ಶಾಕಿಂಗ್ ಸುದ್ದಿ: ದುರ್ಗಾ ಪೂಜೆಯಿಂದ ಬರುತ್ತಿದ್ದ ನವದಂಪತಿ ಮೇಲೆ ದುಷ್ಟರ ಅಟಾಕ್; ಪತಿಯ ಕಣ್ಣೆದುರಲ್ಲೇ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆನ್‌ಲೈನ್ ಮೂಲಕ ಹಣ ಲೂಟಿ ಮಾಡಿದ 8 ಮಂದಿ ರಾಕ್ಷಸರು ಅರೆಸ್ಟ್!

ಬಿಹಾರದ ಈಸ್ಟ್ ಚಂಪಾರಣ್ ಜಿಲ್ಲೆಯಲ್ಲಿ ದುರ್ಗಾ ಪೂಜೆಗೆ ತೆರಳಿ ವಾಪಸ್ ಬರುತ್ತಿದ್ದ ನವದಂಪತಿಗಳನ್ನು ತಡೆದ ದುಷ್ಕರ್ಮಿಗಳು, ಪತಿಯ ಮೇಲೆ ಭೀಕರ ಹಲ್ಲೆ ನಡೆಸಿ ಆತನ ಕಣ್ಣೆದುರಲ್ಲೇ ಹೆಂಡತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಅತ್ಯಂತ ಕರಾಳ ಹಾಗೂ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬಿಹಾರದ ಈಸ್ಟ್ ಚಂಪಾರಣ್ ಜಿಲ್ಲೆಯ ಮಧುಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಬಂಜಾರಿಯಾ ಸರೇಹ್ಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಹೊಸದಾಗಿ ಮದುವೆಯಾಗಿದ್ದ ನವದಂಪತಿಗಳು ಅಕ್ಟೋಬರ್ 8ರಂದು ಮುಂಜಾನೆ 4 ಗಂಟೆ ಸುಮಾರಿಗೆ ದುರ್ಗಾ ಪೂಜೆ ಜಾತ್ರೆ ಮುಗಿಸಿಕೊಂಡು ವಾಪಸ್ ಮನೆಗೆ ಮರಳುತ್ತಿದ್ದರು.

​ಆ ಸಂದರ್ಭದಲ್ಲಿ ದಾರಿಯಲ್ಲಿ ಅಡ್ಡಗಟ್ಟಿದ 8 ಜನ ದುಷ್ಕರ್ಮಿಗಳು, ಪತಿಯನ್ನು ಮನಬಂದಂತೆ ಹಲ್ಲೆ ಮಾಡಿ, ಅವರ ಬಳಿಯಿದ್ದ ಹಣ ಹಾಗೂ ಆಭರಣಗಳನ್ನು ಕಸಿದುಕೊಂಡಿದ್ದಾರೆ. ನಂತರ ಆ ಯುವತಿಯನ್ನು ಹತ್ತಿರದ ಮಾವಿನ ತೋಟಕ್ಕೆ ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೆ, ಬೆದರಿಸಿ ಪತಿಯ ಖಾತೆಯಲ್ಲಿದ್ದ 3 ಸಾವಿರ ರೂಪಾಯಿಯನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ಪರಾರಿಯಾಗಿದ್ದಾರೆ.

ಘಟನೆಯ ಬಳಿಕ ನವದಂಪತಿಗಳು ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿ ಎಲ್ಲಾ 8 ಮಂದಿ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.

​ಬಂಧಿತ ಆರೋಪಿಗಳನ್ನು ಅಂಬಿಕೇಶ್ ತಿವಾರಿ (38), ರಿಂಕಿ ಕುಮಾರ್ (19), ಅಂಕುಶ್ ಕುಮಾರ್ (19), ರಾಹುಲ್ ಕುಮಾರ್ (19), ಕಾಂಚನ್ ಕುಮಾರ್ (18), ಮುನ್ನಾ ಕುಮಾರ್ (18), ರಣ್‌ಧೀರ್ ಕುಮಾರ್ (20) ಹಾಗೂ ಅಮಿತ್ ಕುಮಾರ್ (18) ಎಂದು ಗುರುತಿಸಲಾಗಿದೆ. ಇಂತಹ ಕ್ರಿಮಿನಲ್‌ಗಳಿಗೆ ಕಾನೂನಿನ ಮೂಲಕ ಕಠಿಣಾತಿ ಕಠಿಣ ಶಿಕ್ಷೆಯಾಗಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here