲ್ಲೇನು ಮಾಡುತ್ತಿರುವೆ. ನೀನು ನನ್ನ ಹಿಂದೆ ಬಿದ್ದರೆ ಉಪಯೋಗವಿಲ್ಲ.ನಾನು ಜಗತ್ತನ್ನು ಸುತ್ತಲು ಹೊರಟಿದ್ದೇನೆ. ನಿನ್ನ ಓದು ಮುಂದುವರೆಸಿ ನೀನೇ
ನೆಲೆ ಕಂಡುಕೋ” ಈ ಮಾತುಗಳನ್ನು ಆಡಿದ ಗಂಡನನ್ನು ಕುತೂಹಲ ಮತ್ತು ಅನುಮಾನದಿಂದ ನೋಡುತ್ತಲೇ ಜಶೋದಬೆನ್ ತನ್ನ ತವರಿಗೆ ಮರಳಿ ಬಂದು ಓದು ಮುಂದುವರೆಸುತ್ತಾರೆ.
ಗಂಡನೆಂಬ ಅಂಡಲೆಯುವ ಅಲೆಮಾರಿ
ತನ್ನ ಚಿಕ್ಕಪ್ಪನ ಚಹಾ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು RSS ಕಛೇರಿಯಲ್ಲಿ ಕಸ ಗುಡಿಸುತ್ತಾ ಹೇಗಲೇರಿದ ಶನಿಯ ಬಿಡುಗಡೆಗೆ ಏಳೂವರೆ ವರ್ಷಗಳು ಬದುಕಿನ ಕರ್ಮ ಸವೆಸುತ್ತಾರೆ.ಆಮೇಲೆ ಯುವನಾಯಕ ನಾಯಕನಾಗಿ ದೇಶ ಸಂಚಾರ ಸಂಘಟನೆಯಲ್ಲಿ ಮುಳುಗಿಹೋಗುತ್ತಾರೆ.
ಇಲ್ಲಿ ಜಶೋದಬೆನ್ ಓದು ಮುಗಿಸಿ ಉಪನ್ಯಾಸಕಿಯಾಗಿ ತನ್ನದೇ ಬದುಕನ್ನು ಕಟ್ಟಿಕೊಳ್ಳಲು ಹವಣಿಸುತ್ತಿರುವಾಗ ಮದುವೆಯ ಅರ್ಥ ಅನರ್ಥಗಳನ್ನು ಹುಡುಕುತ್ತಾ,ಕೇವಲ ಶಾಸ್ತ್ರಕ್ಕೆ ವರಿಸಿದ ಗಂಡನನ್ನು ನೆನೆದು ಕಣ್ಣೀರಾಗುತ್ತಾರೆ.
ಆಕೆಯ ನೋವಿಗೆ, ಕಣ್ಣೀರಿಗೆ ಪುಡಿಗಾಸಿನ ಬೆಲೆಯೂ ಇರುವುದಿಲ್ಲ. ತಂದೆಯ ಮನೆಯಿಂದ ಅಣ್ಣನ ಮನೆಗೆ ಎಡತಾಕುವ ಜಶೋದಬೆನ್ ಸಹೃದಯತೆಯ ಸಹೋದರರಲ್ಲೇ ಸಂತಸ ಹೊಂದಿ ಅವರ ಮಕ್ಕಳನ್ನು ತನ್ನದೆಂದು ಭಾವಿಸಿ ಬದುಕು ಸವೆಸುತ್ತಾರೆ.
ಇಲ್ಲಿ ನಮ್ಮ ಸಾಹೇಬರು ಮುಖ್ಯಮಂತ್ರಿಯಾಗಿ ಪ್ರದಾನಿಯಾಗಿ ಮೆರೆಯುತ್ತಿರುವಾಗಲೇ ವಿರೋಧ ಪಕ್ಷಗಳು ಪ್ರಧಾನಿಯ ಮೂಲ ಹುಡುಕಲು ಪ್ರಯತ್ನಿಸಿದ ಫಲವಾಗಿ ಮುಚ್ಚಿಟ್ಟ ಇಷ್ಟು ವಿವರಗಳು ಹೊರ ಬಿದ್ದವು.
ಹತ್ತು ವರ್ಷಗಳು ಈ ದೇಶದ ಪ್ರಧಾನಿಯಾಗಬೇಕಿದ್ದ ರಾಜೀವಗಾಂಧಿ ಕುಟುಂಬಕ್ಕೆ ವಿದೇಶಿ ಮೂಲದ ಕಳಂಕ ಹಚ್ಚಿ ದೂರಿಕರಿಸಿ ದೂರ ಇಟ್ಟ ತಪ್ಪಿಗೆ ಇವತ್ತು ಎಲ್ ಕೆ ಅಡ್ವಾಣಿ ಪಶ್ಚಾತ್ತಾಪ ಪಡುತ್ತಿರಬಹುದು.
ಭಾರತದ ಸೊಸೆಯ ಮತ್ತು ಮಕ್ಕಳ ವಿದೇಶಿ ಮೂಲವನ್ನು ಕೆಣಕಿದವರು ತಮ್ಮಪಕ್ಷದ ಪ್ರದಾನಿಯ ಮೂಲವನ್ನು ತಿಳಿಯುವ ಕನಿಷ್ಠ ದೇಶದ ಜನತೆಗೆ ತಿಳಿಸಬೇಕಾದ ಬದ್ಧತೆಯಿದೆಯೆಂದು ಭಾವಿಸುವುದಿಲ್ಲ.ಬೇರೆಯವರ ಮೂಲ ಹುಡುಕಿ ಕೆಣಕುವ ಮೂಲವ್ಯಾಧಿಗಳಿವರು.
ಆ ಹೆಣ್ಣುಮಗಳಿಗೆ ಕೊಡುವ ನಿರಂತರ ಕಾಟ ಇಷ್ಟಕ್ಕೇ ಮುಗಿಯಲಿಲ್ಲ.
ಯಶೋದಬೆನ್ ನರೇಂದ್ರ ಬಾಯಿ ಮೋದಿ ಎಂಬ ಹೆಸರನ್ನು ತಕ್ಷಣ ಬದಲಾಯಿಸುವಂತೆ ಆದೇಶಿಸಲಾಗುತ್ತದೆ.
ಇದು ಯಾವ ಸೀಮೆ ನ್ಯಾಯ ಗಂಡನ ಹೆಸರನ್ನು ಸೇರಿಸಿಕೊಂಡು ಬದುಕಿರುವ ಹಕ್ಕುಗಳನ್ನು ಕಸಿದುಕೊಳ್ಳಲು ಯತ್ನಿಸಿದ ಕ್ರೂರ ಮನಸ್ಥಿತಿಗೆ ಏನೆಂದು ಕರೆಯಬೇಕು.

ಇವರು ದೇಶೋದ್ದಾರಕರೇ ? ನಮ್ಮನ್ನು ಉದ್ದರಿಸಲು ಬಂದ ಮಹಾನುಭಾವರೇ ?
ತಾನು ಅಗ್ನಿಸಾಕ್ಷಿಯಾಗಿ ಸಂಪ್ರದಾಯಬದ್ಧವಾಗಿ ತಾಳಿ ಕಟ್ಟಿದ ಎಳೆ ಮನಸಿನ ಹೆಣ್ಣುಮಗಳನ್ನು ನಡುನೀರಿನಲ್ಲಿ ಬಿಟ್ಟು ಹೋದವನನ್ನು ನಾವು, ನಮ್ಮ ದೇಶದ ಹೆಣ್ಣುಮಕ್ಕಳು ಆರಾಧಿಬೇಕೇ ?
ಜಶೋಧಬೆನ್ ಚಿಮನ್ ಬಾಯ್ ಅಪ್ಪನ ಹೆಸರನ್ನು ಮಾತ್ರ ಸೇರಿಸುವಂತೆ ಗಂಡನ ಹೆಸರನ್ನು ಸೇರಿಸಿಕೊಳ್ಳದಂತೆ ಕಾನೂನಿನ ಮೂಲಕ ನೋಟಿಸು ಜಾರಿ ಮಾಡುತ್ತಾರೆ.
ಗುಜಾರಾತ್ ಇನ್ಫರ್ಮೇಶನ್ ಕಮೀಶನ್ ಮುಂದೆ ತಮ್ಮ ಕಾನೂನಬದ್ದವಾದ ಯಶೋಧಬೆನ್ ನರೇಂದ್ರ ಬಾಯಿ ಮೋದಿ ಹೆಸರಿಗಾಗಿ ಹೋರಾಟ ನಡೆಸುತ್ತಾರೆ.
ಆಗ ಖ್ಯಾತ ಅಂಕಣಕಾರ್ತಿ ಶೋಭಾ ಡೇ ಅವರು ಯಶೋಧಬೆನ್ ಅವರನ್ನು “ಸೂಪರ್ ಹೀರೋ” ಎಂದು ಗುಣಗಾನ ಮಾಡುತ್ತಾರೆ.
ಯಶೋಧಬೆನ್ ಅವರನ್ನು ಐವರು ಸೆಕ್ಯುರಿಟಿ ಗಾರ್ಡ್ಗಳು ಸುತ್ತುವರೆದಿರುತ್ತಾರೆ.ಅವರಿಗೆ ಊಟ ತಿಂಡಿ ವ್ಯವಸ್ಥೆ, ವಾಸ್ತವ್ಯಕ್ಕೆ ತಮ್ಮಿಂದ ಸಾಧ್ಯವಿಲ್ಲವೆಂದು ಗೋಳು ತೋಡಿಕೊಳ್ಳುತ್ತಾರೆ.
ಯಶೋಧಬೆನ್ ಸಾರ್ವಜನಿಕ ಸಾರಿಗೆಯ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರೆ,ಇತ್ತ ಈ ಐವರು ಬೆಂಗಾವಲು
ಎ ಸಿ ಕಾರಲ್ಲಿ ಹಿಂಬಾಲಿಸುತ್ತಾರೆ. ಆಕೆಗೆ ಗಂಡ ಉನ್ನತ ಹುದ್ದೆಗೆ ಏರಿದಂತೆಲ್ಲ ಸಂತೋಷದ ಬದಲು ಕಡು ಸಂಕಷ್ಟಗಳೇ ಎದುರಾಗುತ್ತವೆ.ಅವರಿಂದ ಮುಕ್ತಿ ನೀಡುವಂತೆ ಕೋರುತ್ತಾರೆ. ಏನೂ ಪ್ರಯೋಜನವಾಗುವುದಿಲ್ಲ.ಯಾವ ತಪ್ಪಿಗಾಗಿ ಈ ಶಿಕ್ಷೆ?
ಇದೀಗ ಜಶೋದಬೆನ್ ಎಂಬ ಹೆಣ್ಣುಮಗಳು ಮದುವೆಯಾಗಿ ಗಂಡನಿಲ್ಲದೆ ವರ್ಷಗಳು ಉರುಳಿದವು. ಗಂಗಾನದಿಯಲ್ಲಿ ಲಕ್ಷಾಂತರ ಹೆಣಗಳು ತೇಲಿ ಹೋದವು.ನಮ್ಮ ಭಾರತ ದೇಶದ ಪ್ರದಾನಿಗೆ ಕನಿಷ್ಠ ಸೌಜನ್ಯ ಹೃದಯವಂತಿಕೆ ಇದ್ದರೆ ಕೈ ಹಿಡಿದ ಹೆಂಡತಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸಬೇಕು. ಹೆಣ್ಣಿನ ಶಾಪ ಮತ್ತು ಕಣ್ಣೀರು ಆತನೊಂದಿಗೆ
ಇಡೀ ದೇಶವನ್ನು ಅವನತಿಗೆ ತಳ್ಳಿ ಕಣ್ಣೀರ ಕಡಲಲ್ಲಿ ತೋಯಿಸಿದೆ.
ನೊಂದ ಯಶೋಧಬೆನ್ ರೊಂದಿಗೆ ಇಡೀ ದೇಶದ ಹೆಣ್ಣುಮಕ್ಕಳು ಮತ್ತು ನಾವು ನಿಲ್ಲೋಣ….
- (ವೈ ಜಿ ಅಶೋಕ್ ಕುಮಾರ್)ಸಂಗ್ರಹ: ಹಾದಿಮನಿ ಟಿಎಫ್ ಫೇಸ್ಬುಕ್)





