ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2024 2025 ನೇ ಸಾಲಿನ ಗೌರವ ಪ್ರಶಸ್ತಿ 2024ನೇ ಸಾಲಿನ ಶಿಲ್ಪ ಶ್ರೀ ಪ್ರಶಸ್ತಿ ಹಾಗೂ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಹಾಗೂ ಬಹುಮಾನ ವಿತರಣ ಸಮಾರಂಭವನ್ನು ಕಲಾಗ್ರಾಮ ಮಲತಳ್ಳಿ, ಬೆಂಗಳೂರು ಇಲ್ಲಿ ದಿನಾಂಕ 15 -10-2026 ರಂದು ಏರ್ಪಡಿಸಲಾಗಿತ್ತು ಈ ಸಮಾರಂಭದಲ್ಲಿ ಇಲಾಖೆಯ ಮಾನ್ಯ ನಿರ್ದೇಶಕರಾದ ಡಾ ಕೆ ಎಂ ವಸುಂಧರಾ, ಕೆ ಎಂ ಎಸ್, ಇವರು ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಿದರು ಸಮಾರಂಭದಲ್ಲಿ ಶ್ರೀ ಕೆ ಬಿ ಕಿರಣ್ ಸಿಂಗ್, ಆಡಳಿತಾಧಿಕಾರಿಗಳು ಹಾಗೂ ಮಾನ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ವಿಶೇಷ ಕರ್ತವ್ಯ ಅಧಿಕಾರಿಗಳು, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ದತ್ತಿ ಪ್ರಶಸ್ತಿ ನೀಡುವ ಶ್ರೀ ಮನೋಹರ ಕಾಳಪ್ಪ ಪತ್ತಾರ ವಿಜಯಪುರ ಹಾಗೂ ಶ್ರೀಮತಿ ಸುಕನ್ಯಾ ಶ್ರೀನಿವಾಸ್ ಬೆಂಗಳೂರು ಇವರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಶ್ರೀ ಎಂ ಸಿ ರಮೇಶ್ ಅವರು ವಹಿಸಿದ್ದು, ಅಕಾಡೆಮಿಯ ರಿಜಿಸ್ಟರ್ ಆದ ಶ್ರೀ ಆರ್ ಚಂದ್ರಶೇಖರ್ ಅಕಾಡೆಮಿಯ ಸದಸ್ಯರುಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here